ಕಷ್ಟಕ್ಕೆ ಕುಗ್ಗದೇ ಮಕ್ಕಳು ಪ್ರತಿಭೆಯನ್ನು ಬೆಳಕಿಗೆ ಚೆಲ್ಲಬೇಕು: ಮಾಳಗಿ

ಕಷ್ಟಕ್ಕೆ ಕುಗ್ಗದೇ ಮಕ್ಕಳು ಪ್ರತಿಭೆಯನ್ನು ಬೆಳಕಿಗೆ ಚೆಲ್ಲಬೇಕು: ಮಾಳಗಿ  

ಲೋಕದರ್ಶನ ವರದಿ

ಬೆಳಗಾವಿ: ಅರ್ಷ ವಿದ್ಯಾ ಆಶ್ರಮದ ಮಕ್ಕಳಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಂಡು ಪ್ರತಿಭಾವಂತರಾಗುವದು ಅವಶ್ಯವಿದ್ದು, ಇದಕ್ಕಾಗಿ ಆಶ್ರಮದ ಪದಾಧಿಕಾರಿಗಳ, ಶಿಕ್ಷಕರ ಪಾತ್ರವೂ ಮುಖ್ಯವಾಗಿದೆಯೆಂದು  ಶ್ರೀಧರ ಮಾಳಗಿ  ಹೇಳಿದರು.

ನಗರದ ಟಿಳಕವಾಡಿಯಲ್ಲಿ ಹಿಂದವಾಡಿಯ ಕ್ರಾಂತಿ ಮಹಿಳಾ ಮಂಡಳ ವಂತಿಯಿಂದ ಆಯೋಜಿಸಲಾಗಿದ್ದ ಗುರುವಾರ 22 ರಂದು ಅರ್ಷ ವಿದ್ಯಾ ಆಶ್ರಮದಲ್ಲಿ ಕನರ್ಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ರಂದು ಸಾಹಿತ್ಯ ಹಾಗು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಗೈದವರ ಸನ್ಮಾನ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.

ಚಿಕ್ಕ ವಯಸ್ಸಿನಲ್ಲಿಯೇ ನಾನು ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡ ದುಖಃದಲ್ಲಿ ಮುಳುಗಿ ಹೋಗದೇ ನನ್ನಲ್ಲಿರುವ ಈಜುವ ಪ್ರತಿಭೆಗೆ ಬೆಳಕಿಗೆ ತರುವ ಪ್ರಯತ್ನ ಮಾಡಿದ್ದೆನೆ. ಮಕ್ಕಳಿಗೆ ಯಾವುದೇ ಕಷ್ಟ ಬಂದರು  ಕುಗದೇ ಜೀವನ ಉತ್ತಮ ಗುರಿಯನ್ನು ಮುಟ್ಟಬೇಕೆಂದರು.  ಈಜುವ ತರಬೇತಿಕೊಟ್ಟ ಪ್ರಥಮ ಗುರುವಾದ   ಉಮೇಶ ಕಲಘಟಗಿಯವರನ್ನು ನೆನೆಸುತ್ತಾ ವಿದ್ಯಾಭ್ಯಾಸದ ಜೊತೆಗೆ ಅಂತರಾಷ್ಟ್ರೀಯ ಈಜುಗಾರ ಹೇಗಾದೆ ಎಂಬ ತಮ್ಮ ಅನುಭವ ಹಂಚಿಕೊಂಡರು. 

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಾಗು  ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತೆ ಕವಿತ್ರಿ ಶಬಾನಾ ಅಣ್ಣಿಗೇರಿ ಹಾಗು ಅಂತರಾಷ್ಟ್ರ ಖ್ಯಾತಿಯ ಈಜುಗಾರ ಶ್ರೀಧರ ಮಾಳಗಿ ಇವರನ್ನು ಸನ್ಮಾನಿಸಲಾಯಿತು. 

ಕ್ರಾಂತಿ ಮಹಿಳಾ ಮಂಡಳದ ಪ್ರಭಾರಿ ಅಧ್ಯಕ್ಷ ರತ್ನ   ಗುಡೇರ ಎಲ್ಲರನ್ನು ಸ್ವಾಗತಿಸುತ್ತಾ, ಮಕ್ಕಳ ದಿನಾಚರಣೆ ಕೇವಲ ಸಾಂಕೇತಿಕವಾಗದೆ ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಸುವತ್ತ ಪಾಲಕರು ಪಣತೊಡುವ ದಿನವಾಗಲಿಎಂದರು. 

ಕಾರ್ಯದಶರ್ಿ ತ್ರಿಶಲಾ ಪಾಯಪ್ಪನರ ಪ್ರಾಸ್ತಾವಿಕವಾಗಿ ಮಂಡಳದ ಸಾಮಾಜಿಕ ಕಾರ್ಯಗಳ ಪರಿಚಯಮಾಡಿಕೊಟ್ಟರು. ದೀಪ್ತಿ ಕಾಗವಾಡ ಮತ್ತು ಜ್ಯೋತಿ ಜಂತಿ ಇವರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದರ್ಶನಾ ನಿಲಜಗಿ ಹಾಗು ಪುಷ್ಪಾ ನಿಲಜಗಿ ಅತಿಥಿಗಳನ್ನು ಪರಿಚಯಿಸಿದರು. ಅಕ್ಷತಾ ಪಾಟೀಲ ನಿರೂಪಿಸಿದರು. ಪ್ರೇಮಲತಾ ಬಡವನ್ನವರ ವಂದಿಸಿದರು.