ಲೋಕದರ್ಶನ ವರದಿ
ಬೆಳಗಾವಿ: ಮಕ್ಕಳು ದೇಶದ ಆಸ್ತಿ. ಅವರಿಗೆ ಆಟ ಪಾಟದ ಜೊತೆಗೆ ಕ್ರಿಯಾತ್ಮಕತೆಯನ್ನು ಬೆಳೆಸಬೇಕು. ಇದರಿಂದ ಅವರು ದೇಶದ ಸುಧೃಢ, ಆರೋಗ್ಯವಂತ ಪ್ರಜೆಗಳಾಗುವದರಲ್ಲಿ ಎರಡು ಮಾತಿಲ್ಲ ಎಂದು ಕೆ ಎಲ್ ಇ ಯು ಎಸ್ ಎಮ್ ನಿದರ್ೇಶಕ ಡಾ.ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು. ಅವರು ಇಂದು ಯಳ್ಳೂರ ರಸ್ತೆಯಲಿನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳ ಮೆದುಳಿನ ವಿಕಾಸವು 3 ವರ್ಷದಿಂದ ಹಿಡಿದು 15 ವರ್ಷದ ವರೆಗೆ ನಡೆಯುತ್ತದೆ. ಈ ಕಾರ್ಯದಲ್ಲಿ ಅವರಿಗೆ ಕ್ರಿಯಾತ್ಮಕತೆ, ಆಧ್ಯಾತ್ಮಕತೆ, ಸಾಂಸ್ಕೃತಿಕ ಅಂಶಗಳನ್ನು ಅವರ ಕಲಿಕೆಯ ಒಂದು ಭಾಗವಾಗಿಸಿದರೆ ಅವರು ದೇಶದ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಾ ತಂದೆ ತಾಯಿ ಭಂದು ಬಳಗ ಗುರುಗಳು ಸಹಪಾಠಿಗಳು ಮಹತ್ತರವಾದ ಪಾತ್ರವನ್ನು ನಿರ್ವಹಿಸುವದರಿಂದ ಆರೋಗ್ಯಯುತ ಸಮಾಜ ನೀಮರ್ಾಣ ಸುಲಲಿತವಾಗುತ್ತದೆ. ಎಂದು ಮಗುವಿನ ಸವರ್ಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಕರೆ ನೀಡಿದರು.
ಅಥಿತಿಯಾಗಿ ಆಗಮಿಸಿದ ಕೆ ಎಲ್ ಇ ಹೂಮಿಯೂಪಥಿ ಕಾಲೇಜಿನ್ ಪ್ರಾಂಶುಪಾಲರಾದ ಡಾ. ಎಮ್ ಎ ಉಡಚನಕರ ಅವರು ಪ್ರಾಚೀನ ಕಾಲದ ಬಾಲ್ಯದ ಜೀವನ ಹಾಗೂ ಆಧುನಿಕ ಬಾಲ್ಯದ ಜೀವನ ಪದ್ದತಿಯ ವ್ಯತ್ಯಾಸವನ್ನು ಮಕ್ಕಳಿಗೆ ತಿಳಿಹೇಳಿದರು ಹಾಗೂ ತಮ್ಮ ಬಾಲ್ಯದ ಜೀವನ ಮತ್ತು ನೆನಪುಗಳನ್ನು ಹಂಚಿಕೂಂಢರು.
ಇನ್ನೂಬ್ಬ ಅತಿಥಿಯಾಗಿ ಆಗಮಿಸಿದ ಕೆ ಎಲ್ ಇ ನಸರ್ಿಂಗ ಕಾಲೇಜಿನ್ ಪ್ರಾಂಶುಪಾಲರಾದ ವಿಕ್ರಾಂತ ನೇಸರಿ, ಇಗಿನ ಮಕ್ಕಳು ಮೂಬೈಲ್ ಮತ್ತು ವಿಡಿಯೋ ಗೇಮಗಳಿಗೆ ದಾಸರಾಗದೆ ನೈಸಗರ್ಿಕ ಚಟುವಟಿಗೆಗಳಲ್ಲಿ ತಮ್ಮನ್ನು ಭಾಗವಿಹಿಸಿಕೊಳ್ಳಬೇಕು ಮತ್ತು ಜಂಕ ಪುಡ್ ಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.
ಇನ್ನೊಬ್ಬ ಅಥಿತಿಯಾಗಿ ಆಗಮಿಸಿದ ವಂಡರ್ ಕಿಡ್ಸ ಪ್ರಾಶುಂಪಾಲರಾದ ಸುಚೇತಾ, ಇವರು ಮಕ್ಕಳನ್ನು ವಿಧ್ಯಾಥರ್ಿಗಳಂತೆ ಕಾಣದೆ ಅವರನ್ನು ಒಬ್ಬ ಸ್ನೇಹಿತನಾಗಿ ಕಂಡು ಅವರ ಮಾನಸಿಕ ಸ್ಥಿತಿಗತಿಗಳನ್ನು ಮನಗಂಡು ಅವರ ಸದೃಡ ಜೀವನಕ್ಕೆ ಅನುವು ಮಾಡಿ ಕೊಡುಬೇಕೆಂದು ಪಾಲಕರಿಗೆ ತಿಳಿಹೇಳಿದರು.
ಈ ಸಂಧರ್ಬದಲ್ಲಿ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್.ಕಡ್ಡಿ, , ಡಾ.ಸುರೇಶ ಖಾಕಂಡಕಿ ಡಾ, ಅನಿತಾ ಮೋದಗೆ, ಡಾ ಸೌಮ್ಯ, ವೇರನೇಕರೆ, ಡಾ.ಸಂತೋಷಕುಮಾರ ಡಾ.ಪ್ರೀತಿ, ಹಾಗೂ ವಂಡರ ಕಿಡ್ಸ ವಿಧ್ಯಾಥರ್ಿಗಳು, ಸಾರ್ವಜನಿಕರು, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಗೀತಾ ಕಡ್ಡಿ ನಿರೂಪಿಸಿದರು, ಡಾ.ಸುರೇಶ ಖಾಕಂಡಕಿ, ಸ್ವಾಗತಿಸಿದರು, ಡಾ.ಸೌಮ್ಯ ವಂದಿಸಿದರು.