ಅಧ್ಯಕ್ಷೆಯಾಗಿ ಆಯ್ಕೆ: ಸಂಭ್ರಮಾಚರಣೆ

ಲೋಕದರ್ಶನ ವರದಿ

ಕಾಗವಾಡ 12:  ಶೇಡಬಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಮಹಾದೇವಿ ಶ್ರೀಕಾಂತ ಮಾಕನ್ನವರ ಇವರನ್ನು ಅಥಣಿ ತಹಸೀಲ್ದಾರ ಎಂ.ಎನ್.ಬಳಿಗಾರ ಆಯ್ಕೆಮಾಡಿ ಅಧಿಕಾರ ನೀಡಿದರು. 

ದಿ.10ರಂದು 18 ಸದಸ್ಯರನ್ನು ಹೊಂದಿರುವ ಶೇಡಬಾಳ ಪಟ್ಟಣ ಪಂಚಾಯತಿಯಲ್ಲಿ ಆಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು. ಮಹಾದೇವಿ ಮಾಕನ್ನವರ ಇವರು ಪರಿಶಿಷ್ಟ ಪಂಗಡ ವಿಭಾಗದಿಂದ ಚುನಾಯಿತರಾಗಿದ್ದರು. ಸರಕಾರದ ಆದೇಶದಂತೆ ಆಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿತ್ತು. ಅದರಂತೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮಹಾದೇವಿ ಮಾಕನ್ನವರ ಇವರ ಮೇಲೆ ಅವಿಶ್ವಾಸ ಗೊತ್ತವಳಿ ಮಾಡಿ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. ತಮ್ಮ ಮೇಲೆ ಅನ್ಯಾಯವಾಗಿದೆ ಎಂದು ನ್ಯಾಯಾಲಯ ಮೋರೆ ಹೋಗಿದ್ದರು. ಈಗ ಅವರನ್ನು ಮತ್ತೇ ಆಧ್ಯಕ್ಷರಾಗಿ ಅಧಿಕಾರ ನೀಡುವ ಆದೇಶ ನ್ಯಾಯಾಲಯ ನೀಡಿದ್ದರಿಂದ ತಹಸೀಲ್ದಾರರು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು.