ಮಕ್ಕಳ ದಿನಾಚರಣೆ

ಲೋಕದರ್ಶನ ವರದಿ

ಕಂಪ್ಲಿ14: ತಾಲೂಕು ಸಮೀಪದ ಪ್ರಭು ಕ್ಯಾಂಪ್ನ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ, ಹೊಸಪೇಟೆ ಡಾನ್ ಬಾಸ್ಕೋ, ಚೈಲ್ಡ್ ಲೈನ್, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ಗ್ರಾಮ ಸಭೆ, ಮಕ್ಕಳ ರಕ್ಷಣೆ ಕುರಿತು ಮುಕ್ತ ಸಂವಾದ ಸಮುದಾಯ ಸಭೆ ಹಾಗೂ ಮಕ್ಕಳ ದಿನಾಚರಣೆ ನಡೆಯಿತು. 

        ಸಭೆಯಲ್ಲಿ ನಂ.10 ಮುದ್ದಾಪುರ, ಯಲ್ಲಮ್ಮ ಕ್ಯಾಂಪ್, ಪ್ರಭುಕ್ಯಾಂಪ್, ಕಣಿವಿ ತಿಮ್ಮಲಾಪುರ, ನಂ.5 ಬೆಳಗೋಡು ಹಾಳ್ ಗ್ರಾಮಗಳ ಸಕರ್ಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಾಲ್ಗೊಂಡು, ಶಿಕ್ಷಕರ ನೇಮಕ ಮಾಡಬೇಕು. ಕೊಠಡಿ, ರಕ್ಷಣಾ ಗೋಡೆ ನಿಮರ್ಿಸಬೇಕು. ಕೊಠಡಿಗಳ ಮೇಲ್ಛಾವಣಿ ದುರಸ್ತಿ ಮಾಡಬೇಕು. ಶೌಚಾಲಯ, ಮೂತ್ರಾಲಯ ನಿಮರ್ಿಸಬೇಕು. ನೀರಿನ ಟ್ಯಾಂಕ್, ಶಾಲೆ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರು ಒದಗಿಸಬೇಕು. ಆಟದ ಸಾಮಾಗ್ರಿ, ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ, ಸ್ಮಾಟರ್್ ಕ್ಲಾಸ್, ಕಂಪ್ಯೂಟರ, ಬಸ್ ವ್ಯವಸ್ಥೆ ಸೇರಿದಂತೆ ನಾನಾ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು. 

  ಗ್ರಾಪಂ ಪಿಡಿಒ ಬೀರಲಿಂಗ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಯಾ ಶಾಲೆಯ ಮುಖ್ಯಗುರುಗಳು ವೈಯಕ್ತಿಕ ಇಚ್ಛಾಶಕ್ತಿ ತೋರಬೇಕು. 2017-18ರ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಕೇಳಿದ್ದ ನಾನಾ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಯಲ್ಲಮ್ಮ ಕ್ಯಾಂಪ್, ಪ್ರಭುಕ್ಯಾಂಪ್, ಕಣಿವಿ ತಿಮ್ಮಲಾಪುರ ಶಾಲಾ ಕಾಂಪೌಂಡ್, ಪ್ರಭುಕ್ಯಾಂಪ್ನ ಅಂಗವನಾಡಿ ಕೇಂದ್ರ ಕಟ್ಟಡ, ಕಾಂಪೌಂಡ್, ನಿಮರ್ಿಸಿದ್ದೇವೆ. 

    ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಎಚ್.ಸಿ.ರಾಘವೇಂದ್ರ ಮಾತನಾಡಿ, ಗ್ರಾಮ ಪಂಚಾಯಿತಿ ಸ್ಥಳೀಯ ಸಕರ್ಾರವಾಗಿದ್ದು, ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಮಕ್ಕಳ ಗ್ರಾಮ ಸಭೆ ವರ್ಷಕ್ಕೊಂದು ನಡೆಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

  ಎಎಸ್ಐ ಸಿ.ಪರಶುರಾಮ ಮಾತನಾಡಿದರು. ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್ ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ, ಉಪಾಧ್ಯಕ್ಷ ವೈ.ಉಮೇಶ, ಸದಸ್ಯರಾದ ಹೊನ್ನೂರಪ್ಪ, ಕಾರ್ಯದಶರ್ಿ ಹನುಮಂತಪ್ಪ ಬಡಿಗೇರ, ಸಿಆರ್ಪಿ ಕೆ.ಚಂದ್ರಶೇಖರ, ಎಸ್ಡಿಎಂಸಿ ಅಧ್ಯಕ್ಷ ಜಿ.ಸುರೇಶ್, ಕಾಮರ್ಿಕ ಇಲಾಕೆ ಅಕ್ಷರ ಬರಹಗಾರ ವಿ.ವೀರಭದ್ರಪ್ಪ, ಮಕ್ಕಳ ಸಹಾಯವಾಣಿಯ ಚಿದಾನಂದ, ನೇತ್ರಾ, ಮುಖ್ಯಗುರುಗಳಾದ ಎಸ್.ಚಂದ್ರಪ್ಪ, ಲಕ್ಷ್ಮಿದೇವಿ, ಬಿ.ವೀರೇಶ, ಫಕ್ಕೀರಪ್ಪ, ಎನ್.ವಿರೂಪಾಕ್ಷಪ್ಪ, ಎ.ಬಸವರಾಜ, ಎಚ್.ಎನ್.ವೀರೇಶ, ಯರಿಸ್ವಾಮಿ, ಚಿದಾನಂದ, ನೇತ್ರಾ, ಜಿ.ಭಾಸ್ಕರ, ಮುಖ್ಯಗುರುಗಳು, ಶಿಕ್ಷಕ, ಶಿಕ್ಷಕಿಯರು, ಅಂಗನವಾಡಿ, ಆಶಾ, ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.  ಮಕ್ಕಳ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಪ್ರಬಂಧ ಸ್ಪಧರ್ೆ, ಚಿತ್ರಕಲಾ ಸ್ಪಧರ್ೆ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.