ಮಕ್ಕಳ ದಿನಾಚರಣೆ ಕಾರ‌್ಯಕ್ರಮ

Children's Day Program

ಮಕ್ಕಳ ದಿನಾಚರಣೆ ಕಾರ‌್ಯಕ್ರಮ 

ರಾಣಿಬೆನ್ನೂರ 19: ಮಕ್ಕಳ ಮನಸ್ಸು ಮೃದುವಾಗಿ, ಮೊಗ್ಗುಗಳೆಲ್ಲಾ ಹೂವಾಗಿ, ನಿನ್ನ ಬಾಳು ನಯವಾಗಿ, ಸುಂದರ ಬದುಕು ನಿನಾಗಿ. ನೀ ಆ ದೇವರ ರೂಪ, ನೋಡಲು ಬಹು ಅಪರೂಪ. ನಿತ್ಯವೂ ಒಂದು ದಿನ ಈ ದಿನ ನಿನ್ನ ದಿನ ಅದುವೇ ಈ ಮಕ್ಕಳ ದಿನ ಎಂದು ಶಿಕ್ಷಕ ನಾಗರಾಜ ಹೇಳಿದರು.   

   ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇವರನ್ನು ಕಂಡ ಮಾನವತಾವಾದಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಎಂದರು. 

   ಮುಖ್ಯೋಪಾಧ್ಯಾಯ ಚನ್ನಬಸಪ್ಪ,  ಲತಾ ಸಿ ಎಸ್,  ಮಹಮ್ಮದರಫಿಕ್ ರಟ್ಟಿಹಳ್ಳಿ, ನಾಗರಾಜ್ ಎಮ್, ಪುಷ್ಪ ಉಜ್ಜೇರ್, ಆಶಾ ಬಿ.ಎ, ಗೀತಾ ಕಮ್ಮಾರ, ಪ್ರವೀಣಗೌಡ ಪಾಟೀಲ್, ಶಹರಬಾನು ಹಾಜೀ, ಮಮತ ಕೆ.ಎಮ್, ುಐಶ್ವರ್ಯ ಎಸ್, ಚೈತ್ರ ಸಿ.ಪಿ, ದೀಪಾ ಕೆ, ಅನೀತಾ ಪಿ.ಎಮ್ ಈರಮ್ಮ, ಬಸವರಾಜ ಕಣವಿ, ಸಂತೋಷ ಡೊಕ್ಕೆರ್ ಹಾಗೂ ವಿದ್ಯಾರ್ಥಿಗಳು  ಇದ್ದರು.