ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪ್ರೋತ್ಸಾಯ ನೀಡಬೇಕು

ಲೋಕದರ್ಶನ ವರದಿ

ರಾಯಬಾಗ 20: ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ನಿಗಾ ವಹಿಸಬೇಕು. ಅವರ ಶೈಕ್ಷಣಿಕ ಚಟುವಟಿಕೆಗಳನ್ನು ತಿಳಿದುಕೊಂಡು ಸೂಕ್ತ ಸಲಹೆ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಭಜಂತ್ರಿ ಹೇಳಿದರು.

ದಿ.19ರಂದು ಸಂಜೆ ಪಟ್ಟಣದ ಇಕ್ರಾಉದರ್ು ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕೆಂದರು. 

ಅಧ್ಯಕ್ಷತೆಯನ್ನು ಆರ್ಟಿಎಮ್ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಮುಲ್ಲಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯಪುರ ಆಲ್ಅಮೀನ್ ಮೇಡಿಕಲ್ ಕಾಲೇಜ್ನ ಪ್ರೊ. ಡಾ.ಅಮೀರ ಖುಸ್ರೋಖ್ವಾಜಿ, ಬಿಡಿಸಿಸಿ ಬ್ಯಾಂಕ್ ನಿದರ್ೇಶಕ ಅಪ್ಪಾಸಾಬ ಕುಲಗುಡೆ, ಮುಖ್ಯೋಪಾಧ್ಯಾಯ ಹಜರತ್ಸೈಯದ್ ಮುಜಾವರ, ಮುಜವೀರ ಮುಲ್ಲಾ, ಮೌಲಾನಾಅರೀಫ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಶಾಲಾ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.