ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ವಿಕಸನಕ್ಕೆ ವಿಜ್ಞಾನ ಕೌಶಲ್ಯ ಅಗತ್ಯ- ಪ್ರೊ.ನಂದ್ಯಾಲ
ರಾಣೇಬೆನ್ನೂರು 18 : ಮಕ್ಕಳ ಸಮಗ್ರ ವಿಕಾಸತೆ ಮತ್ತು ಸೃಜನಾತ್ಮಕ ಕ್ರಿಯಾಶೀಲ ಚಟುವಟಿಕೆಗಳು ಇಂದಿನ ಅಗತ್ಯವಿದೆ ಎಂದು ನಿವೃತ್ತ ಉಪನ್ಯಾಸಕ ಪ್ರೊ, ಬಿ.ಬಿ. ನಂದ್ಯಾಲ ಹೇಳಿದರು. ಶುಕ್ರವಾರ, ವೀರಭದ್ರೇಶ್ವರ ನಗರದ, ವಿಕಾರ್ಡ್ ಶಿಕ್ಷಣ ಸಂಸ್ಥೆಯ, ನ್ಯೂ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕರಲ್ಲಿ ಸ್ಪರ್ಧಾ ಮನೋಭಾವನೆ ಜೊತೆಗೆ ವೃತ್ತಿ ಕೌಶಲ್ಯತೆ ಇದ್ದರೇ ಅವರಲ್ಲಿ ಕಲಿತ ಮಕ್ಕಳು ಮತ್ತಷ್ಟು ಸೃಜನಶೀಲತೆ ಅಳವಡಿಸಿಕೊಳ್ಳುತ್ತಾರೆ ಅಂತಹ ಪವಿತ್ರವಾದ ಕಾರ್ಯದಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು. ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ಎಸ್.ಡಿ. ಬಳಿಗಾರ ಅವರು, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ, ಪ್ರತಿಭೆಗೆ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಇಂದು ಪ್ರದರ್ಶನಗೊಂಡಿರುವ, ವಿಜ್ಞಾನ ಮೇಳದಲ್ಲಿ ಸಾಕಷ್ಟು ಜ್ಞಾನ ಪ್ರತಿಭೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸತೆಗೆ ಸಾಕ್ಷಿಯಾಗಿದೆ ಎಂದರು.ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿದ ಹಿರಿಯ ನ್ಯಾಯವಾದಿ ಎ.ಎಂ. ನಾಯ್ಕ ಅವರು, ಶಿಕ್ಷಣ ಸಂಸ್ಥೆ ಅತ್ಯುತ್ತಮ ವ್ಯವಸ್ಥೆ ಮಾಡಿ ಮಕ್ಕಳೆಲ್ಲರೂ ವ್ಯಕ್ತಿತ್ವ ನಿರ್ಮಾಣ ಪ್ರತಿಭೆಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು. ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಸಣ್ಣಗೌಡ್ರು, ಗ್ರೀನ್ ಫ್ರೆಶ್ ಸಂಸ್ಥಾಪಕ ಕರಬಸಪ್ಪ ಜಾಡರ, ಶಿಕ್ಷಣ ತಜ್ಞ ಚಂದ್ರಶೇಖರ್ ಗಂಗನಗೌಡ್ರು, ವರ್ತಕ ವಾಸುದೇವ್ ಗುಪ್ತಾ, ಮೊದಲಾದವರು ಮಾತನಾಡಿದರು. ವಿಕಾರ್ಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಏಕಾಂತ್ ಮುದಿಗೌಡರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಡಾ. ಸಂದೀಪ್ ನಾಯಕ್, ನಿವೃತ್ತ ಶಿಕ್ಷಕ ವಿ.ವಿ.ಪಾಟೀಲ್,"ಅಭಿರುಚಿ "ಕೆ. ಎಸ್. ನಾಗರಾಜ್.ಅಭಿಯಂತ ಸಾತ್ವಿಕ್ ಕುಸಗೊರ,ಬಿ. ಆರ್. ಸಿ.ಮಂಜು ನಾಯ್ಕ್,ಸಿ, ಆರಿ್ಪ. ತುಳಜಾ ಭವಾನಿ, ಮುಖ್ಯೋಪಾಧ್ಯಾಯ ಬಸವರಾಜ ಶಿಡೇನೂರ, ಎಂ. ಎನ್. ಸಣ್ಣಿಂಗಣ್ಣನವರ, ಆಡಳಿತಾಧಿಕಾರಿಗಳಾದ, ಸೌಮ್ಯ ಕೆ.ಜೆ, ದಿನೇಶ್ ಹೆಚ್.ಆರ್, ಪ್ರಧಾನ ಗುರುಮಾತೆ ವಂದನಾ ಭಾನುವಳ್ಳಿಕರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಕ್ಷಾ - ವರ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶೃತಿ ದೊಡ್ಡಗೌಡ್ರ, ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ವಿನೋದಮ್ಮ ಎಚ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮೇಘನಾ ಮಾಕನೂರ ನಿರೂಪಿಸಿ, ಚಂದ್ರಕಲಾ ಬಿರಾಳ, ವಂದಿಸಿದರು. ಮುಂಜಾನೆಯಿಂದ ಸಂಜೆಯವರೆಗೂ ನಡೆದ ಜ್ಞಾನ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ವೈವಿಧ್ಯಮಯ ವಿಜ್ಞಾನ ವಸ್ತು ಪ್ರದರ್ಶನಗಳು ಸಹಸ್ರಾರು ಪಾಲಕರ ಗಮನ ಸೆಳೆದವು. ಇತ್ತ ಕಡೆ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳಿಂದ ವ್ಯವಹಾರಿಕ ಜ್ಞಾನ ಕೌಶಲ್ಯತೆಯ ರೈತ ಸಂತೆ ಪ್ರದರ್ಶಿಸಿ ತಮ್ಮ ವ್ಯವಹಾರಿಕ ಜ್ಞಾನ ಮೆರೆದರು.