ಟ್ರಾಫಿಕ್ ಜಾಮ್ಗಳನ್ನು ನಿವಾರಿಸಲು ದುರುಗಮ್ಮನ ಗುಡಿ ಕೆಳಸೇತುವೆಯನ್ನು ತೆರವುಗೊಳಿಸಿ, ಸೋಮಶೇಖರ್ ಗೌಡ
ಬಳ್ಳಾರಿ 28: ನಗರದಲ್ಲಿ ದುರುಗಮ್ಮನ ಗುಡಿ ಕೆಳ ಸೇತುವೆ ಜನ ಸಂಚಾರಕ್ಕೆ ತೆರವುಗೊಳಿಸಲು ಬಳ್ಳಾರಿ ನಾಗರೀಕ ಹೋರಾಟ ಸಮಿತಿ ಪ್ರತಿಭಟಿಸುವ ಮೂಲಕ ಆಗ್ರಹಿಸಿದೆ.ನಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದು, ದುರುಗಮ್ಮನ ಗುಡಿ ಕೆಳ ಸೇತುವೆ ದುರಸ್ತಿ ಕಾಮಗಾರಿ ಪ್ರಾರಂಭಿಸಿ 63 ದಿನ ಕಳೆದಿವೆ. ಬಳ್ಳಾರಿಯ ಜನತೆ ಇದೇ ತಿಂಗಳು ಅಂದರೆ ಜನವರಿ 26ರಂದು ತೆರವು ಮಾಡಬಹುದೆಂಬ ನೀರೀಕ್ಷೆಯಲ್ಲಿದ್ದರು. ಆದರೆ ಇಲ್ಲಿಯವರೆಗೆ ಸಾರ್ವಜನಿಕರ ಸಂಚಾರಕ್ಕೆ ಈ ಕೆಳಸೇತುವೆ ಬಂದ್ ಆದಿರುವುದರಿಂದ ಜನತೆ ದಿನಿತ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ಸತ್ಯನಾರಾಯಣ ಪೇಟೆ ರಸ್ತೆಯ ಹತ್ತಿರ, ಮೋತಿ ವೃತ್ತದ ಹತ್ತಿರ ಮೇಲ್ಸೇತುವೆ ಹತ್ತಿರ ದಿನಂಪ್ರತಿ ಟ್ರಾಫಿಕ್ ಜಾಮ್ ಆಗಿ ಜನತೆಗೆ ಅನಾನುಕೂಲತೆಯಾಗುತ್ತಿದೆ.ಆದ್ದರಿಂದ ಜನತೆಯ ಹಾಗೂ ಬಳ್ಳಾರಿಯ ಟ್ರಾಫಿಕ್ ಜಾಮ್ಗಳನ್ನು ನಿವಾರಿಸಲು ಈ ಕೂಡಲೇ ದುರುಗಮ್ಮನ ಗುಡಿ ಕೆಳಸೇತುವೆಯನ್ನು ತೆರವುಗೊಳಿಸಿ, ಸಂಚಾರಕ್ಕೆ ಸುಗಮ ಮಾಡಿಕೊಡಬೇಕು, ಪಾರದರ್ಶಕತೆ ಕಾಯ್ದೆ 2024ರನ್ವಯ ನಗರದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೆ ಕಾಮಗಾರಿ ಸ್ಥಳದಲ್ಲಿ ಸಾರ್ವಜನಿಕರ ಮಾಹಿತಿಗೆ ಕಾಮಗಾರಿ ಮಾಡುವ ಇಲಾಖೆ ಹೆಸರು, ಗುತ್ತಿಗೆದಾರನ ಹೆಸರು, ಅಂದಾಜು ವೆಚ್ಚ, ಕಾಲಮಿತಿಯನ್ನು ಸೂಚಿಸುವ ನಾಮಫಲಕ ಹಾಕುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಳ್ಳಾರಿ ನಾಗರೀಕ ಹೋರಾಟ ಸಮಿತಿ ಸಂಚಾಲಕರಾದ ಸೋಮಶೇಖರ ಗೌಡ, ಸದಸ್ಯರಾದ ಶಾಂತಾ, ಅಂತೋನಿ, ಚಂದ್ರಶೇಖರ, ಜಾಫರ್, ಡಾ.ಪ್ರಮೋದ್ ಇತರರು ಭಾಗವಹಿಸಿದ್ದರು.