ಧಾರವಾಡ 11: ಮಕ್ಕಳು ಬರೀ ಮಾಕ್ಸರ್್ ತೆಗೆಯಲಿಕ್ಕೆ ಎಂಬ ಭ್ರಮೆಗೊಳಗಾಗಿದ್ದರಿಂದ ಪಠ್ಯೇತರ ಚಟುವಟಿಕೆಗಳೆಂದರೆ ಮಾಕ್ಸರ್್ ಹೆಚ್ಚು ತಗೆಯಲು ರೋಡ ಬ್ರೆಕರ್ಸ್ ಇದ್ದಂತೆ ಎಂಬ ಭಾವನೆ ಬೆಳೆಸಿಕೊಂಡ ಪರಿಣಾಮ ಇಂದು ಮಕ್ಕಳು ಪಾಲಕರಿಗೆ ಗೊತ್ತಿಲ್ಲದೇ ಮಾನಸಿಕ ಹಿಂಸೆಗೆ ಒಳಪಟ್ಟು ಒಳಗೊಳಗೆ ನರಳುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ (ಡೈಟ್) ಉಪನಿದರ್ೇಶಕ ಅಬ್ದುಲ್ವಾಜಿದ ಖಾಜಿ
ಹೇಳಿದರು.
ಅವರು ಸೃಜನಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಣ್ಣರ ಚಿಲುಮೆ ಮಕ್ಕಳ ನಾಟಕ ಯೋಜನೆಯ ಬೆಳಗಾವಿ ವಿಭಾಗ ಮಟ್ಟದ ಐದು ದಿನಗಳ ಮಕ್ಕಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಂದು ಮಗು ನಾಟಕ ಆಡುವುದರಿಂದ ಹಲವಾರು ಕಲಿಕೆಗೆ ಪೂರಕವಾದ ಗುಣಗಳು ವೃದ್ಧಿಸುವವು. ಯಾವ ಮಗು ನಾಟಕದಲ್ಲಿ ಪಾತ್ರನಿರ್ವಹಿಸುತ್ತದೋ ಆ ಮಗು ಎಂಥ ಸಮಸ್ಯೆಗಳನ್ನೂ ಎದುರಿಸುವ ಗುಣ ಬೆಳಸಿಕೊಳ್ಳುತ್ತದೆ. ಎಲ್ಲರೊಟ್ಟಿಗೆ ಬಾಳುವ ಗುಣ ಬೆಳೆಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಅವನ ಭಾಷಾ ಶುದ್ಧತೆ ಹೆಚ್ಚುವದು, ಸಹಜವಾಗಿ ಜ್ಞಾಪಕ ಶಕ್ತಿ ವೃದ್ಧಿಸುವುದು. ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬ ಸಂಪರ್ಕ ಕೌಶಲ ಬೆಳೆಯುವುದು. ಹೀಗೆ ಒಂದು ಮಗು ಒಂದು ನಾಟಕದಲ್ಲಿ ಭಾಗವಹಿಸುವ ಮೂಲಕ ಒಂದು ವರ್ಷ ಕಲಿಕೆಯಲ್ಲಿ ಉಳಿದ ಮಕ್ಕಳಿಗಿಂತ ಮುಂದು ಹೋಗುತ್ತಾನೆ ಎಂದ ಕ್ಷೇತ್ರ ಶಿಕ್ಷಣಾಧಿಕಾರಿ ಎ ಎ ಖಾಜಿ, ಇಂಥ ಮಕ್ಕಳ ನಾಟಕ ಉತ್ಸವಗಳು ಹೆಚ್ಚು ಹೆಚ್ಚು ನಡೆದು ಮಕ್ಕಳಿಗೆ ಅವಕಾಶಗಳು ದೊರೆಯುವಂತಾಗಬೇಕು. ಆ ಮೂಲಕ ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ಗುರುತಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ಪ್ರತಿ ಮಗು ಬಾಲ್ಯದಲ್ಲಿಯೇ ನಾಟಕವನ್ನು ಆಡುತ್ತಿರುತ್ತದೆ. ಅಪ್ಪ ಮನೆಗೆ ಬಂದನೆಂದರೆ ಆಟವಾಡುವುದನ್ನು ಬಿಟ್ಟು ಓದುವ ನಟನೆ ಮಾಡುವುದು. ಅಮ್ಮ ಊಟಕ್ಕೆ ಕರೆದರೆ ಸೆಡವು ಮಾಡಿಕೊಂಡು ಇಲ್ಲದ ನೆವ ಹೇಳುವ ನಟನೆ ಮಾಡುವುದು ಇವು ನಿತ್ಯ ಅವರಿಗೆ ಗೊತ್ತಿಲ್ಲದೇ ಮನೆಯಲ್ಲಿ ಹಲವು ರೀತಿಯಲ್ಲಿ ನಟಿಸುತ್ತಿರುತ್ತಾರೆ. ಆದರೆ ಒಂದು ವಿಷಯದ ಮೇಲೆ ಬೇರೊಂದು ಪಾತ್ರದ ನಟನೆ ಮಾಡುವಾಗ ಮಗು ಸಹಜವಾಗಿಯೇ ವಿವಿಧ ಪಾತ್ರಗಳ ಗುಣಗಳ ಪರಿಚಯವಾಗುತ್ತದೆ. ಆ ಮೂಲಕ ವಿಶಾಲಮನೋಭಾವನೆ ಮಗುವಿನಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕೆ.ಎಚ್. ನಾಯಕ ಹಾಗೂ ಎಂ. ಎಂ. ಚಿಕ್ಕಮಠ ನಾಟಕಗಳ ವೀಕ್ಷಕರಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಯೋಜನೆಯ ರಾಜ್ಯ ಸಮನ್ವಯ ಸಂಚಾಲಕ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಸಮಿತಿ ಸದಸ್ಯೆ ಸುನಂದಾ ನಿಂಬನಗೌಡರ ಕಾರ್ಯಕ್ರಮ ನಡೆಸಿಕೊಟ್ಟರು. ವಿಭಾಗ ಸಮಿತಿಯ ಸದಸ್ಯೆ ಪ್ರಮಿಳಾ ಜಕ್ಕನ್ನವರ ವಂದಿಸಿದರು. ನವಲೂರ ಸರಕಾರಿ ಶಾಲೆಯ ಮಕ್ಕಳು ಮತ್ತು ಮುಂಡರಗಿಯ ಜಾಲವಾಡಿಗಿ ಸರಕಾರಿ ಶಾಲೆಯ ಮಕ್ಕಳು ಪ್ರದಶರ್ಿಸಿದ ನಾಟಕವನ್ನು ಶಾರದಾ ಶಾಲೆಯ ಐದನೂರು ಮಕ್ಕಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಲಿಂಗೇಶ್ವರ ಸಾಮಾಜಿಕ ಅಭಿವೃದ್ಧಿ ಸೇವಾ ಸಂಸ್ಥೆ ಪ್ರಸ್ತುತ ಪಡಿಸಿದ ಪ್ರೀತಿಯ ಕಾಳು ನಾಟಕ ಹಾಗೂ ಚಿಲಿಪಿಲಿ ಸಂಸ್ಥೆ ಪ್ರಸ್ತುತ ಪಡಿಸಿದ ನಾವು ನೀವು ಫ್ರೆಂಡ್ಸ್ ಅಲ್ವಾ ನಾಟಕ ಪ್ರದರ್ಶನಗೊಂಡವು.