ಧಾರವಾಡ 15: ಮಕ್ಕಳು ಸದಾ ಹೊಸದನ್ನು ನಿರೀಕ್ಷಿಸುವುದು ಸಹಜ. ಅಲ್ಲದೇ ಅವರಲ್ಲಿ ಕುತೂಹಲ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಅವರಿಗೆ ಹೊಸ ವಿಚಾರಗಳನ್ನು ಮುಂದಿಡುವ ಕೆಲಸ ನಡೆಯಬೇಕು. ಹಾಗೆ ಇಡಬೇಕಾದರೆ ಸಾಹಿತ್ಯದ ಮೂಲಕ ಇಡಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳು ಸಾಹಿತ್ಯ ಓದುವ ಗೀಳನ್ನು ಹಚ್ಚಿಕೊಳ್ಳುವಂತೆ ಮಕ್ಕಳ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಮಾಡಬೇಕಾಗಿದೆ. ಅಂದಾಗ ಮಾತ್ರ ಮಕ್ಕಳು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತಿಯೊಂದಿಗೆ ಕುಳಿತುಕೊಳ್ಳಲು ಸಾಧ್ಯ. ಇಲ್ಲದೇ ಹೋದಲ್ಲಿ ಸಂಘಟಿಕರ ಒತ್ತಾಸೆಯಿಂದಲೋ ಶಿಕ್ಷಕರ ಹೆದರಿಕೆಯಿಂದಲೋ ಕೂಡುವಂತಾಗುತ್ತದೆ. ಎಂದು ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ನುಡಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ `ಚಿಣ್ಣರ ಚಿಲುಮೆ' ಮಕ್ಕಳ ನಾಟಕ ಯೋಜನೆಯ ಅಂಗವಾಗಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ವಿಭಾಗ ಮಟ್ಟದ 5ನೇ ದಿನದ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಐದು ದಿನಗಳ ನಾಟಕೋತ್ಸವದ ಸಮಾರೋಪದ ನುಡಿಗಳನ್ನು ನುಡಿದರು.
ನಾಟಕ ಸಮಾರಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಕಲಿಕೆ ಎಂದಾಕ್ಷಣ ಶಾಲೆಯ ವರ್ಗದ ಕೋನೆಯಲ್ಲಿ ಮಾತ್ರ ಎಂಬ ಭಾವನೆಯಿಂದ ಶಿಕ್ಷಕರು ಹೊರಬರಬೇಕಿದೆ. ಶಾಲೆಯ ಹೊರಗಿನಿಂದಲೇ ಹೆಚ್ಚು ಮಕ್ಕಳು ಕಲಿಯುವದಿದೆ. ಅದಕ್ಕೆ ಶಿಕ್ಷಕರಾದವರು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದೇ ಹೋದರೆ ಬರೀ ಮಾಕ್ಸರ್್ ಪಡೆಯುವದಕ್ಕೆ ಮಾತ್ರ ಕಲಿಕೆ ಎಂಬಂತಾಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಬರುವುದಿಲ್ಲ. ಪುಸ್ತಕದ ಹುಳುಗಳಾಗಿ ಮಾರ್ಪಡುತ್ತಾರೆಯೇ ವಿನಹ ಒಬ್ಬ ಸದೃಢ ಬಾಲಕ-ಬಾಲಕಿಯರಾಗಿ ರೂಪಗೊಳ್ಳುವುದಿಲ್ಲ ಎಂದ ಖಾಜಿ, ಪಾಲಕರಾದವರು ಮನೆಯ ಬಗ್ಗೆ ಹೇಗೆ ಕಾಳಜಿ ಹೊಂದುವಿರೋ ಹಾಗೆ ನಿಮ್ಮ ಮಗು ಕಲಿಯುವ ಶಾಲೆಯ ಬಗ್ಗೆಯೂ ಕಾಳಜಿ ಹೊಂದಿರಬೇಕು. ನಮ್ಮ ಮಗು ಎಂಥ ಶಾಲೆಯಲ್ಲಿ ಓದುತ್ತಿದ್ದಾನೆ, ಅದು ಸುರಕ್ಷಿತವಾಗಿದೆಯೇ, ಕಲಿಕೆಯಲ್ಲಿ ಸಂತಸದಾಯಕವಾಗಿರುತ್ತದೆಯೇ ಎಂದು ನೋಡುವದು ಪಾಲಕರ ಜವಾಬ್ದಾರಿಯೂ ಆಗಬೇಕು, ಅಂದಾಗ ಮಾತ್ರ ಮಕ್ಕಳ ಕಲಿಕೆಯಲ್ಲಿ ಸರಿಯಾದ ಪ್ರಗತಿಯನ್ನು ಕಾಣಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ಧಲಿಂಗೇಶ ರಂಗಣ್ಣವರ, ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಹಿಂದೊಂದು ಕಾಲವಿತ್ತು. ನಾಳೆಯ ಪ್ರಜೆಗಳು ಎಂದು ಕರೆಯುತ್ತಿದ್ದೆವು. ಕಾಲ ಬದಲಾಗಿದೆ. ದೊಡ್ಡವರಿಗಿಂತಲೂ ಹೆಚ್ಚು ಯೋಚಿಸುವ ಮತ್ತು ತೊಡಗಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ನಮ್ಮ ದೇಶ ಸದೃಢ ಇರಬೇಕಾದರೆ ಮಕ್ಕಳು ಸದೃಢ ಇರುವಂತೆ ನೋಡಿಕೊಳ್ಳಬೇಕು. ನಿಜವಾದ ದೇಶದ ಆಸ್ತಿ ಎಂದರೆನೇ ಮಕ್ಕಳು. ಅವರು ದೇಶದ ಭವಿಷ್ಯ. ಹಾಗಾಗಿ ಎಲ್ಲ ಸ್ಥರದ ಮಕ್ಕಳು ನೆಮ್ಮದಿಯ ಬಾಲ್ಯ ಕಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದಷ್ಟೇ ಅಲ್ಲ ಸಮಾಜದ್ದು, ಸರಕಾರದ್ದೂ ಕರ್ತವ್ಯವಾಗಿರುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಗಳು ಹೆಚ್ಚು ಮುತುವಜರ್ಿ ಇಂದು ವಹಿಸಬೇಕಾಗಿರುವುದು ಅವಶ್ಯ ಇದೆ ಎಂದರು.
`ಹಳ್ಳಿಯ ಸಿರಿ' ಮಕ್ಕಳ ನಾಟಕ ಪ್ರದರ್ಶನವನ್ನು ಹಾನಗಲ್ ತಾಲೂಕಿನ ಶೇಷಗಿರಿ ಸರಕಾರಿ ಶಾಲೆಯ ಮಕ್ಕಳು ಪ್ರದಶರ್ಿಸಿದರು. ಗಜಾಣನ ಯುವಕ ಮಂಡಳ ನಾಟಕವನ್ನು ಪ್ರಸ್ತುತಿ ಪಡಿಸಿತು. ಮಹಾಸತಿ ಗೌಡ ಬರೆದು ನಿದರ್ೇಶಿಸಿದ ಈನಾಟಕ ಎಳೆಯ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಕ್ರೂರತೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಸಮಾಜವನ್ನು ಪ್ರಶ್ನಿಸುತ್ತಲೇ ಹೋಗುತ್ತದೆ. ಮನೆಗೆ ಬಂದ ಸಂಧಿಯೊಬ್ಬ ಪುಟ್ಟ ಮಗುವಿನ ಮೇಲೆ ಲೈಂಗಿಕ ಕಿರುಕಳ ಕೊಡುವುದನ್ನು ತಾಳಲಾರದೇ ಊರ ಬಿಟ್ಟು ಕಾಡಿಗೆ ಬರುವ ಬಾಲೆಯನ್ನು ಶಾಲೆಯ ಅವಳ ಸಹಪಾಟಿಗಳು ಇವಳನ್ನು ಹುಡಿಕಿಕೊಂಡು ಬಂದು ಕಾರಣ ತಿಳಿದುಕೊಳ್ಳುತ್ತಾರೆ. ಆ ಬಾಲೆಯ ಗೆಳೆತನ ಮಾಡಿದ ಪಕ್ಷಿ ಪ್ರಾಣಿಗಳೇ ಆ ಅತ್ಯಾಚಾರಿಯನ್ನು ಕೊಂದುಹಾಕಿ ಸಮಾಜಕ್ಕೆ ಎಚ್ಚರಿಕೆಯನ್ನು ಸಾರುತ್ತವೆ. ಹೆಣ್ಣಾಗಿ ಹುಟ್ಟುವುದೇ ತಪ್ಪಾ? ನಿಮ್ಮ ಮನೆಯಲ್ಲಿ ಅಕ್ಕ, ತಂಗಿಯರಿದ್ದಾರೆ ಎಂಬ ಭಾವನೆ ಯಾಕೆ ಬರುವುದಿಲ್ಲ? ಎಂದು ಕೇಳುತ್ತಲೇ ನಮಗೆ ಎಂಥ ವಾತಾವರಣ ಬೇಕು ಎಂಬುದರ ಬಗ್ಗೆ ಸಭಿಕರಿಗೆ ಹೇಳುತ್ತಾ ಹೋಗುತ್ತಾರೆ. ನಾಟಕ ಅಂತ್ಯಗೊಂಡಾಗ ನೋಡುಗರ ಕಣ್ಣು ತೇವಗೊಂಡಿರುತ್ತವೆ.
ವೇದಿಕೆಯ ಮೇಲೆ ವಿಷಯಾ ಜೇವುರ, ಶಂಕರ ಹಲಗತ್ತಿ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ, ಸುನಂದ ನಿಂಬನಗೌಡರ, ಸನ್ಮತಿ ಅಂಗಡಿ ಉಪಸ್ಥಿತರಿದ್ದರು. ಡಾ. ಎ. ಎಲ್. ದೇಸಾಯಿ, ಬಸವರಾಜ ಸಿಗ್ಗಾಂವಿ, ವಿಜಯ ದೊಡಮನಿ, ಸಿದ್ದರಾಮ ಹಿಪ್ಪರಗಿ, ಎನ್. ಶಶಿಕಲಾ ನಾಟಕವನ್ನು ವೀಕ್ಷಿಸಿದರು ಓಂ ಶಾಲೆಯ ಮತ್ತು ರಾಜೀವ ಗಾಂಧಿ ಶಾಲೆಯ ಶಿಕ್ಷಕ, ಶಿಕ್ಷಕರಿಯರು ಮತ್ತು ಮಕ್ಕಳು ನಾಟಕ ನೋಡಿದರು. ಒಟ್ಟು ಒಂದು ಸಾವಿರ ಮಕ್ಕಳು ನಾಟಕ ವೀಕ್ಷಿಸಿದರು.