ಸಿನಿಮಾ ಕ್ಷೇತ್ರ ಕೇವಲ ಬಣ್ಣಗಳ ಲೋಕವಲ: ಶೃತಿ ಕುಲಕಣರ್ಿ

ಲೋಕದರ್ಶನ ವರದಿ

ವಿಜಯಪುರ 04: ಸಿನಿಮಾ ಕ್ಷೇತ್ರ ಕೇವಲ ಬಣ್ಣಗಳ ಲೋಕವಲ್ಲ. ಅದು ಮಹಿಳೆಯರ ಪಾಲಿಗೆ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಅವುಗಳನ್ನು ಎದುರಿಸುವ ಸಾಮಥ್ರ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಕಲಬುರಗಿಯ ಚಲನಚಿತ್ರ ನಿಮರ್ಾಪಕಿ ಮತ್ತು ಉದ್ಯಮಿ ಶೃತಿ ಕುಲಕಣರ್ಿ ವಿದ್ಯಾಥರ್ಿನಿಯರಿಗೆ ಸಲಹೆ ನೀಡಿದರು.

ಮಹಿಳಾ ವಿವಿ ಜ್ಞಾನಶಕ್ತಿ ಆವರಣ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ಬೆಂಗಳೂರಿನ 'ಅವಳ ಹೆಜ್ಜೆ' ಸಂಸ್ಥೆ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿನೆಮಾ ಕ್ಷೇತ್ರದಲ್ಲಿ ಮಹಿಳಾ ಛಾಯಾಗ್ರಾಹಕಿಯರ, ಮಹಿಳಾ ಸಂಗೀತ ನಿದರ್ೇಶಕರ ಸಂಖ್ಯೆ ಅಪರೂಪ. 

ಆದ್ದರಿಂದ ವಿದ್ಯಾಥರ್ಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಿನೆಮಾ ಕ್ಷೇತ್ರವನ್ನು ಪ್ರವೇಶಿಸಲಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಸಿನಿಮಾಗಳು, ಕಿರುಚಿತ್ರಗಳನ್ನು ಕೇವಲ ಮನರಂಜನೆ ದೃಷ್ಠಿಕೋನದಿಂದ ನೋಡದೇ, ಮಹಿಳಾಪರ ದೃಷ್ಠಿಕೋನವನ್ನಿಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಅಂದಾಗ ಪಾತ್ರಗಳ ಪರಿಚಯ ಮತ್ತು ಉದ್ದೇಶ ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು. 

ಪತ್ರಿಕೆಯಲ್ಲಿ ಯಾವ ಸುದ್ದಿಗೆ ಯಾವ ಸ್ಥಾನ ನೀಡಿದ್ದಾರೆ ಎಂಬುದರ ಹಿಂದೆ ರಾಜಕಾರಣವಿರುತ್ತದೆ. ಅದನ್ನು ಅಥರ್ೈಸಿಕೊಳ್ಳಲು ಹಲವಾರು ಪತ್ರಿಕೆಗಳನ್ನು ಓದಬೇಕು ಮತ್ತು ವಿಶ್ಲೇಷಿಸಬೇಕು ಎಂದು ವಿದ್ಯಾಥರ್ಿನಿಯರಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಸುಗಂಧಿ ಗದಾಧರ ನಿದರ್ೇಶಿಸಿದ 'ದರೋಜಿ', ಐಶಾನಿ ಶೆಟ್ಟಿ ನಿದರ್ೇಶಿಸಿದ 'ಕಾಜಿ', ಮೇದಿನಿ ಕೆಳಮನೆ ನಿದರ್ೇಶಿಸಿದ 'ದಾಳಿ', ಕ್ಷೇಮಾ ಬಿ.ಕೆ. ನಿದರ್ೇಶಿಸಿದ 'ಅಪ್ರಾಪ್ತ', ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ. ರಾವ್, ಶ್ರದ್ಧಾ ಸುಮನ್ ನಿಮರ್ಿಸಿದ 'ಬೆಳ್ಳಿ ತಂಬಿಗೆ' ಕಿರು ಚಿತ್ರಗಳನ್ನು ಪ್ರದಶರ್ಿಸಲಾಯಿತು. 

ಈ ಕಿರು ಚಿತ್ರಗಳ ಪ್ರದರ್ಶನದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಅವಳ ಹೆಜ್ಜೆ ಸಂಸ್ಥಾಪಕಿ ಶಾಂತಲಾ ಧಾಮ್ಲೆ, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಪ್ರೊ.ಆರ್.ಸುನಂದಮ್ಮ, ಮಹಿಳಾಪರ ಹೋರಾಟಗಾತರ್ಿ ದು.ಸರಸ್ವತಿ ವಿದ್ಯಾಥರ್ಿನಿಯರೊಂದಿಗೆ ಸಂವಾದ ನಡೆಸಿದರು.  ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾಥರ್ಿನಿಯರು ಹೊರತಂದ ಮಹಿಳಾ ಧ್ವನಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದ ಸಂಯೋಜಕಿ ಉಷಾ ಸಂಪತ್ಕುಮಾರ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎ. ಖಾಜಿ, ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು