ಮೂಡಲಗಿ 11: ಪ್ರತಿ ದಿನ ಪಾಲಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯ ದಿನದಂದು ಮಕ್ಕಳು ತಮ್ಮ ಪಾಲಕರು ತಮ್ಮ ಅಮೂಲ್ಯ ಮತಗಳನ್ನು ಮತದಾನ ಮಾಡುವ ಮೂಲಕ ಕರ್ತವ್ಯ ನಿರ್ವಹಿಸಲು ಸಹಾಯ ಮಾಡಬೇಕು. ಮಕ್ಕಳು ಸಹ ಚುನಾವಣೆ ಯಶಸ್ವಿಗೆ ಶ್ರಮಿಸಬೇಕೆಂದು ಸ್ವಿಫ್ ಸಮಿತಿ ಅಧ್ಯಕ್ಷ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಮೂಡಲಗಿ ಮತ್ತು ಕಲ್ಲೋಳ್ಳಿ ಪಟ್ಟಣಗಳಲ್ಲಿ ಹಮ್ಮಿಕೊಂಡ ಬೈಕ್ ರ್ಯಾಲಿ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿ, ಮತದಾನವು ಪವಿತ್ರ ಕಾರ್ಯವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ಅರ್ಹ ದೇಶವನ್ನಾಳುವ ಪ್ರಬುದ್ಧ ಜನ ಸೇವಕರ ಆಯ್ಕೆ ಕಾರ್ಯ ತಮ್ಮ ಮೇಲಿದೆ. ಹಣ, ಹೆಂಡ ಇನ್ನಿತರ ಆಸೆಗಾಗಿ ಅಮೂಲ್ಯ ಮತಗಳನ್ನು ಮಾರಾಟ ಮಾಡಿಕೊಳ್ಳದೆ ಉತ್ತಮ ಸಮಾಜ ನಿಮರ್ಾಣ ಕಾರ್ಯದಲ್ಲಿ ಕೈಜೊಡಿಸಬೇಕು ಎಂದು ಹೇಳಿದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವದು ಪಾಲಕರ ಆದ್ಯ ಕರ್ತವ್ಯ ಅದರಂತೆ ಮಕ್ಕಳು ಸಹ ಪಾಲಕರು ಚುನಾವಣೆ ಕರ್ತವ್ಯದಲ್ಲಿ ತೊಡಗುವಂತೆ ಪ್ರೇರೆಪಣೆ ಮಾಡಬೇಕು. ಮತದಾನದ ಕುರಿತು ಮಕ್ಕಳು ಕೂಡಾ ಮನೆಯಲ್ಲಿ ಪಾಲಕರ ಜೊತೆಯಲ್ಲಿ ಚಚರ್ಿಸಬೇಕು. ಪ್ರಬುದ್ಧ ಸಮಾಜ ನಿಮರ್ಾಣವಾಗ ಬೇಕಾದರೆ ಎಲ್ಲರೂ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಏಪ್ರೀಲ್ 23ರ ಮತದಾನದ ದಿನದಂದು ಮಕ್ಕಳು ಪಾಲಕರಿಗೆ ಮನವರಿಕೆ ಮಾಡಿಕೊಟ್ಟು ತಮ್ಮ ಹಕ್ಕು ಚಲಾಯಿಸಲು ಪ್ರೋತ್ಸಾಹಿಸಬೇಕೆಂದು ಕೋರಿದರು.
ಮೂಡಲಗಿ ಹಾಗೂ ಕಲ್ಲೋಳ್ಳಿ ಗ್ರಾಮಗಳಲ್ಲಿ ಪುರಸಭೆ, ಪಟ್ಟಣ ಪಂಚಾಯತ, ಶಿಕ್ಷಣ ಇಲಾಖೆಯೊಂದಿಗೆ ನಗರಗಳ ಪ್ರಮುಖ ಬೀದಿಗಳಲ್ಲಿ ಚುನಾವಣಾ ಘೋಷಣೆೆಗಳೊಂದಿಗೆ ತೆರಳಿ ಮತದಾನದ ಅರಿವು ಜಾಥಾ ಕಾರ್ಯಕ್ರಮ ಜರುಗಿತು.
ಜಾಥಾ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಎಸ್.ಎಚ್ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಗೋವಿಂದ ಪೂಜೇರಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಸ್ ಎಮ್ ಬಬಲಾದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ತಾಳಿಕೋಟಿ, ಎಸ್.ಎಸ್ ರೊಡ್ಡನವರ, ಹಣಮಂತ ಬಸಳಿಗುಂದಿ, ಬಿ.ಆರ್.ಪಿ ಕೆ.ಎಲ್ ಮೀಶಿ, ಸಮುದಾಯ ಸಂಘಟನಾಧಿಕಾರಿ ಸಿ.ಬಿ ಪಾಟೀಲ್, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಸಿ.ಆರ್.ಪಿ ಜಿ.ಕೆ ಉಪ್ಪಾರ, ಪ್ರಧಾನ ಗುರುಗಳಾದ ಟಿ.ಎಮ್ ಬರನಟ್ಟಿ, ಸಿ.ಎಲ್ ಬಡಿಗೇರ, ಎಸ್ ಬಿ ಗೋಸಬಾಳ ಹಾಗೂ ಶಿಕ್ಷಕರು ವಿದ್ಯಾಥರ್ಿಗಳು ಹಾಜರಿದ್ದರು.