ಮಕ್ಕಳು ಭವಿಷ್ಯದ ಬುನಾದಿಗಳು :- ಪ್ರಾ. ಎ. ಆರ್‌. ಹೆಗ್ಗನದೊಡ್ಡಿ

Children are the foundations of the future :- Prof. A. R. Hegganadoddy

ಮಕ್ಕಳು ಭವಿಷ್ಯದ ಬುನಾದಿಗಳು :- ಪ್ರಾ. ಎ. ಆರ್‌. ಹೆಗ್ಗನದೊಡ್ಡಿ 

ಸಿಂದಗಿ 07 : ಭಾರತ ದೇಶದ ಭವಿಷ್ಯ ರೂಪಿಸುವವರು ಯುವ ಜನತೆ, ಯುವ ಜನತೆಯ ಭವಿಷ್ಯ ರೂಪಿಸುವವರು  ಶಾಲಾ ಕೊಠಡಿಯಲ್ಲಿ  ಶಿಕ್ಷಕರು. ವಿದ್ಯಾರ್ಥಿಗಳು  ಸ್ವ -ಹಿತಾಸಕ್ತಿಯಿಂದ  ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಎಚ್‌. ಜಿ. ಪ. ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಎ. ಆರ್‌. ಹೆಗ್ಗನದೊಡ್ಡಿ ಹೇಳಿದರು.  ತಾಲೂಕಿನ  ಕನ್ನೊಳ್ಳಿ  ಗ್ರಾಮದಲ್ಲಿ  ಇಂದು  ಲಕ್ಷ್ಮಿ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲೆ ಹಾಗೂ ಡಿ. ಎಸ್‌. ಪಾಟೀಲ್ ಪ. ಪೂ. ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌. ಎಸ್‌. ಎಲ್‌. ಸಿ. ಹಾಗೂ ದ್ವಿತೀಯ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭದಲ್ಲಿ ಮಾತನಾಡಿ, ತಂದೆ- ತಾಯಿಯ ಕನಸು, ಶಿಕ್ಷಕರ ಮಾರ್ಗದರ್ಶನ ಮೈಗೂಡಿಸಿಕೊಂಡು ಮುನ್ನುಗ್ಗಿ ಬೆಟ್ಟದಂತ  ಕಷ್ಟ,  ಮೇನದಬತ್ತಿಯಂತೆ ಕರಗಿ ಹೋಗುತ್ತದೆ..  ನಿಮ್ಮ ಜೀವನದ  ಯಶಸ್ಸು ತಾನಾಗಿಯೇ ಒದಗಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕುರಿ ಕಾಯುವ ಕುರಿಗಾಹಿ ತೇನಸಿಂಗ್ ಮೌಂಟ್ ಎವರೆಸ್ಟ್‌ ಶಿಖರವನ್ನು ಮೊದಲ ಬಾರಿಗೆ ಏರಿ ಸಾಧನೆಗೈದ ಸಾಧನೆಯನ್ನು ಇಲ್ಲಿ ಸ್ಮರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ಪ್ರತಿಭೆ  ಎನ್ನುವುದು ಬಡವನ ಗುಡಸಿಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು  ಎಲ್ಲರ  ಮಹದಾಷೆೆಯಾಗಬೇಕು. ಪ್ರತಿ  ವ್ಯಕ್ತಿ  ತನ್ನ ಭವಿಸ್ಯದ ಶಿಲ್ಪಿ ತಾನೇ ಆಗಬೇಕು ಎಂದು ಮಾರ್ಗದರ್ಶನ ನೀಡಿ  ಶುಭ  ಕೋರಿ ಶಾಲಾ ಆಡಳಿತ ಮಂಡಳಿಯ ಪರವಾಗಿಸನ್ಮಾನ ಸ್ವೀಕರಿಸಿದರು.  ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಭಲಭೀಮ ಹೀರೊಳ್ಳಿ, ಸದಸ್ಯರಾದ ಸಿದ್ದಯ್ಯ ಸ್ಥಾವರಮಠ ಡಿ. ಎಸ್‌. ಪಾಟೀಲ್ ಪ. ಪೂ. ಮಹಾವಿದ್ಯಾಲಯ  ಐ. ಡಿ. ಪಡಶೆಟ್ಟಿ, ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯರಾದ ರಮೇಶ ಬಿರಾದಾರ, ರಾಜಶೇಖರ್ ಕೊಲ್ಲೂರ್, ಕಾಲೇಜ್ ವಿದ್ಯಾರ್ಥಿ  ಪ್ರತಿನಿಧಿ ಕುಮಾರಿ  ವರ್ಷಾ  ನಂದ್ಯಾಳ,  ಹೈಸ್ಕೂಲ್  ಪ್ರತಿನಿಧಿ ಲಕ್ಷ್ಮಿ ಚೌದರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.  ಇದೆ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸತ್ಕಾರಿಸಲಾಯಿತು.  ಶಾಲಾ - ಕಾಲೇಜಿನ ಸಿಬ್ಬಂದಿ ವರ್ಗ ಮಂದಾಳತ್ವ ವಹಿಸಿಕೊಂಡಿದ್ದರು, ಉಪನ್ಯಾಸಕರಾದ ಮಂಜುನಾಥ ಬಡಿಗೇರ ನಿರೂಪಿಸಿ ವಂದಿಸಿದರು.