ಮಕ್ಕಳು ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ: ಸಂಗ್ರೇಶಿ

ಗದಗ 31:    ಮಕ್ಕಳು ಉತ್ತಮ  ಶಿಕ್ಷಣ ಪಡೆದು     ಉತ್ತಮ ನಾಗರಿಕರಾಗಿ ಬಾಳುವುದೇ  ಸಮಾಜಕ್ಕೆ  ನೀಡುವ ಒಳ್ಳೆಯ ಕೊಡುಗೆಯಾಗಿದೆ ಎಂದು     ಗದಗ   ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ  ಅಧ್ಯಕ್ಷ   ಜಿ.ಎಸ್. ಸಂಗ್ರೇಶಿ ನುಡಿದರು. 

       ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ವಿವಿಧ ಇಲಾಖೆ, ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ, ಬೆಟಗೇರಿ  ಇವರ ಸಂಯುಕ್ತ  ಆಶ್ರಯದಲ್ಲಿಂದು  ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ-ಪೂರ್ವ ವಿದ್ಯಾಲಯದ       ಆವರಣದಲ್ಲಿ   4 ದಿನಗಳ ಕಾನೂನು ಸಾಕ್ಷರತಾ ರಥ ಸಂಚಾರ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ    ನ್ಯಾಯದೇವತೆಯ  ಚಿತ್ರಕ್ಕೆ   ಬಣ್ಣ  ತುಂಬುವ ಮೂಲಕ ಉದ್ಘಾಟಿಸಿ ಅವರು  ಮಾತನಾಡಿದರು.   ಮಕ್ಕಳು   ತಮ್ಮ  ಹಕ್ಕುಗಳು, ಮೂಲಭೂತ ಕರ್ತವ್ಯಗಳ ಕುರಿತು ಅರಿತುಕೊಂಡು ಉತ್ತಮ ವೃತ್ತಿ ಹಾಗೂ ಆರೋಗ್ಯಕರ ಜೀವನ ನಡೆಸಲು  ಮುಂಜಾಗ್ರತೆ ವಹಿಸಬೇಕು ಎಂದು ಜಿ.ಎಸ್. ಸಂಗ್ರೇಶಿ ತಿಳಿಸಿದರು.

        ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್. ಹಿರೇಮಠ ಅವರು ಮಾತನಾಡಿ ಮಕ್ಕಳ  ಅಪರಾಧ, ವಿಚಾರಣೆ, ಶಿಕ್ಷೆಯ  ಬದಲಾಗಿ  ಮುನ್ನೆಚ್ಚರಿಕೆಯಾಗಿ   ಮಕ್ಕಳು ಅಪರಾಧ ಮಾಡದಂತೆ  ಅವರ  ಮನಸ್ಥಿತಿ ನಿಮರ್ಾಣ ಮಾಡಬೇಕು.    ಕುಟುಂಬವಾಗಲಿ ,   ಸಮಾಜವಾಗಲಿ   ಅಪರಾಧ ರಹಿತವಾಗಿರಲು ನಾವೆಲ್ಲ  ಶ್ರಮಿಸಬೇಕು ಎಂದರು. 

       ನ್ಯಾಯವಾದಿ  ಬಿ.ಎನ್. ಸಂಶಿ ಅವರು  ಮಕ್ಕಳ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ಬಾಲ ನ್ಯಾಯ ಅಧಿನಿಯಮ ಮತ್ತು ಸಿ.ಡಬ್ಲ್ಯೂ .ಸಿ ಕುರಿತು ಉಪನ್ಯಾಸ ನೀಡಿ ಮಕ್ಕಳಿಗೆ ಬದುಕುವ, ವಿಕಾಸ ಹೊಂದುವ, ಭಾಗವಹಿಸುವ, ರಕ್ಷಣೆಯ ಹಕ್ಕುಗಳಿದ್ದು   ಜಗತ್ತಿನ   187 ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ  ಒಪ್ಪಿಗೆ ನೀಡಿವೆ.   ಮಕ್ಕಳ ಲಾಲನೆ, ಪಾಲನೆ ಮಾಡುವುದು  ಹಾಗೂ   ಹಿತಾಸಕ್ತಿ  ಕಾಪಾಡುವುದು ಪಾಲಕರ ಕರ್ತವ್ಯವಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ    ಪೋಷಕರಾಗಲಿ ಸಮಾಜವಾಗಲಿ  ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳಬಾರದ. ತನ್ನ ಕುಟುಂಬದಿಂದ ಬೇರ್ಪಟ್ಟ ಮಕ್ಕಳಿಗ ಸಕರ್ಾರ ಸೂಕ್ತ ವ್ಯವಸ್ಥೆ ಮಾಡಬೇಕು.  ಮಕ್ಕಳ  ಕುರಿತು ಏನಾದರೂ ಸಮಸ್ಯೆ  ತೊಂದರೆ  ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1098 ಕ್ಕೆ ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದರು.            

          ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೇಣುಕಾ ಜಿ ಕುಲಕಣರ್ಿ, ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ಆರ್.ಬಿ. ಚಳ್ಳಮರದ,  ಜಂಟಿ ಕಾರ್ಯದಶರ್ಿ ವೈ.ಡಿ. ತಳವಾರ,   ಗದಗ ಶಹರ  ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ , ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಕೆ. ಹವಾಲ್ದಾರ,   ಗದಗ ಸಿಡಿಪಿಓ ಮೃತ್ಯುಂಜಯ ಜಿ,   ನ್ಯಾಯವಾದಿಗಳಾದ ಎಂ.ಎ. ಮೌಲ್ವಿ, ಜಿ.ಎಸ್. ಪಾಟೀಲ, ಶೋಭಾ ಉಮಚಗಿ, ಮಹಮ್ಮದ ಅಲಿ ನಾಯಕ, ಪುಟ್ಟರಾಜ ಸಿ,   ದೀಪು ಎಂ.ಟಿ.  ಎಲ್.ಪಿ.ಓ ವಾಲಿ,  ಶಾಲಾ ವಿದ್ಯಾಥರ್ಿ , ಶಿಕ್ಷಕ ವೃಂದದವರು  ಉಪಸ್ಥಿತರಿದ್ದರು.   

      ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ  ಗಣೇಶ ಸಿಂಗ್ ಬ್ಯಾಳಿ ಸರ್ವರನ್ನು ಸ್ವಾಗತಿಸಿದರು.   ಪ್ರಾಚಾರ್ಯ ಎ.ಎ. ಹದ್ಲಿ ವಂದಿಸಿದರು.   ಡಿ.ಎಸ್. ನಾಯಕ ಉಪನ್ಯಾಸ ನೀಡಿದರು.