ಹುಬ್ಬಳ್ಳಿಯಲ್ಲಿ ಚಿಣ್ಣರ ಕಲರವ 2025-ಮಕ್ಕಳಿಗೆ ಪ್ರತಿಭೆ ಪ್ರದರ್ಶಿಸುವ ವೇದಿಕೆ

Chinnara Kalarava 2025 in Hubli – A platform for children to showcase their talents

ಹುಬ್ಬಳ್ಳಿಯಲ್ಲಿ ಚಿಣ್ಣರ ಕಲರವ 2025-ಮಕ್ಕಳಿಗೆ ಪ್ರತಿಭೆ ಪ್ರದರ್ಶಿಸುವ ವೇದಿಕೆ 

ಹುಬ್ಬಳ್ಳಿ 04: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಂ.ಆರ್‌.ಸಾಖರೆ ಶಾಲೆ (ಕೆಎಲ್‌ಇ ಸೊಸೈಟಿ) ಆವರಣದಲ್ಲಿ ಯೂಥ್ ಫಾರ್ ಸೇವಾ ಹುಬ್ಬಳ್ಳಿ ಘಟಕ ಹಾಗೂ  ಏಐಇ ಶಿಕ್ಷಣ ಸಂಸ್ಥೆ ವತಿಯಿಂದ ರವಿವಾರ ನಡೆದ ಚಿಗುರು  ಕಾರ್ಯಕ್ರಮವು ( ಚಿಣ್ಣರ ಮೇಳ)2024-25 ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ನಾಡಗೀತೆಯೊಂದಿಗೆ ಶುರುವಾಗಿ ಗೌರವಾನ್ವಿತ ಮುಖ್ಯ ಅತಿಥಿಗಳು ಡಾಕ್ಟರ್ ಪ್ರಕಾಶ್ ತಿವಾರಿ, ವಿಶೇಷ ಆಹ್ವಾನಿತರು  ಶ್ರೀಭಾಸ್ಕರ್ ಕೇಶವಮೂರ್ತಿ, ಙಈಖ ನ ಸಲಹಾ ಮತ್ತು ಸಂಚಲ ಸಮಿತಿ ಸದಸ್ಯರು ಭಾರತಾಂಬೆಗೆ  ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಪೂಜೆ ಮತ್ತು ಪುಷ್ಪಾರ್ಚನೆ  ನೆರೆವೇರಿಸಿದರು.ಈ ಕಾರ್ಯಕ್ರಮಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಮತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು  ಉತ್ತಮ ರೀತಿಯಾದ ಶಿಕ್ಷಣವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ,  ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಹಲವಾರು ರೀತಿಯ ಪ್ರತಿಭೆಯನ್ನು ಹೊಂದಿದವರು ಆಗಿರುತ್ತಾರೆ.  

ಅಂತಹ ಮಕ್ಕಳಿಗೆ ಸೂಕ್ತವಾದ ರೀತಿಯ ವಾತಾವರಣವನ್ನು ಕಲ್ಪಿಸಬೇಕು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಕ್ಕಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಏಐಇ   ಯೂನಿವರ್ಸಿಟಿಯ ಉಪಕುಲಪತಿಗಳು ಡಾಕ್ಟರ್ ಪ್ರಕಾಶ್ ತಿವಾರಿ ಸರ್ವರ್ ತಿಳಿಸಿದರು.  ಈ ಕಾರ್ಯಕ್ರಮದಲ್ಲಿ ವಿಶೇಷ ಆವಾನಿತರಾದ ಶ್ರೀಯುತ ಭಾಸ್ಕರ್ ಕೇಶವಮೂರ್ತಿ ಙಈಖ ಅಖಖ ಊಜಚಿಜ ಬೆಂಗಳೂರು ಮಾತನಾಡುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸ್ಪರ್ದೆಗಳಲ್ಲಿ ವಿಜೆತರಾಗುವ ಮಕ್ಕಳಿಗೆ ಶುಭಾಶಯ ಕೋರುತ್ತ ಹಿನ್ನಡೆಯಾಗುವ ವಿದ್ಯಾರ್ಥಿಗಳು ಅದನ್ನು ಸೋಲು ಎಂದುಕೊಳ್ಳದೇ ಮುಂದೆ ದೊಡ್ಡ ಅವಕಾಶವಿದೆ ಎಂದುಕೊಲ್ಳಬೇಕು ಎಂದು ಹೇಳಿದರು.   

ಯೂಥ್ ಫಾರ್ ಸೇವಾ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಕೆ ಎಫ್ ಕಮ್ಮಾರ್ ಫ್ರಾನ್ಸ್ಪಾಲರು ಕಿಮ್ಸ್‌ ಮೆಡಿಕಲ್ ಕಾಲೇಜ್ ಅಧ್ಯಕ್ಷೀಯ ನುಡಿ   ಮಾತನಾಡಿದರು.ವೈಎಫ್‌ಎಸ್ ಸಲಹಾ ಸಮಿತಿ ಸದಸ್ಯರಾದ ಡಾ: ಸಂಜಯ್ ಕೋಟಬಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ. ಸಂದೀಪ ಬೂದಿಹಾಳ ಸ್ವಾಗತ  ಮತ್ತು ಪರಿಚಯ ಭಾಷಣ ಮಾಡಿದರು,. ಜ್ಯೋತಿ ಹೆಗಡೆ ನಿರೂಪಿಸಿದರು.