ನಗರಸಭೆ ಅಧಿಕಾರಿಗಳು ತೆರವುಕಾರ್ಯಾಚರಣೆ
ಜಮಖಂಡಿ 05 : ಒತ್ತುವರಿ ಮಾಡಿಕೊಂಡಿದ್ದ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಜೆಸಿಬಿ ಮೂಲಕ ನಗರಸಭೆ ಅಧಿಕಾರಿಗಳು ತೆರವುಕಾರ್ಯಾಚರಣೆ ನಡೆಸಿದರು.
ನಗರದ ಭೂಮಿಕಾ ನಗರದಲ್ಲಿ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಒತ್ತುವರಿ ಮಾಡಿಕೊಂಡು ಮನೆ ಹಾಗೂ ಮನೆಯ ಕಂಪೌಂಡಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಮಳೆಗಾಲದಲ್ಲಿ ಹಳ್ಳದಲ್ಲಿನ ನೀರು ಸರಿಯಾಗಿ ಹರಿದು ಹೋಗದೆ ಅಲ್ಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಇದರಿಂದ ಹಳ್ಳದಲ್ಲಿನ ನೀರು ನಗರಸಭೆ ಉದ್ಯಾನವನ, ಖಾಲಿ ನಿವೇಶನಗಳಲ್ಲಿ ನೀರು ನುಗ್ಗುತ್ತಿತ್ತು. ಜೆಸಿಬಿ ಮೂಲಕ ಹಲವಾರು ಮನೆಗಳ ಕಂಪೌಂಡ್, ಮನೆಗಳನ್ನು ತೆರವುಗೊಳಿಸಿದರು.ಹಳ್ಳದ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ತರಹ ಒತ್ತಡಕ್ಕೆ ಮನೆಯದೆ ನ್ಯಾಯಯುತವಾಗಿ ಕಾರ್ಯಾಚರಣೆ ನಡೆಸಬೇಕು, ಇದರಲ್ಲಿ ಯಾರದರೆ ಹಿತಾಸಕ್ತಿಗೆ ಒಳಗಾದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದರು.ಅಮೃತ ನಗರೋಥ್ಥಾನ ಯೋಜನೆ ಅಡಿ 1, 5 ಕೋಟಿ ರೂ, ವೆಚ್ಚದಲ್ಲಿ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಅಭಿವೃದ್ದಿ ಪಡಿಸಲಾಗುತ್ತಿದೆ, ಅಕ್ರಮ ಒತ್ತುವರಿಯನ್ನು ತೆರವು ಮಾಡಿಕೊಳ್ಳವಂತೆ ಅಲ್ಲಿನ ನಿವಾಸಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದೆ ಅದರಂತೆ ತೆರವು ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಜ್ಯೋತಿ ಗೀರೀಶ ತಿಳಿಸಿದರು.ಈ ಸಂದರ್ಭದಲ್ಲಿ ಸುಭಾಸ ಚೌಗಲಾ, ಯಲ್ಲಪ್ಪ ಬಿದರಿ ಸೇರಿದಂತೆ ಅನೇಕರು ಇದ್ದರು.ಪೋಟೋ: ಜಮಖಂಡಿ ನಗರದ ಭೂಮಿಕಾ ನಗರದಲ್ಲಿನ ಲಂಡ್ಯಾನ ಹಳ್ಳದ ಒತ್ತುವರಿಯನ್ನು ನಗರಸಬೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.