ಧಾರವಾಡ 22: ಇಲ್ಲಿನ ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ)ವನ್ನು ಆಧುನೀಕರಣಗೊಳಿಸಿ ಮೇಲ್ದಜರ್ೇಗೇರಿಸುವ ಮೂಲಕ ಈ ಪ್ರದೇಶದಲ್ಲಿ ಉಂಟಾಗುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ನಗರದ ಬಿ ಆರ್ ಟಿ ಎಸ್ ಮುಖ್ಯ ನಿಲ್ದಾಣ, ಹಳೆಯ ಬಸ್ ನಿಲ್ದಾಣದಲ್ಲಿ ನೂತನವಾಗಿ ತಲೆ ಎತ್ತಿರುವ ಉಪನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ) ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಧಾರವಾಡ ಸಿಬಿಟಿ ಯನ್ನು ಬಹು ಅಂತಸ್ತಿನ ಕಟ್ಟಡವಾಗಿ ಅಭಿವೃದ್ಧಿಪಡಿಸಿ ಆಧುನೀಕರಣಗೊಳಿಸುವ ಯೋಚನೆ ಇದೆ.ಈ ಕ್ರಮದಿಂದ ಸಿಬಿಟಿ ಸುತ್ತಲಿನ ಪ್ರದೇಶಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯು ಕೂಡ ಪರಿಹಾರವಾಗಲಿದೆ.
ಅವಳಿನಗರದ ಮಧ್ಯೆ ಪ್ರಾಯೋಗಿಕವಾಗಿ ಪ್ರಾರಂಭವಾಗಿರುವ ಹುಬ್ಬಳ್ಳಿ ಧಾರವಾಡ ತ್ವರಿತ ಸಾರಿಗೆ ಸೇವೆ ( ಹೆಚ್ಡಿ ಬಿಆರ್ಟಿಎಸ್) ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ಸದ್ಯ 50 ಚಿಗರಿ ಬಸ್ ಗಳು ಸಂಚರಿಸುತ್ತಿವೆ, ಪೂರ್ಣ ಪ್ರಮಾಣದಲ್ಲಿ 150 ಬಸ್ ಗಳ ಸಂಚಾರ ಸೇವೆ ಆರಂಭವಾಗಲಿದೆ .ಬಳಿಕ ನಗರಸಾರಿಗೆ ಹಾಗೂ ಬೇಂದ್ರೆ ಬಸ್ ಗಳ ಸಂಖ್ಯೆ ಹಂತ ಹಂತವಾಗಿ ಕಡಿಮೆಯಾಗಲಿವೆ.ಬಿ ಆರ್ ಟಿ ಎಸ್ ಮಾರ್ಗದಲ್ಲಿಯೇ ಎಲ್ಲ ಚಿಗರಿ ಬಸ್ ಗಳು ಸಂಚರಿಸುವದರಿಂದ , ಅಕ್ಕ ಪಕ್ಕದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ.ಬಿಆರ್ ಟಿ ಎಸ್ ಮಾರ್ಗದಲ್ಲಿ ತುತರ್ು ಸೇವೆಗಳು ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ, ವಾಕರಸಾಸಂ ವ್ಯವಸ್ಥಾಪಕ ನಿದರ್ೇಶಕ ರಾಜೇಂದ್ರ ಚೋಳನ್, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ, ವಾಕರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ದೈವಜ್ಞ, ವಿಭಾಗೀಯ ಸಂಚಾರ ವ್ಯವಸ್ಥಾಪಕ ಅಶೋಕ ಪಾಟೀಲ, ಮಹಾನಗರಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತಿತರರು ಇದ್ದರು.
ಬಿ.ಆರ್.ಟಿ.ಎಸ್. ಬಸ್ ಮೂಲಕ ಆಗಮನ:
ಹುಬ್ಬಳ್ಳಿ ಯಿಂದ ಧಾರವಾಡದವರೆಗೆ ಬಿಆರ್ಟಿಎಸ್ ಬಸ್ನಲ್ಲಿಯೇ ಆಗಮಿಸಿದ ಸಚಿವರು ಬಸ್ ಸೇವೆ, ರಸ್ತೆ, ಪಾಕಿರ್ಂಗ್, ಪ್ರಯಾಣಿಕರಿಗೆ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.