ಮಕ್ಕಳು ತೊದಲು ನುಡಿಗಳಿಂದಲೆ ದೊಡ್ಡವರಾಗುತ್ತಾರೆ : ಡಾ.ಶಶಿಧರ ನರೇಂದ್ರ ಅಭಿಪ್ರಾಯ
ಧಾರವಾಡ 01 : ಪ್ರೇರಣಾ ಕಲಾ ಬಳಗ ನವನಗರ ಹುಬ್ಬಳ್ಳಿ ಇವರ ವತಿಯಿಂದ ದಿನಾಂಕ 30.12.2024 ರಂದು ಸಂಜೆ 5.30ಗೆ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭರತನಾಟ್ಯ ಕುಚುಪುಡಿ ನೃತ್ಯೋತ್ಸವ 2024 ಜರುಗಿತು.
ಮುಖ್ಯ ಅತಿಥಿಗಳಾಗಿ ಹಾಗೂ ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಶಶಿಧರ ನರೇಂದ್ರ ಜ್ಞಾನಕ್ಕೆ ವಿಶೇಷ ಸ್ಥಾನವನ್ನು ಕೊಡುವುದರ ಮೂಲಕ ಸನಾತನ ಧರ್ಮ ನಮ್ಮನ್ನು ಪ್ರೇರಿಪಿಸುತ್ತದೆ ಎಲ್ಲರು ಸಂತೋಷದಿಂದ ಇರಬೇಕು, ದ್ವೇಶ ಅಸೂಯೆ ತಡೆದುಕೊಳ್ಳಬಹುದು ಆದರೆ ಪ್ರೀತಿ ತಡೆದುಕೊಳ್ಳಲು ಸಾಧ್ಯವಿಲ್ಲ ಅದು ಕಷ್ಟ ಮನಸ್ಸು ನಮ್ಮನ್ನು ಆ ಬಗೆಯಲ್ಲಿ ಒಗ್ಗಿಕೊಂಡಿದೆ, ಎಲ್ಲರು ಸಾಹಿತ್ಯದ ಪ್ರೇಮದ ಮೂಲಕ ಪದ್ಯಗಳನ್ನು ರಚಿಸುವುದು ಅದರಲ್ಲಿ ಕೃಷಿ ಮಾಡುವುದು ಹೀಗೆ ಅನೇಕ ಗಣ್ಯರು ತಮ್ಮ ಸಾಹಿತ್ಯ ಸಂಗೀತ ನೃತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ತಮ್ಮದೆ ಆದ ಶ್ರೇಯಸ್ಸನ್ನು ಪಡೆದಿದ್ದಾರೆ. ಅದರಂತೆ ತಮ್ಮ ತಂದೆಯವರು ತಾವು ಬರೆದ ಸಾಹಿತ್ಯಕ್ಕೆ ನುಡಿಮುತ್ತು ಬರೆಯಲು ಹೇಳಿದಾಗ ಅವರು ಬರೆದದ್ದು ಮಕ್ಕಳು ತೊದಲು ನುಡಿಯಿಂದ ಮುಂದೆ ದೊಡ್ಡವರಾಗುತ್ತಾರೆ ಎಂದು ಬರೆದದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಇದ್ದು ಅದನ್ನು ಅರ್ಥಮಾಡಿಕೊಂಡಿದಕ್ಕಾಗಿಯೆ ನನಗೆ ಈ ಗೌರವ ಸಿಗಲಿಕ್ಕೆ ಕಾರಣವಾಗಿರಬಹುದು ಮತ್ತು ಇಂದು ಈ ಕ್ಷೇತ್ರದಲ್ಲಿ ಮುಂದೆ ಬರಲಿಕ್ಕೆ ಸಹಾಯವಾಗಿದ್ದು ನುಡಿದರು, ನಮ್ಮ ಮಕ್ಕಳು ಹೇಗೆಲ್ಲಾ ಸಾಧನೆ ಮಾಡ್ತಾರೆ ಯಾವ ಯಾವ ಕ್ಷ್ಷೇತ್ರದಲ್ಲಿ ಸಾಧನೆ ಮಾಡ್ತಾ ಇದ್ದಾರೆ ಅನ್ನೊದಕ್ಕೆ ಈ ನೃತ್ಯ ಹಾಗೂ ಕುಚುಪಡಿ ನೃತ್ಯವೇ ಸಾಕ್ಷಿ ಎಂದು ನುಡಿದರು. ಇಂದು ಭರತನಾಟ್ಯ, ಕುಚುಪುಡಿ, ಮೊಹಿನಿಅಟಂ, ಓಡಿಸ್ಸಿ, ಕಥಕ ಹೀಗೆ ವಿವಿಧ ಎಂಟು ಪ್ರಕಾರದ ಶಾಸ್ತ್ರೀಯ ನೃತ್ಯಗಳು ಮಾನ್ಯತೆಯನ್ನು ಪಡೆದಿವೆ. ಈ ರೀತಿಯ ನೃತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಜನಮನ್ನಣೆ ಪಡೆಯುವಲ್ಲಿ ಸಾಫಲ್ಯತೆಯನ್ನು ಪಡೆಯುವುದರ ಜೊತೆಗೆ ಪಾಲಕರು ಹಾಕಿಕೊಟ್ಟ ಪ್ರೇರಣೆಗೆ ಮಕ್ಕಳು ತೊಡಗಿಸಿ ನೃತ್ಯದಿಂದ ನೃತ್ಯ ಕಲೆಯನ್ನು ಬೆಳೆಸಿ ಶ್ರೇಯಸ್ಸನ್ನು ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಾರದ ಕುಮಾರ ಬೇಕ್ಕೆರಿ ಮಾತನಾಡಿ ಪ್ರೇರಣಾ ನೃತ್ಯ ತಂಡ ನಿಜಕ್ಕೂ ಪ್ರೇರಣೆಯನ್ನು ಕೊಡುವಂತಹ ತಂಡವಾಗಿದ್ದು ಸರ್ಕಾರದ ಯಾವುದೇ ಧನಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮನ್ನು ಮಾಡಿ ಸೈ ಎನಿಸಿಕೊಳ್ಳುತ್ತಿದ್ದು ಶ್ಲಾಂಘನೀಯವೆಂದರು. ಅಲ್ಲದೆ ಈ ಸಂಸ್ಥೆ ನಿರಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ನಿಕಟ ಒಡನಾಟವನ್ನು ಹೊಂದಿದ್ದು ಮೆಚ್ಚುವಂತಹದ್ದು ಇಂತಂಹ ಕುಚುಪುಡಿ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿರುವ ಪ್ರೇರಣಾ ನೃತ್ಯ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ನಿಜಕ್ಕೂ ಪ್ರೇರಣಾದಾಯಕವಾದದ್ದು ಎಂದು ನುಡಿದರು. ಅದರ ಜೊತೆಗೆ ಎಲ್ಲ ಸಾಂಸ್ಕೃತಿಕ ಸಂಘ ಸಂಸ್ಥೆಗಳು ತಮ್ಮ ಗುಣಮಟ್ಟವನ್ನು ಕಾಪಾಡಿಕೊಳ್ಳುದು ಅವಶ್ಯಕತೆಯಿದೆ ಎಂದು ಈ ಸಂದರ್ಭದಲ್ಲಿ ನುಡಿದರು.
ಇನ್ನೊರ್ವ ಅತಿಥಿಗಳಾಗಿ ಮಾತನಾಡಿದ ಪಂಡಿತ ಪ್ರಸನ್ನ ಮಾಧವ ಗುಡಿ ಮಾತನಾಡಿ ನಾಟ್ಯ ಶಾಸ್ತ್ರದಲ್ಲಿ ನಾಟ್ಯದ ಹಾವಭಾವಗಳಿಗೆ ಜೀವ ತುಂಬಿದರೆ ಭರತನಾಟ್ಯಕ್ಕೆ ಜೀವಕಳೆ ಬರುತ್ತದೆ ಎಂದು ನುಡಿದರು. ಮನಸ್ಸಿನ ಪ್ರತಿಬಿಂಬ ಈ ಭರತನಾಟ್ಯದಲ್ಲಿದೆ ಅಲ್ಲದೆ ಅದರಲ್ಲಿ ಆದ್ಯಾತ್ಮಿಕ ಪ್ರೇರಣಾಶಕ್ತಿ ಇದೆ ಎಂದು ನುಡಿದರು.
ಅಧ್ಯಕ್ಷತೆಯನ್ನು ವಿದುಷಿ ಜ್ಯೋತಿ ಗಲಗಲಿ ವಹಿಸಿದ್ದರು, ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರ್ಗವಿ ಕುಲಕರ್ಣಿ, ಹಾರೋ್ಮನಿಯಂವಾದಕ ಬಸವರಾಜ ಹೂಗಾರ, ನೃತ್ಯದಲ್ಲಿ ಸಾಧನೆಗೈದ ವಿದೂಷಿ ಡಾ.ನವಮಿ ಉಪಾಧ್ಯಾಯ, ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ವಿಜಯೀಂದ್ರ ಅರ್ಚಕರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಸಾದನ ಸ್ನೇಹಾ ಸಂತೋಷ ಮಹಾಲೆ ನೆರೆವೇರಿಸಿದರು. ವೇದಿಕೆಯ ಮೇಲೆ ರಾಜಶ್ರೀ, ಹರ್ಷಾ, ರಾಧಾ ಜ್ಯೋಶಿ ಉಪಸ್ಥಿತರಿದ್ದರು, ನಿರೂಪಣೆ ರವಿ ಕುಲಕರ್ಣಿ ಹಾಗೂ ಸತೀಶ ಮೂರುರ ನಡೆಸಿಕೊಟ್ಟರು. ನಂತರ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ಕುಚುಪುಡಿ ನೃತ್ಯ ಸೇರಿದಂತೆ ಹನ್ನೇರಡಕ್ಕೂ ಹೆಚ್ಚು ನೃತ್ಯಗಳು ಮನಸೂರೆಗೊಂಡವು.