ವಿಜಯಪುರ 15: ಶಹರವನ್ನೊಳಗೊಂಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಹಾಗೂ ಖಾಸಗಿ ವಾಹನಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಶಾಲೆ ಕಾಲೇಜುಗಳಿಗೆ ತೆರಳುವುದು ಕಂಡು ಬಂದಿದ್ದು, ಈ ಪ್ರಯುಕ್ತ ಪೊಲೀಸ್ ಅಧೀಕ್ಷಕರು, ವಿಜಯಪುರ ರವರ ಮಾರ್ಗದರ್ಶನದಲ್ಲಿ ದಿ. 14ರಂದು ಬೆಳಿಗ್ಗೆ 07.30 ಗಂಟೆಯಿಂದ 10.30 ಗಂಟೆಯ ನಡುವಿನ ಅವಧಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಡಿಎಸ್ಪಿ ವಿಜಯಪುರ, ಬ.ಬಾಗೇವಾಡಿ ಹಾಗೂ ಇಂಡಿ ಉಪ-ವಿಭಾಗ ರವರುಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಸಿಪಿಐ ರವರುಗಳು ವಿಜಯಪುರ ಶಹರವನ್ನೊಳಗೊಂಡು ಜಿಲ್ಲೆಯಾದ್ಯಂತ ಎಲ್ಲ ಪಿಎಸ್ಐ ರವರು ತಮ್ಮ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಲಾ ಹಾಗೂ ಖಾಸಗಿ ವಾಹನಗಳನ್ನು ಪರಿಶೀಲಿಸಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಹಾಕಿಕೊಂಡು ಹೋಗುವ ವಾಹನಗಳ ವಿಡಿಯೋ ರಿಕಾಡರ್ಿಂಗ್ ಮತ್ತು ಛಾಯಾಚಿತ್ರ ಮಾಡಲಾಯಿತು.
ಅದೇ ದಿನ ಸಾಯಂಕಾಲ 05.30 ಗಂಟೆಗೆ ವಿಜಯಪುರ ಶಹರದ ಪೊಲೀಸ್ ಕವಾಯತು ಮೈದಾನದಲ್ಲಿ ಹಾಗೂ ಜಿಲ್ಲೆಯ ಎಲ್ಲಾ ವೃತ್ತ ನಿರೀಕ್ಷಕರ, ಕಛೇರಿಗಳಲ್ಲಿ ಶಾಲಾ ವಾಹನ, ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲಿಕರನ್ನು ಕರೆಯಿಸಿ ಮಿತಿ ಮೀರಿ ಮಕ್ಕಳನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುವುದನ್ನು ತಿದ್ದಿಕೊಳ್ಳಲು/ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿದ್ದು, ಒಂದು ವೇಳೆ ಮಿತಿ ಮೀರಿ ವಿದ್ಯಾಥರ್ಿಗಳನ್ನು ವಾಹನಗಳಲ್ಲಿ ತುಂಬಿದ್ದು ಕಂಡು ಬಂದರೆ ಅಂಥವರ ಪರವಾನಗಿ ರದ್ದುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ವಾಹನಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ವಾಹನಗಳಲ್ಲಿ ಹತ್ತಿಸಿಕೊಂಡು ಶಾಲೆಗೆ ಬಿಡಬೇಕು, ಸಾಮಥ್ರ್ಯಕ್ಕಿಂತ ಮಿತಿ ಮೀರಿ ಮಕ್ಕಳನ್ನು ಹಾಕಿದರೆ ಕಾನೂನು ಉಲ್ಲಂಘಿಸಿದಂತಾಗುತ್ತದೆ. ವಾಹನಗಳನ್ನು ಜೋರಾಗಿ ನಿಷ್ಕಾಳಜಿತನದಿಂದ ನಡೆಸಬಾರದು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಸೂಚನೆಗಳನ್ನು ನೀಡಿದ್ದು ಇರುತ್ತದೆ.
ದಿ. 15ರಂದು ಮಾಧ್ಯಾಹ್ನ 12.00 ಗಂಟೆಗೆ ವಿಜಯಪುರ ಶಹರದಲ್ಲಿ ಪೊಲೀಸ್ ಚಿಂತನ ಹಾಲ್ನಲ್ಲಿ ಪೊಲೀಸ್ ಅಧೀಕ್ಷಕರು, ವಿಜಯಪುರ ರವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ, ಡಿಎಸ್ಪಿ ವಿಜಯಪುರ ಉಪ-ವಿಭಾಗ, ಡಿಡಿಪಿಐ, ಡಿಡಿಪಿಯು, ಆರ್ಟಿಓ, ಬಿಇಓ ವಿಜಯಪುರ ರವರುಗಳ ನೇತೃತ್ವದಲ್ಲಿ ನಗರದ ಶಾಲೆಗಳ ವ್ಯವಸ್ಥಾಪಕರು, ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರುಗಳ ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಯಲ್ಲಿ ಮಕ್ಕಳಿಗೆ ಸಮರ್ಪಕ ವಾಹನಗಳ ವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕೈಕೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು ಇರುತ್ತದೆ.
ದಿ. 31ರೊಳಗೆ ಮೇಲ್ಕಂಡಂತೆ ಮಕ್ಕಳಿಗೆ ಸಮರ್ಪಕ ವಾಹನಗಳ ವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವ್ಯವಸ್ಥೆಗಳನ್ನು ಕಾರ್ಯ ಯೋಜಿತಗೊಳಿಸುವಂತೆ ನೋಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ತದನಂತರ ಲೋಪಗಳೆನಾದರೂ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು.