ಲೋಕದರ್ಶನ ವರದಿ
ತಾಳಿಕೋಟೆ 29:ಶಾಲೆಗೆ ಆಗಮಿಸುವ ಮಕ್ಕಳಿಗೆ ಪೌಂಷ್ಠಿಕಾಂಶಕ ಆಹಾರ ನೀಡಬೇಕೆಂಬ ಉದ್ದೇಶದೊಂದಿಗೆ ಸಕರ್ಾರವು ಮುಂದಾಗಿದ್ದರೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಂ.ಎಸ್.ಕರಕಳ್ಳಿ ಎಂಬವರು ಬಿಸಿಊಟಕ್ಕೆ ಸಂಬಂದಿಸಿದ ಬೇಳೆ, ಮತ್ತು ಅಕ್ಕಿಗಳಲ್ಲಿ ಬಾಳು ಹುಳ, ನುಸಿ ಇದ್ದಂತವುಗಳನ್ನೇ ಮಕ್ಕಳಿಗೆ ಬೇಯಿಸಿ ಹಾಕಲು ನೀಡಿರುವದು ಬೆಳಕಿಗೆ ಬಂದಿದ್ದು ಬೇಯಿಸಿ ನೀಡಿದ ಬಿಸಿಊಟದೊಂದಿಗೆ ಗ್ರಾಮಸ್ಥರಿಗೆ ಕರೆಯಿಸಿ ದಿಡೀರನೇ ಶಾಲಾ ಮಕ್ಕಳೇ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ತುಂಬಗಿ ಗ್ರಾಮದಲ್ಲಿ ನಡೆದಿದೆ.
ತುಂಬಗಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮುಖ್ಯೋಪಾಧ್ಯಾಯಿ ಕರಕಳ್ಳಿ ಅವರು ಬಾಳುಹುಳ ಮತ್ತು ನುಸಿ ಇದ್ದಂತವುಗಳನ್ನೇ ತಮ್ಮ ಮಕ್ಕಳಿಗೆ ದಿನನಿತ್ಯ ಬೇಯಿಸಿ ಹಾಕುತ್ತಿದ್ದಾರೆಂಬ ಸುದ್ದಿ ಗ್ರಾಮದ ತುಂಬೇಲ್ಲಾ ಹರಡುತ್ತಿದ್ದಂತೆಯೇ ಶಾಲೆಯತ್ತ ದಾವಿಸಿದ ಸಾವಿರಾರು ಜನರು ಮುಖ್ಯೋಪಾಧ್ಯಾಯಿನಿ ಕರಕಳ್ಳಿ ಅವರನ್ನು ಹಾಗೂ ಅಡುಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಮಯದಲ್ಲಿ ಉಪಸ್ಥಿತ ಶಾಲಾ ಮಕ್ಕಳು ಸುಮಾರು 15 ದಿನಗಳಿಂದ ಇದೇ ರೀತಿ ಹುಳಗಳಿರುವ ಬೆಳೆಯನ್ನು ಅನ್ನವನ್ನು ಬೇಯಿಸಿ ಹಾಕುತ್ತಿದ್ದಾರೆ ತಟ್ಟೆಯಲ್ಲಿ ಅನ್ನ ಬಿಟ್ಟರೆ ಮುಖ್ಯೋಪಾಧ್ಯಾಯಿನಿ ಕರಕಳ್ಳಿಯವರು ಹೊಡೆಯಲು ಬರುತ್ತಾರೆ ಇಂತಹ ಹುಳಗಳಿರುವ ಅನ್ನವನ್ನು ಒಂದು ತುತ್ತು ತಿನ್ನುವಷ್ಠರಲ್ಲಿಯೇ ವಾಂತಿಬಂದಂತಾಗುತ್ತದೆ ಇಂತಹದನ್ನು ಹೇಗೆ ತಿನ್ನಬೇಕೆಂದು ತಟ್ಟೆಯಲ್ಲಿಯ ಅನ್ನವನ್ನು ಪಾಲಕರಿಗೆ ತೋರಿಸಿ ಅಳಲನ್ನು ತೋಡಿಕೊಳ್ಳಲು ಆರಂಬಿಸಿದರು.
ಮಕ್ಕಳಿಂದ ಸಮಗ್ರ ವಿಷಯವನ್ನು ಅರೀತ ಗ್ರಾಮಸ್ಥರು ಹಾಗೂ ಮಕ್ಕಳ ಪಾಲಕರು ಮುಖ್ಯೋಪಾಧ್ಯಾಯಿನಿ ಕರಕಳ್ಳಿ ಅವರನ್ನುಕೂಡಲೇ ಅಮಾನತುಗೊಳಿಸಬೇಕೆಂದು ಮಕ್ಕಳ ಜೊತೆಯಲ್ಲಿಯೇ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಂಯೋಜಕ ಆರ್.ಎಸ್.ಶಿಕಳವಾಡಿ, ಸಿಆರ್.ಸಿ. ಎಸ್.ಆರ್.ವಾಲಿಕಾರ ಹಾಗೂ ಪಿ.ಎಸ್.ಆಯ್.ಜಿ.ಎಸ್.ಬಿರಾದಾರ ಅವರು ಪ್ರತಿಭಟನಾ ನಿರತ ಮಕ್ಕಳಿಂದ ಹಾಗೂ ಪಾಲಕರನ್ನು ಸಮಾದಾನ ಪಡೆಸಲು ಪ್ರಯತ್ನಿಸಿದರಾದರೂ ಶಾಲಾ ಮಕ್ಕಳು ಹಾಗೂ ಪಾಲಕರು ಮುಖ್ಯೋಪಾಧ್ಯಾಯಿ ಕರಕಳ್ಳಿ ಅವರನ್ನು ಅಮಾನತ್ತು ಗೊಳಿಸಬೇಕು ದಿನನಿತ್ಯ ಮಕ್ಕಳಿಗೆ ಬಾಳು ಹುಳ ಮತ್ತು ನುಸಿ ಇರುವಂತಹ ಬೇಳೆ ಅನ್ನವನ್ನು ಬೇಯಿಸಿ ಹಾಕುತ್ತಿದ್ದಾರೆ ಮಕ್ಕಳ ಜೀವಕ್ಕೆ ಏನಾದರೂ ಆದರೆ ಯಾರು ಹೊಣೆ ಕನಿಷ್ಠ ಪಕ್ಷ ಬಾಳು ಹುಳ ಮತ್ತು ನುಸಿ ಇರುವಂತಹ ಬೆಳೆಯನ್ನು ಸ್ವಚ್ಚಗೊಳಿಸಿ ತೊಳೆದು ಬೇಯಿಸಿ ನೀಡಬೇಕು ಅದನ್ನು ಕೂಡಾ ಮಾಡಿಲ್ಲಾ ಸಾಕಷ್ಟು ಕಡೆಗಳಲ್ಲಿ ಇಂತಹ ಬೇಜವ್ಬಾರಿ ಮುಖ್ಯೋಪಾಧ್ಯಯರಿಂದ ಏಷ್ಟೋ ಮಕ್ಕಳು ಜೀವಕಳೆದುಕೊಂಡಿದ್ದಾರೆ ಅದೇ ರೀತಿ ನಮ್ಮ ಗ್ರಾಮದಲ್ಲಿ ಆಗಬೇಕೆ? ಎಂದು ಪ್ರಶ್ನೀಸಿದ ಅವರು ಇಂತಹ ಆಹಾರವನ್ನು ನಿಮ್ಮ ಮಕ್ಕಳಿಗೆ ನೀಡಿದರೆ ನಿವೇನು ಮಾಡುತ್ತಿದ್ದೀರಿ ಕೂಡಲೇ ಇಂತಹ ಬೇಜವ್ಬಾರಿ ಮುಖ್ಯೋಪಾಧ್ಯಾಯಿನಿ ಕರಕಳ್ಳಿ ಅವರನ್ನು ಅಮಾನತುಗೊಳಿಸಬೇಕು ಅಲ್ಲಿಯವರೆಗೆ ಎಲ್ಲ ಶಿಕ್ಷಕ ವೃಂದದವರನ್ನು ಹಾಗೂ ಅಡುಗೆ ಸಿಬ್ಬಂದಿಯವರನ್ನು ಕೂಡಿ ಹಾಕುತ್ತೇವೆಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದರು.
ಸದರಿ ವಿಷಯ ಕುರಿತು ಸಿಆರ್ಸಿ ಎಸ್.ಆರ್.ವಾಲಿಕಾರ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರೊಂದಿಗೆ ದೂರವಾಣಿ ಮುಖಾಂತರ ಸಂಪಕರ್ಿಸಿ ಘಟನೆಯ ವಿವರಣೆಯನ್ನು ನೀಡಿದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಶಾಲಾ ಮಕ್ಕಳ ಹಾಗೂ ಪಾಲಕರ ದೂರನ್ನು ಲೀಖಿತವಾಗಿ ಪಡೆದುಕೊಳ್ಳುವದರೊಂದಿಗೆ ಮುಖ್ಯೋಪಾಧ್ಯಾಯಿನಿ ಕರಕಳ್ಳಿ ಅವರ ಮೇಲೆ ಮೇಲಾಧಿಕಾರಿಗಳ ಮೂಲಕ ಸೂಕ್ತ ಕ್ರಮ ಕ್ರಮಕೈಗೊಳ್ಳಲಾಗುವದೆಂದು ಬರವಸೆ ನೀಡಿದ ನಂತರ ಪ್ರತಿಭಟನಾ ನಿರತ ಪಾಲಕರು ಮಕ್ಕಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಸದರಿ ವಿಷಯ ಕುರಿತು ತುಂಬಗಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಟ್ಟಿ ನೀಡಿ ಪರಿಶೀಲಿಸಲಾಗಿ ಬಿಸಿಊಟಕ್ಕೆ ಬೇಯಿಸಿದ ಅಡುಗೆಯಲ್ಲಿ ಬಾಳುಹುಳ ಮತ್ತು ನುಸಿಗಳು ಕಂಡುಬಂದಿದೆ ಮಕ್ಕಳ ಹಾಗೂ ಪಾಲಕರ ದೂರಿನನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ವರಧಿ ಸಲ್ಲಿಸುತ್ತೇನೆ. ಎಸ್.ಆರ್.ವಾಲಿಕ ಸಿಆರ್ಸಿ ಸುಮಾರು 15 ದಿನಗಳಿಂದಲೂ ಬಾಳು ಹುಳ ಮತ್ತು ನುಸಿ ಇರುವ ಬೇಳೆ ಅಕ್ಕಿಯನ್ನು ಬೇಯಿಸಿ ಊಟಕ್ಕೆ ನೀಡುತ್ತಾರೆ ಅದನ್ನು ತಿನ್ನದಿದ್ದರೆ ಮುಖ್ಯೋಪಾಧ್ಯಾಯಿ ಕರಕಳ್ಳಿ ಅವರು ಹೊಡೆಯುತ್ತಾರೆ ಇಂತಹ ಅಡುಗೆ ತಿಂದು ಸಾಕಷ್ಟು ಭಾರಿ ಎಲ್ಲರೂ ವಾಂತಿ ಮಾಡಿಕೊಂಡಿದ್ದೇವೆ ತುಂಬಗಿ ಗ್ರಾಮದ ಶಾಲಾ ಮಕ್ಕಳು ಬಾಳು ಹುಳ, ನುಸಿ ಇದ್ದಂತವುಗಳನ್ನೇ ಮಕ್ಕಳಿಗೆ ಅಡುಗೆ ಮಾಡಿ ನೀಡಿದ್ದಾರೆಂಬ ದೂರು ಬಂದಿದೆ ಈ ವಿಷಯ ಕುರಿತು ನಮ್ಮ ಇಲಾಖೆಯ ಶಿಕ್ಷಣ ಸಂಯೋಜಕ ಮತ್ತು ಸಿಆರ್ಸಿ ಅವರು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿದ್ದಾರೆ ಸಿಆರ್ಸಿ ಅವರು ಸಮಗ್ರ ವರಧಿ ನೀಡಿದ ಮೇಲೆ ಮುಖ್ಯೋಪಾಧ್ಯಾಯಿನಿ ಮತ್ತು ಅಡುಗೆ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ.