ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಕೌಶಲ್ಯ ಅಗತ್ಯ
ಕಂಪ್ಲಿ 13: ತಾಲೂಕು ಸಮೀಪದ ಬೈಲುವದ್ದಿಗೇರಿ ಗ್ರಾಪಂಯ ಕಛೇರಿಯಲ್ಲಿ ಗ್ರಾಪಂ ಹಾಗೂ ಜೆಎಸ್‌ಡಬ್ಲ್ಯೂ ಆಸ್ಪೈರ್ ನೇತೃತ್ವದಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಸಭೆ ಸೋಮವಾರ ನಡೆಯಿತು. ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹನುಮಂತಪ್ಪ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಮಕ್ಕಳಿಗೆ ಕೌಶಲ್ಯ ಶಿಕ್ಷಣದ ಜತೆಗೆ ಜಾಗೃತಿ, ಅಧಿವೇಶನ, ಕಾರ್ಯಕ್ರಮಗಳ ಅರಿವು ಅಗತ್ಯವಾಗಿದೆ. ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಗ್ರಾಪಂ ಕಡೆಯಿಂದ ಈಗಾಗಲೇ ಕಾಂಪೌಂಡ್‌ಗೋಡೆ, ಧ್ವನಿ ವರ್ಧಕ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ಶಾಲೆಯಲ್ಲಿ ಹೆಚ್ಚವರಿ ಶೌಚಾಗೃಹ ನಿರ್ಮಿಸುವಂತೆ ಮಕ್ಕಳು ಕೇಳಿಕೊಂಡಿದ್ದು, ಆದರೆ, ಇಲ್ಲಿ ಸ್ಥಳದ ಕೊರತೆಯಿಂದ ಶೌಚಾಲಯ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ. ಧರ್ಮಸಾಗರ ಶಾಲೆಯಲ್ಲಿ ಮೈದಾನ ಸಮತಟ್ಟು ಮಾಡಲಾಗಿದೆ. ಸಿಸಿ ಕ್ಯಾಮರ, ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿದೆ. ಮತ್ತು ಕಾಕುಬಾಳು ಶಾಲೆಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಮಕ್ಕಳ ಒತ್ತಾಯ ಮಾಡಿದ್ದು, ್ಲ ಗ್ರಾಪಂಯ ಸಾಮಾನ್ಯ ಸಭೆಯಲ್ಲಿ ಪ್ರಾಸ್ತಾಪಿಸಿ, ಸೂಕ್ತಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಶಾಲೆಗಳಿಗೆ ಪ್ರತಿಯೊಂದು ಸೌಲಭ್ಯ ಕಲ್ಪಿಸಲು ಸದಾ ಸಿದ್ದರಿದ್ದೇವೆ ಎಂದರು. ಜೆಎಸ್ಡಬ್ಲ್ಯೂ ಆಸ್ಪೈರ್ ಸಂಸ್ಥೆಯ ಜೀವನ ಕೌಶಲ್ಯ ತರಬೇತಿದಾರರಾದ ಉದಯಶ್ರೀ ಮಾತನಾಡಿ, 2021ಜೆಎಸ್‌ಡಬ್ಲ್ಯೂ ಆಸ್ಪೈರ್ ಸಂಸ್ಥೆ ಜಾರಿಗೆ ಬಂದಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಥೆಯು ಮುಂದಾಗಿದೆ. ಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳಸುವುದರಿಂದ ಭವಿಷ್ಯ ಉಜ್ವಲವಾಗಿರುತ್ತದೆ. ಶಿಕ್ಷಣದ ಜತೆಗೆ ಜೀವನದ ಕೌಶಲ್ಯಗಳು ಅಗತ್ಯ. ಈ ಹಿನ್ನಲೆಯಲ್ಲಿ ಬೈಲುವದ್ದಿಗೇರಿ ಗ್ರಾಪಂಯಲ್ಲಿ ಮಕ್ಕಳ ಜೀವನ ಕೌಶಲ್ಯ ಶಿಕ್ಷಣದ ತರಬೇತಿಯಲ್ಲಿ ಮಕ್ಕಳಿಗೆ ಗ್ರಾಪಂ ಆಡಳಿತದ ವೈಕರಿ ಸೇರಿದಂತೆ ನಾಯಕತ್ವದ ಗುಣಗಳ ಬಗ್ಗೆ ಪರಿಚಯಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯೂ ಆಸ್ಪೈರ್ ಸಂಸ್ಥೆಯ ಜೀವನ ಕೌಶಲ್ಯ ತರಬೇತುದಾರ ಡಿ.ಮಂಜುನಾಥ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳು ಇದ್ದರು. ಮಾ01ತಾಲೂಕು ಸಮೀಪದ ಬೈಲುವದ್ದಿಗೇರಿ ಗ್ರಾಪಂಯಲ್ಲಿ ಮಕ್ಕಳ ಜೀವನ ಕೌಶಲ್ಯ ಜಾಗೃತಿ ಸಭೆ ನಡೆಯಿತು.