ಧಾರವಾಡ 11: ಮಕ್ಕಳು ದೇಶದ ನಿಜವಾದ ಸಂಪತ್ತು. ಮಕ್ಕಳ ಬಾಲ್ಯ ಅವರ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಸಂಧಿ ಕಾಲವಾಗಿದೆ ಎಂದು 'ಧ್ವನಿ' ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ನಿದರ್ೇಶಕರಾದ ಶಿವಾನಂದ ಹೊಂಬಳ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಕ.ವಿ.ವ ಸಂಘದ ಮಕ್ಕಳ ಮಂಟಪ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಸ್ಕಿನ್ ಬಾಂಡ್ ಮತ್ತು ಗಣೇಶ ನಾಡೋರ ಅವರ 'ಮಕ್ಕಳ ಕಥೆಗಳ ಕುರಿತು ಮಕ್ಕಳ ಮಾತು'' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಮಕ್ಕಳ ಉಜ್ವಲ ಭವಿಷ್ಯಕ್ಕೆ, ಸಂಸ್ಕಾರಯುತ ಜೀವನಕ್ಕೆ ಕಥೆಗಳೇ ಮೂಲಾಧಾರ. ವಿದ್ಯಾಥರ್ಿಗಳು ತಾವು ಓದಿದ ಕಥೆಗಳನ್ನು ಅನುಭವಿಸಿ ಆರೋಗ್ಯಕರ ಸಮಾಜ ಕಟ್ಟಲು ಪ್ರಯತ್ನಿಸಬೇಕು. ಸುಂದರವಾದ ನಾಳಿನ ಬದುಕಿಗೆ ಕಥೆಗಳೇ ಜೀವ ಸೆಲೆಗಳಾಗಿವೆ. ರಸ್ಕಿನ್ ಬಾಂಡ್ ಮತ್ತು ಗಣೇಶ ನಾಡೋರ ಅವರ ಕಥೆಗಳಲ್ಲಿಯ ಪರಿಸರ ಪ್ರೀತಿ ಮತ್ತು ಪ್ರಾಣಿಗಳ ಬಗ್ಗೆ ಇರುವ ಅನುಕಂಪದ ಸಾಮ್ಯತೆಯನ್ನು ಮಕ್ಕಳು ಅರಿತುಕೊಂಡು, ಆ ಕಥೆಗಳನ್ನು ಸ್ವಾರಸ್ಯಕರ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದನ್ನು ಕೊಂಡಾಡಿದರು.
ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಕಥೆಗಳು ಪೂರಕವಾಗಿದ್ದು ಮಕ್ಕಳಲ್ಲಿ ವಿಚಾರ ಶಕ್ತಿ, ಗ್ರಹಣ ಶಕ್ತಿ, ಕತೃತ್ವ ಶಕ್ತಿಗಳಿಗೆ ಪುಷ್ಠಿ ನೀಡಬಲ್ಲವು. ಆ ಕುರಿತಾಗಿ ಕನರ್ಾಟಕ ವಿದ್ಯಾವರ್ಧಕ ಸಂಘವು ಮಕ್ಕಳ ಮಂಟಪದ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ, ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ) ಮಾತನಾಡಿ, ಮಕ್ಕಳ ಕಥೆಗಳಲ್ಲಿ ಪ್ರಕೃತಿಯನ್ನೊಳಗೊಂಡು ಸರ್ವರನ್ನು ಪ್ರೀತಿಸುವ ತಾತ್ವಿಕ ವಿಚಾರಗಳಿದ್ದು, ದೇಶ ಹಾಗೂ ಭಾಷೆಯನ್ನು ಗೌರವಿಸುವ ಉದಾತ್ತ ಗುಣಗಳಿವೆ. ವಿದ್ಯಾಥರ್ಿಗಳ ಬದುಕಿಗೆ ಕಥೆಗಳು ಕೇವಲ ಕಥೆಗಳಲ್ಲ, ಜೀವನದ ಆಧಾರ ಸ್ತಂಭಗಳು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಆನಂದ ಪಾಟೀಲ, ಜಿ.ಬಿ. ಹೊಂಬಳ ಕಥೆಗಳ ಸಾರ ಹಾಗೂ ವಿಶ್ಲೇಷ ಕುರಿತು ಮಾರ್ಗದರ್ಶನ ಮಾಡಿದರು. ಲೇಖಕ ಗಣೇಶ ನಾಡೋರ ಮಾತನಾಡಿ, ತಾವು ರಚಿಸಿದ ಕಥೆಗಳನ್ನು ಮಕ್ಕಳು ಕಥೆಗಳ ತಿರುಳನ್ನು ಅರಿತುಕೊಂಡು ಮಾಮರ್ಿಕವಾಗಿ ಮನಮುಟ್ಟುವಂತೆ ವೇದಿಕೆಯಲ್ಲಿ ಯಾವ ಅಳುಕಿಲ್ಲದೇ ಹೇಳಿದ್ದನ್ನು ಪ್ರಶಂಸಿದರು.
ಪ್ರಜೆಂಟೇಶನ್ ಬಾಲಕಿಯರ ಶಾಲೆ ಹಾಗೂ ಮಲ್ಲಸಜ್ಜನ ಶಾಲಾ ಮಕ್ಕಳು ರಸ್ಕಿನ್ ಬಾಂಡ್ ಹಾಗೂ ಗಣೇಶ ನಾಡೋರ ಕೃತಿಗಳಲ್ಲಿಯ ಜೀವನ ಮೌಲ್ಯ, ನೈತಿಕ ವಿಚಾರ, ಕಥೆಯ ಸಾರಾಂಶಗಳನ್ನು ಅಭಿವ್ಯಕ್ತಪಡಿಸಿದರು.
ಧಾರವಾಡ ಪ್ರಜಂಟೇಶನ್ ಬಾಲಕಿಯರ ಪ್ರೌಢಶಾಲೆಯ ಮಕ್ಕಳಾದ ಶ್ರೀನಿಧಿ, ಚೈತನ್ಯಾ ಬೀಳಗಿ, ನಮನಾ ಭಟ್, ದೀಕ್ಷಾ ಜೋಶಿ, ಪ್ರಾರ್ಥನಾ ಹಿರೇಮಠ, ಅಪೇಕ್ಷಾ ಬನ್ನಿಗಿಡದ, ತನುಜಾ ಕೆ. ಮತ್ತು ಸುಷ್ಮಾ ಹಾಗೂ ಮಲ್ಲಸಜ್ಜನ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮಕ್ಕಳಾದ ಪ್ರತೀಕಾ ಶೆಟ್ಟಿ, ಸಂಜನಾ ಕಾಟೆಣ್ಣವರ್, ಪೂಣರ್ಿಮಾ ಕಣಾಜೆ, ವೈಶಾಲಿ ಬೆನ್ನಪ್ಪನವರ್, ಸ್ಪಂದನಾ ನವಲಗುಂದ, ಸೌಮ್ಯ ಅಷ್ಟಗಿ, ನಾಝ್ ಅನಿ, ಅನುಷಾ ಶಿಷಂಬ್ರಮಠ, ಸೋನಿಯಾ ಇಂಗಳಗಿ, ನಿಖಿಲ ಬಡಿಗೇರ, ಯಶ್ ಪವಾರ, ವೀರೇಶ ತೋರಣಗಟ್ಟಿ ಹಾಗೂ ಸುಜಲ ಸೂರ್ಯವಂಶಿ ಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಥೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಮಕ್ಕಳ ಸಾಹಿತ್ಯದ ಗ್ರಂಥಗಳನ್ನು ವಿತರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಮಂಟಪದ ಸಂಚಾಲಕರಾದ ಶಿವಾನಂದ ಭಾವಿಕಟ್ಟಿ ಹಾಗೂ ಕು. ಸಾಕ್ಷಿ ಚೊಳ್ಳಿ, ವೈಷ್ಣವಿ ಕಾಟೆಣ್ಣವರ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಸಲಹಾ ಸಮಿತಿ ಸದಸ್ಯರಾದ ಶ್ರೀಶೈಲ ರಾಚಣ್ಣವರ, ಶ್ರೀಮತಿ ಸೀತಾ ಛಪ್ಪರ, ಹಾಗೂ ಗುರು ಹಿರೇಮಠ, ಎಚ್.ಡಿ. ನದಾಫ್ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಹಾಗೂ ಕವಿ, ಸಾಹಿತಿ ಎ.ಎ. ದಗರ್ಾ, ಪ್ರಕಾಶಕ ಎಸ್.ಆರ್. ಸುರಕೋಡ, ಎಸ್.ಕೆ. ಪಾಟೀಲ ಸೇರಿದಂತೆ ಅನೇಕರ ಪಾಲ್ಗೊಂಡಿದ್ದರು.