ಮೆಣಸಿನಕಾಯಿ ಬೆಳೆಯಲ್ಲಿ ಬೂದಿರೋಗದ ಹತೋಟಿ ಕ್ರಮಗಳು

ಗದಗ 04: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ಪ್ರದೀಪ ಬಿರಾದರ ವಿಷಯ ತಜ್ಞರು(ತೋಟಗಾರಿಕೆ) ಹಾಗೂ ತೋಟಗಾರಿಕೆ ಇಲಾಖೆ, ಕೊಪ್ಪಳದ ತೋಟಗಾರಿಕೆ ವಿಷಯ ತಜ್ಞರಾದ ವಾಮನಮೂತರ್ಿ ರವರು ಹಲಗೇರಿ ಗ್ರಾಮದ ಶ್ರೀ ಸಿದ್ದಪ್ಪ ಸಿಂದೋಗಿ ರವರ ಮೆಣಸಿನಕಾಯಿ ಬೆಳೆಗೆಗೆ ಭೇಟಿನೀಡಿ ಪರಿಶೀಲಿಸಿ, ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಲಾಗಿದೆ.

ಬೂದಿರೋಗ: 

ಲಕ್ಷಣಗಳು: ಬೂದಿರೋಗವು ಒಂದು ಶಿಲೀಂದ್ರದಿಂದ ಬರುತ್ತಿದ್ದು, ವಾತಾವರಣದಲ್ಲಿ ಆದ್ರ್ರತೆ ಕಡಿಮೆ ಇದ್ದಾಗ ಮತ್ತು ಉಷ್ಣತಾಮಾನ ಕಡಿಮೆ ಇದ್ದಾಗ ಅಂದರೆ ಚಳಿಗಾಲದಲ್ಲಿ ಈ ರೋಗವು ಕಂಡು ಬರುವುದು.  ಈ ರೋಗದ ಪ್ರಮುಖ ಲಕ್ಷಣಗಳೆಂದರೆ ಎಲೆಯ ಕೆಳಭಾಗದಲ್ಲಿ ಬೂದಿ ಬಣ್ಣದ ಶಿಲೀಂದ್ರ ಬೀಜಾಣುಗಳಿದ್ದು, ಎಲೆಯ ಮೇಲೆ ತಿಳಿ ಹಳದಿ ಬಣ್ಣದ ಚುಕ್ಕೆಗಳು ಕಾಣಿಸುವುದು.  ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತವೆ.  ಈ ರೋಗವು ಗಾಳಿಯ ಮುಖಾಂತರ ಪ್ರಸಾರವಾಗುವುದು.

ನಿರ್ವಹಣೆ: ಬೂದಿರೋಗದ ನಿಯಂತ್ರಣಕ್ಕಾಗಿ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾಬರ್ೆನ್ಡಜಿಮ್ ಅಥವಾ 1 ಗ್ರಾಂ ಬೆನೊಮಿಲ್ ಅಥವಾ 1 ಗ್ರಾಂ ಟ್ರೈಡೆಮೆಫಾನ್ ಅಥವಾ 0.5 ಗ್ರಾಂ ಮೈಕ್ಲೊಬ್ಯೂಟನಲ್ ಅಥವಾ 1.0 ಮಿ.ಲೀ. ಕೆರಥೇನ್ ಅಥವಾ 1 ಮಿ.ಲೀ ಪೆನ್ಕೊನಾಜೋಲ್ ಅಥವಾ 1 ಮಿ.ಲೀ. ಡೈಫೆನ್ ಕೊನಾಜೋಲ್ ಅಥವಾ 1 ಮಿ.ಲೀ. ಪ್ರೊಪಿಕೋನಾಜೋಲ್ ಪ್ರತಿ ಲೀಟರ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರದೀಪ ಬಿರಾದರ, ವಿಷಯ ತಜ್ಞರು (ತೋಟಗಾರಿಕೆ)- 9743064405 ಮತ್ತು ಬದರಿಪ್ರಸಾದ ಪಿ.ಆರ್., ವಿಷಯ ತಜ್ಞರು (ಕೃಷಿ ಕೀಟಶಾಸ್ತ್ರ)-9900145705, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ 08539 220305 ನ್ನು ಸಂಪಕರ್ಿಸಲು ಕೋರಿದೆ.