ಗದಗ 16: ದೇಶದ ನಿಜವಾದ ಸಂಪತ್ತು ಮಕ್ಕಳಾಗಿದ್ದು ಅವರ ಹಕ್ಕುಗಳ ರಕ್ಷಣೆ ಸರ್ವರ ಜವಾಬ್ದಾರಿಯಾಗಿದೆ. ಗ್ರಾ. ಪಂ. ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಗಳ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚು ಸಮನ್ವಯತೆಯಿಂದ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ ನುಡಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ (ಡಿ. 15) ಮಕ್ಕಳ ರಕ್ಷಣಾ ವ್ಯವಸ್ಥೆ ಬಲಪಡಿಸುವ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ ಮಾಹಿತಿ ಹಾಗೂ ಕ್ರಿಯಾ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳು ಮಾನವ ಹಕ್ಕುಗಳ ಬುನಾದಿಯಾಗಿದ್ದು ಅವುಗಳ ಪಾಲನೆ ಮಾನವ ಸಂಪನ್ಮೂಲ ತನ್ಮೂಲಕ ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಿದಂತೆ. ಆಯೋಗವು ಯುನಿಸೆಫ್ ಸಹಕಾರದಲ್ಲಿ ರಾಜ್ಯದ 6 ಜಿಲ್ಲೆಗಳಲ್ಲಿ ಇಂತಹ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಶೇ. 40 ಕ್ಕೂ ಹೆಚ್ಚಿನ ಮಕ್ಕಳು ಒಂದಿಲ್ಲೊಂದು ಸಮಸ್ಯೆ ಅಥವಾ ಅವರ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಸ್ಪಂದನೆ ಸಿಗುತ್ತಿದೆ. ಅಲೆಮಾರಿ ಜನಾಂಗದ ಮಕ್ಕಳಿಗಾಗಿ ರಾಜ್ಯ ಸಕರ್ಾರ ವಿಶೇಷ ಸೌಲಭ್ಯ ಒದಗಿಸಿದೆ. ಉದ್ಯೋಗ ಕಾರಣದಿಂದ ಕುಟುಂಬಗಳ ವಲಸೆ ಮಕ್ಕಳ ಬೆಳವಣಿಗೆಯಲ್ಲಿ ಬಾಧೆ ಉಂಟು ಮಾಡುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬೆಕಾಗಿದೆ. ಬಾಲ್ಯ ವಿವಾಹ, ಮಕ್ಕಳು ಶಾಲೆಯಿಂದ ಹೊರಗಿರುವ ಅವರಲ್ಲಿನ ಅಪೌಷ್ಟಿಕತೆ ಹೀಗೆ ಹಲವಾರು ಸಮಸ್ಯೆಗಳಿವೆ. ಅಪೌಷ್ಟಿಕತೆ ಕುರಿತಂತೆ ಶೇ. 40 ರಷ್ಟು ಮಕ್ಕಳು ವಿವಿಧ ರೀತಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರ ನಿವಾರಣೆ ನಿಟ್ಟಿನಲ್ಲಿ ಕನರ್ಾಟಕ ರಾಜ್ಯ ಅಪೌಷ್ಟಿಕತೆ ನಿವಾರಣೆ ಕೇಂದ್ರಗಳನ್ನು ಆರಂಭಿಸಿರುವುದು ದಕ್ಷಿಣ ಭಾರತದ ಏಕೈಕ ರಾಜ್ಯವಾಗಿದೆ. ಸಮೀಕ್ಷೆ ರೀತ್ಯ ಶೇ. 38 ರಷ್ಟು ಕಡಿಮೆ ವಯಸ್ಸಿನ ವಿವಾಹಗಳು ಜರುಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದ್ದು ಇದರ ತಡೆಗೆ ಪ್ರತಿಯೊಬ್ಬ ಸಕರ್ಾರಿ ಅಧಿಕಾರಿ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಪ್ರಯತ್ನಿಸಬೇಕು ಎಂದು ವೈ. ಮರಿಸ್ವಾಮಿ ನುಡಿದರು.
ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸದಸ್ಯ ಕೆ.ಬಿ. ರೂಪನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅಂಗನವಾಡಿ ಶಾಲೆಗಳಲ್ಲಿ ಮಕ್ಕಳು ಇಲ್ಲದಿರುವಿಕೆ ಅವರ ಭವಿಷ್ಯಕ್ಕೆ ಮಾರಕವಾಗಿದೆ. ಈ ಕುರಿತು ಎಲ್ಲ ಹಂತದ ಇಲಾಖೆಗಳು, ಶಿಕ್ಷಣ, ಸಾಮಾಜಿಕ ಸಂಸ್ಥೆಗಳು, ಪ್ರತಿ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ನಿಬಾಯಿಸಬೇಕಿದೆ. ಮಕ್ಕಳ ಹಕ್ಕು ರಕ್ಷಣಾ ಕಾಯ್ದೆ ಜಾರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಸಾರ್ವಜನಿಕ ಶಿಕ್ಷಣ, ಪೊಲೀಸ ಅಲ್ಲದೇ ಉಳಿದೆಲ್ಲ ಇಲಾಖೆಗಳು ಹೆಚ್ಚು ಸಕ್ರಿಯವಾಗಬೇಕಿದೆ. ಆದುದರಿಂದ ಈ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಬಾಗವಹಿಸಿದ ಗದಗ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ತಾವು ಶಾಲೆಗಳ ಪರಿಶೀಲನೆ ಸಂದರ್ಭದಲ್ಲಿ ಶಾಲೆ ಬಿಟ್ಟ ಮಕ್ಕಳ ಕುರಿತು ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಪಾಲಕರ ಪಾತ್ರವು ಬಹು ಮುಖ್ಯವಾಗಿರುವುದನ್ನು ಗಮನಿಸಿದ್ದು ಆದುದರಿಂದ ಈ ಕುರಿತಂತೆ ಗ್ರಾಮ ಮಟ್ಟದಲ್ಲಿ ಪಾಲಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಒಟ್ಟಾರೆ ಬೆಳವಣಿಗೆಗೆ ಎಲ್ಲ ಇಲಾಖೆಗಳು ಸಂಘ ಸಂಸ್ಥೆಗಳ ಸಂಘಟಿತ ಯತ್ನ ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾದಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ ಕುರಿತಂತೆ ರಾಜ್ಯ ಸಕರ್ಾರ ಹೊರಡಿಸಿರುವ ಒಟ್ಟಾರೆ ಆದೇಶಗಳನ್ನು ಆಯೋಗವು ಪುಸ್ತಕ ರೂಪದಲ್ಲಿ ಅಧಿಕಾರಿಗಳಿಗೆ ನೀಡುತ್ತಿರುವುದು ಉತ್ತಮ ಹೆಜ್ಜೆಯಾಗಿದೆ ಎಂದರು. ಗದಗ ಜಿಲ್ಲಾಡಳಿತವು ಮಕ್ಕಳ ಹಕ್ಕುಗಳ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಸದಾ ನಿಗಾವಹಿಸಿ ಸಂಬಂಧಿತ ಇಲಾಖೆ, ಸಂಸ್ಥೆಗಳಿಗೆ ಸದಾ ಸ್ಪಂದಿಸುತ್ತಿದೆ. ಸಾಮಾಜಿಕ ಅನಿಷ್ಟವಾದ ಬಾಲ್ಯ ವಿವಾಹ ಯಾವ ಕಾಲಕ್ಕೂ ಕಾರಣಕ್ಕೂ ಆಗದಂತೆ ಹಾಗೂ ಮಕ್ಕಳು ಶಾಲೆ ಬಿಡದಂತೆ ಪ್ರತಿಯೊಬ್ಬ ಸಕರ್ಾರಿ ಅಧಿಕಾರಿ, ಶಿಕ್ಷಕರು ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆ ಸಮನ್ವಯತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿರಂತರ ನಿಗಾ ವಹಿಸಲಾಗಿದೆ. ಎಲ್ಲರಲ್ಲೂ ಒಂದು ಮಗುವಿದೆ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತ ಕೈಲಾಸ ಸತ್ಯಾಥರ್ಿ ಅವರ ಮಾತನ್ನು ನಾವು ಸದಾ ನೆನಪಿಟ್ಟುಕೊಂಡು ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ ವೇದಿಕೆ ಮೇಲಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ ಸರ್ವರನ್ನು ಸ್ವಾಗತಿಸಿದರು. ಸಕರ್ಾರಿ ಬಾಲಮಂದಿರ ಮಕ್ಕಳು ಪ್ರಾರ್ಥನೆ ಹಾಗೂ ಬನ್ನಿ ಮಕ್ಕಳ ಪ್ರೀತಿಸಿರಿ ... ಆ ಪ್ರೀತಿ ಎಂದೂ ಅಳಿಯದು ಎನ್ನುವ ಗೀತೆಯನ್ನು ಪ್ರಸ್ತುತಿಸಿದರು. ಯುನಿಸೆಫ್ ಸಂಸ್ಥೆ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಭಟ್ ಅವರು ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ವಿಸ್ತೃತ ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಪದಾಧಿಕಾರಿಗಳು ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪದಾಧಿಕಾರಿಗಳು ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು.