ಮಕ್ಕಳಿಗೆ ದೇಶಾಭಿಮಾನ, ಮಾನವಿಯ ಮೌಲ್ಯಗಳ ಬೋಧನೆ ಅಗತ್ಯ: ಫಸಿವುದ್ದೀನ
Children need to be taught patriotism and human values: Fasivuddin
ಮುದ್ದೇಬಿಹಾಳ 29: ಪ್ರತಿಯೊಬ್ಬ ಮಗು ಕೂಡ ಅತ್ಯುಭ್ದುವಾದ ಒಂದೋಂದು ರೀತಿಯ ಕಲಾಪ್ರತಿಭೆಯನ್ನು ಹೊಂದಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಆ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರಲ್ಲಿ ಆತ್ಮಬಲ ತುಂಬವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಸಿಪಿಐ ಮೊಹ್ಮದ್ ಫಸಿವುದ್ದೀನ ಅವರು ಹೇಳಿದರು.
ಪಟ್ಟಣದ ಕುಂಟೋಜಿ ರಸ್ತೆ ಮಾರ್ಗದಲ್ಲಿದ್ದ ಬಸವ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೇ ಸಾಲದು ಗುಣಮಟ್ಟ ಶಿಕ್ಷಣದ ಜತೆಗೆ ನಮ್ಮ ದೇಶದ ಸಂಸ್ಕೃತಿ, ನೆಲ ಜಲ ಸಂಕೃತಿ ಪರಂಪರೆ ಹಾಗೂ ದೇಶಾಭಿಮಾನದ ಜತೆಗೆ ಮಾನವಿಯ ಮೌಲ್ಯಗಳನ್ನು ರೂಢಿಸಿಕೊಳ್ಳುವಂತ ಬೋಧನೆ ಅತ್ಯವಶ್ಯಕವಾಗಿದೆ. ಬಸವ ಇಂಟರನ್ಯಾಷನಲ್ ಶಾಲೆಯು ಮಕ್ಕಳಿಗೆ ಒಳ್ಳೆಯ ಶಿಸ್ತಿನ ಜತೆಗೆ ಮಕ್ಕಳಿಗೆ ಕಲೆ, ವಿಜ್ಞಾನ ತಂತ್ರಜ್ಞಾನವೂ ಸೇರಿದಂತೆ ವಿವಿಧ ವಿನೂತನ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ ಎಂದರು.
ಇನ್ನು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಹಾಗಾಗಿ ಜಾಗೃತರಾಗಿ ಯಾವು ಅಪರಿಚಿತವಾದ ಮೆಸೆಜ್ ಗಳನ್ನು, ಕರೆಗಳನ್ನು ಸ್ವೀಕರಿಸದಂತೆ ಜಾಗೃತರಾಗಿರಬೇಕು ಇಲ್ಲದಿದ್ದರೆ ಸೈಬರ್ ಮೋಸಕ್ಕೆ ಬಲಿಯಾಗಬೇಕಾಗುತ್ತದೆ ಅಂತಹ ಅನಾಮೀಕ ಅಪರಿಚಿತ ಕರೆಗಳು ಹಾಗೂ ಇತರೇ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್‌ರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಸಿಪಿಐ ಮೊಹ್ಮೋದ್ ಫೈಸೂದ್ದೀನ್ ಸಾಧನೆಗೈದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದರು.
ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಸಾಂಕೃತಿಕ ಕಾರ್ಯಕ್ರಮ ಹಾಗೂ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು. ಜಗದೀಶ್ ಚಿನಿವಾಲರ್, ಶಾಲೆಯ ಚೇರ್ಮನರಾದ ಶಿವುಕುಮಾರ ಹರ್ಲಾಪುರ, ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಉಪಸ್ಥಿತರಿದ್ದರು, ಶಾಲಾ ಶಿಕ್ಷಕರು ಹಾಗು ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪೋಷಕರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 