ಶಿಕ್ಷಕರೊಂದಿಗೆ ಪೋಷಕರು ಕೈ ಜೋಡಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಸುಭದ್ರ: ಬಳ್ಳಾರಿ

ಶಾಲೆಯ ವಾಷರ್ಿಕೋತ್ಸವ ಕಾರ್ಯಕ್ರಮವನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿದರು.

ಲೋಕದರ್ಶನ ವರದಿ

ಬ್ಯಾಡಗಿ27: ಮೊಬೈಲ್ ಸೇರಿದಂತೆ ಇಂಟರ್ನೆಟ್ನ ಅತಿಯಾದ ಬಳಕೆಯಿಂದ ಮಕ್ಕಳ ಹವ್ಯಾಸವೇ ಬೇರೆಯಾಗುತ್ತಿದೆ, ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರು ಕತ್ತಲೆ ಜಗತ್ತಿನ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತಿದ್ದಾರೆ, ಶಿಕ್ಷಣದಿಂದ ಸಂಪದ್ಭರಿತ ರಾಷ್ಟ್ರವಾಗಬೇಕಾದಲ್ಲಿ ಪೋಷಕರು ಶಿಕ್ಷಕರೊಂದಿಗೆ ಕೈ ಜೋಡಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಸುಭದ್ರವಾಗಿರಲು ಸಾಧ್ಯವೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

   ಮೋಟೆಬೆನ್ನೂರಿನ ಬಿಆರ್ಈ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮದ ಶಾಲೆಯ ವಾಷರ್ಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ್ದರು.

    ನಂತರ ಮಾತನಾಡಿದ ಅವರು, ಮೊಬೈಲ್ ಬಳಕೆಯಿಂದಲೇ ಹೆಚ್ಚು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ, ಸದ್ಭಳಕೆ ಮಾಡಿಕೊಂಡಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗಲಿದೆ.

   ಇನ್ನೂ ಸ್ಪಧರ್ಾತ್ಮಕ ಯುಗದಲ್ಲಿ ಪುರಷರಷ್ಟೇ ಸರಿಸಮನಾಗಿ ಎಲ್ಲ ರಂಗಗಳಲ್ಲಿಯೂ ಮಹಿಳೆ ಮುನ್ನುಗ್ಗುತ್ತಿದ್ದು, ಆ ಕಾರಣಕ್ಕಾಗಿ ಪ್ರತಿಯೊಬ್ಬ ಪಾಲಕರು ಹೆಣ್ಣು ಮಕ್ಕಳಿಗೂ ಸರಿಸಮ ಶಿಕ್ಷಣ ಕೊಡಿಸಿ ಸ್ವಯಂ ಉದ್ಯೋಗದಲ್ಲಿ ತೊಡಗುವ ಮೂಲಕ ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದರು.

   ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ಲ ಮಾತನಾಡಿ, ಶಾಲೆಗಳ ಗಂಟೆ ಸದ್ದು ಯಾವ ದೇಶದಲ್ಲಿ ಹೆಚ್ಚು ಕೇಳುತ್ತದೆಯೋ ಅಂತಹ ದೇಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಈ ನಿಟ್ಟಿನಲ್ಲಿ ಜ್ಞಾನದ ಹಸಿವನ್ನು ತೀರಿಸಿ ಮಕ್ಕಳ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ, ಆದರೆ ಇತ್ತೀಚಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರತೀಯ ಸಂಸ್ಕೃತಿ ಘನತೆಯನ್ನು ಹೆಚ್ಚಿಸುವಂತಹ ಅಂಶಗಳು ಇಲ್ಲದಿರುವುದು ವಿಷಾದಕರ ಸಂಗತಿ, ಗುರುಕುಲ ಪದ್ಧತಿ ಶಿಕ್ಷಣವು ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಮಹತ್ತರವಾದ ಗುರಿ ಹೊಂದಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪುರಾತನ ಗುರು ಪರಂಪರೆಯ ಕುರುಹುಗಳು ನಾಪತ್ತೆಯಾಗಿವೆ ಎಂದರು.

       ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು, ಇದರಲ್ಲಿ ಹೆಣ್ಣು ಶಿಶು ಹತ್ಯೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ನೃತ್ಯ ರೂಪಕವು ನೆರೆದಿದ್ದ ಪ್ರೇಕ್ಷಕರ ಮನರಂಜಿಸಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದಶರ್ಿ ಎಸ್.ಆರ್.ಬಳ್ಳಾರಿ, ಕೋಶಾಧ್ಯಕ್ಷ ಚನ್ನವೀರಪ್ಪ ಬಳ್ಳಾರಿ, ಆಡಳಿತಾಧಿಕಾರಿ ಸಿ.ಸಿ.ಪ್ರಭುಗೌಡ್ರ, ಶಿವಬಸಪ್ಪ ಕುಳೇನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.