ಲೋಕದರ್ಶನ ವರದಿ
ಯಲಬುಗರ್ಾ 24: ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ನೂತನ ಕೃಷಿಯನ್ನು ಮುಂದುವರೆಸುವ ಅವಶ್ಯಕತೆ ಇದೆ, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಗತಿಸಿದರು ನಮ್ಮ ಭಾಗವನ್ನು ನೀರಾವರಿ ಮಾಡಲು ಆಗಲಿಲ್ಲಾ ನಮ್ಮ ಭಾಗದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಇದೆ ಆದರೆ ಇಗ ಯಾರನ್ನು ದೂಸಿಸುವ ಸಮಯ ಇದು ಅಲ್ಲಾ ನಮ್ಮ ಜವಾಬ್ದಾರಿಯನ್ನು ಪ್ರದಶರ್ಿಸಿ ಅನುಕೂಲ ಕಲ್ಪಿಸಿಕೊಳ್ಳುವ ಸಮಯ ಇದಾಗಿದೆ ಎಂದು ಹಾಲಪ್ಪ ಆಚಾರ ಹೇಳಿದರು.
ನಗರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಮ್ಮಿಕೊಂಡ ಹವಾಮಾನ ವೈಪರಿತ್ಯಾ ಹಾಗೂ ಕೃಷಿ ಪದ್ಧತಿ ಕುರಿತು ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಒಣ ಬೇಸಾಯ ಪದ್ದತಿ ಹಾಗೂ ಕೇವಲ ಮಳೆ ಆಶ್ರಿತ ಬೇಸಾಯವಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಯುವ ಪಿಳಿಗೆಯವರು ಹೊಸ ಕೃಷಿ ಪದ್ದತಿಯತ್ತ ಗಮನ ಹರಿಸಬೇಕು ಇತ್ತಿಚೀಗೆ ನಮ್ಮ ತಾಲೂಕಿನ ಕಲ್ಲಭಾವಿಯಲ್ಲಿ ಕೆರೆಯನ್ನು ಹುಳೆತ್ತುವ ಕಾರ್ಯಕ್ಕೆ ಜನತೆ ಮುಂದಾಗಿದ್ದು ಶ್ಲಾಘನೀಯವಾದ ಕಾರ್ಯವಾಗಿದೆ, ನಮ್ಮಲ್ಲಿ ಬಿದ್ದ ಮಳೆಯ ನೀರನ್ನು ತಡೆಯಿಡಿದು ಉಪಯೋಗಿಸಿಕೊಳ್ಳುವಲ್ಲಿಯೂ ನಾವು ಸಂಪೂರ್ಣ ವಿಫಲವಾಗಿದ್ದೇವೆ, ಆದ್ದರಿಂದ ಇನ್ನಾದರು ನಾವು ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಪಿಜಿ ಸೆಂಟರ್ ವಿಶೇಷ ಆಡಳಿತಾಧಿಕಾರಿ ಸಿ ಆಯ್ ಛಲವಾದಿ ಮಾತನಾಡಿ, ನಮ್ಮಲ್ಲಿ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಜನತೆ ಗುಳೆ ಹೊಗುತ್ತಿದ್ದಾರೆ ಇದರಿಂದ ಕ್ರಷಿಯ ಮೇಲೆ ಆಗಾದವಾದ ಕೆಟ್ಟ ಪರಿಣಾಮ ಬಿರುತ್ತಿದೆ, ರೈತ ದೇಶದ ಬೆನ್ನೆಲುಬು ಎನ್ನುತ್ತಿದ್ದೇವೆ ಅದರಂತೆ ಕೃಷಿಯೇ ನಮ್ಮ ದೇಶದ ಮೂಲ ಕಸಬಾಗಿದೆ ಅದು ನಶಿಸಿ ಹೊದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲಾ ನಾವು ನಮ್ಮಲ್ಲಿರುವ ನಿಸರ್ಗವನ್ನು ಉಪಯೋಗಿಸಿಕೊಳ್ಳುವ ಬದಲು ನಾಶ ಮಾಡಲು ಮುಂದಾಗಿರುವದೆ ಹವಮಾನ ವೈಪರಿತ್ಯಕ್ಕೆ ಮೂಲ ಕಾರಣವಾಗಿದೆ ಎಂದರು,
ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಮುಖಂಡ ಸಿ ಎಚ್ ಪೋಲಿಸ್ ಪಾಟೀಲ, ಪ್ರಾಂಶುಪಾಲರಾದ ಡಾ, ಶಿವರಾಜ ಗುರಿಕಾರ, ಭಾರತ ಹವಮಾನ ಇಲಾಖೆಯ ನಿದರ್ೆಶಕ ಸಿ ಆಯ್ ಪಾಟೀಲ ಮಾತನಾಡಿದರು.
ತಾಪಂ ಸದಸ್ಯ ಶರಣಪ್ಪ ಇಳಗೇರ, ಮುಖಂಡರಾದ ಬಸವಲಿಂಗಪ್ಪ ಭೂತೆ, ಶಿವನಗೌಡ ಬನ್ನಪ್ಪಗೌಡ್ರ, ವೀರಣ್ಣ ಹುಬ್ಬಳ್ಳಿ, ಹನುಮಂತಪ್ಪ ಕುರಿ, ಉಪನ್ಯಾಸಕರಾದ ಉಮಾಶಂಕರ್ ಹಿರೇಮಠ, ಕೆಂಚರಡ್ಡಿ ಸೇರಿದಂತೆ ಅನೇಕ ಕಾಲೇಜುಗಳ ಉಪನ್ಯಾಸಕರು ವಿದ್ಯಾಥರ್ಿಗಳು ಹಾಜರಿದ್ದರು.