ಧಾರವಾಡ 09: ಎರಡು ಕೈ ಜೋಡಿಸಿದಾಗ ಮಾತ್ರ ಚಪ್ಪಾಳೆ ಆಗಲು ಸಾಧ್ಯ. ಅಲ್ಲಿ ಸಮಬಲವಾಗಿ ಎರಡೂ ಕೈಗಳು ಕೆಲಸ ಮಾಡಿದಾಗ ಸರಿಯಾದ ಚಪ್ಪಾಳೆ ಸದ್ದು ಕೇಳಿಸುವುದು. ಹಾಗೆ ಒಂದು ಮಗುವಿನ ಪ್ರತಿಭೆ ಹೊರಬರಬೇಕೆಂದರೆ ಪಾಲಕರು ಮತ್ತು ಶಿಕ್ಷಕರು ಎರಡು ಕೈಗಳಂತೆ ಒಟ್ಟಿಗೆ ಕಾರ್ಯಮಾಡಿದಾಗ ಮಾತ್ರ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದು ಧಾರವಾಡ ಗ್ರಾಮೀಣ -71ರ ಶಾಸಕ ಅಮೃತ ದೇಸಾಯಿ ಮಾತನಾಡಿದರು.
ಅವರು ಮಾಳಾಪೂರದಲ್ಲಿರುವ ಗುಬ್ಬಚ್ಚಿ ಗೂಡು ಶಾಲೆಯ ಪಾಲಕರು ಮತ್ತು ಮಕ್ಕಳ ಪ್ರತಿಭೋತ್ಸವ ಅಂಗವಾಗಿ ಎಎಫ್ಎಸ್ ಹಾಲ್ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಯಾವ ಮಗುವೂ ಹುಟ್ಟಿನಿಂದ ದಡ್ಡ ಅಥವಾ ಜಾನ ಇರುವುದಿಲ್ಲ. ಅವರಿಗೆ ಸರಿಯಾದ ಅವಕಾಶ ಮತ್ತು ಮಾರ್ಗದರ್ಶನದ ಕೊರತೆಯಿಂದ ನಾವು ಅವರಿಗೆ ದಡ್ಡ ಎಂದು ಹಣೆೆಪಟ್ಟಿ ಕಟ್ಟಿಬಿಡುತ್ತೇವೆ. ಇದರಿಂದ ಅಂಥ ಮಕ್ಕಳಲ್ಲಿ ಹಿಂಜರಿಕೆ ಹೆಚ್ಚುತ್ತಲೇ ಹೋಗುತ್ತದೆ. ಹಾಗಾಗದಂತೆ ಪಾಲಕರು ಮತ್ತು ಶಿಕ್ಷಕರು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಇಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ ದೇಸಾಯಿ, ಶಾಲೆ ಪ್ರಾರಂಭಿಸುವುದೆಂದರೆ ಹಣ ಮಾಡುವ ಒಂದು ಉದ್ಯಮವಾಗಿ ಪರಿವರ್ತನೆಗೊಂಡಿದೆ. ಇಂಥ ಕಾಲಘಟ್ಟದಲ್ಲಿ ಗುಬ್ಬಚ್ಚಿ ಗೂಡು ಶಾಲೆ ಹಿಂದುಳಿದ ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಡುತ್ತಿರುವ ಶ್ರಮ ಮಾದರಿಯಾಗಿದೆ ಎಂದು ಶಿಕ್ಷಕಿಯರನ್ನು ಅಭಿನಂದಿಸುತ್ತಾ, ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಹಾಯ ಮಾಡುವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಮಾತನಾಡಿ, ಶಾಲೆ ಪ್ರಾರಂಭವಾದಾಗಿನಿಂದ ನೋಡುತ್ತಿದ್ದೇನೆ. ಇಲ್ಲಿ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತದೆ. ಈ ಶಾಲೆ ಬರೀ ಶಾಲೆಯಾಗಿರದೇ ಪಾಲಕರ ಸುಖ ದುಃಖದಲ್ಲಿ ಭಾಗಿಯಾಗಿ ಮಕ್ಕಳ ಮನೆಯಲ್ಲೂ ಕಲಿಕೆಯ ವಾತಾವರಣ ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಶಾಲೆಗಳಿಗೆ ಇಲಾಖೆಯೂ ಸಹಕಾರ ನೀಡಿ ಪ್ರೋತ್ಸಾಹಿಸುವುದರ ಮೂಲಕ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದ ಅಷ್ಟಗಿ ಪ್ರಾಮಾಣಿಕ ಮತ್ತು ಸಾಮಾಜಿಕ ಕಾಳಿಯೊಂದಿಗೆ ಕಾರ್ಯಮಾಡುತ್ತಿರುವ ಈ ಶಾಲೆಯನ್ನು ಸಮಾಜವೂ ಬೆಂಬಲಿಸಬೇಕು ಎಂದರು.
ಇನ್ನೊಬ್ಬ ಅತಿಥಿಯಾಗಿದ್ದ ಎಎಸ್ಎಫ್ ಸಭಾಭವನದ ಮಾಲಿಕ ನಿಜಾಮುದ್ದಿನ ಶೇಖ ಮಾತನಾಡಿ, ದೇಹದಲ್ಲಿ ಎಲ್ಲ ಭಾಗಗಳು ಸರಿಯಾಗಿ ಕೆಲಸ ಮಾಡಿದರೆ ಮನುಷ್ಯ ಸದೃಢವಾಗಿ ಬಾಳಲು ಸಾಧ್ಯ. ಹಾಗೆಯೇ ದೇಶವೂ ಆಗಿದೆ. ಸದೃಢ ದೇಶ ಮತ್ತು ಸಮಾಜ ಬೆಳೆಯಬೇಕೆಂದರೆ ಮಕ್ಕಳಿಗೆ ಸಮಾನತೆಯ ಮಂತ್ರ ಹೇಳಿಕೊಡಬೇಕು. ಅವರಲ್ಲಿ ಭೇದ ಭಾವ ಮೂಡದಂತೆ ಶಿಕ್ಷಣ ನೀಡಬೇಕಾಗಿದೆ ಸಮಾಜದಲ್ಲಿ ಎಲ್ಲ ಧರ್ಮವೂ ಸಮಾನವಾಗಿವೆ ಅವೆಲ್ಲವೂ ಸರಿಯಾಗಿ ಇದ್ದಾಗಲೇ ಸಮಾಜ, ರಾಷ್ಟ್ರ ಸರಿ ಇರಲು ಸಾಧ್ಯ. ದೇಹದ ಯಾವುದೇ ಒಂದು ಅಂಗ ಊನವಾದರೆ ಹೇಗೆ ತೊಂದರೆಯಾಗುತ್ತದೆಯೋ ಹಾಗೆ ಯಾವುದೇ ವರ್ಗದ ಜನಸಮುಹಕ್ಕೆ ತೊಂದರೆ ಯಾದರೆ ದೇಶ ಊನವಾದಂತಾಗುತ್ತದೆ. ಮಕ್ಕಳಲ್ಲಿ ಸಹೋದರತ್ವದ ಭಾವನೆ ತುಂಬುವಂತೆ, ಮಾತೃಭಾಷೆಯ ಬಗ್ಗೆ ಅಭಿಮಾನ ಹೊಂದುವಂತೆ ಶಿಕ್ಷಣ ನೀಡುವಂತಾದಾಗ ಅವರಲ್ಲಿ ನಿಜವಾದ ರಾಷ್ಟ್ರ ಪ್ರೇಮ ಹುಟ್ಟಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಮಂಜುನಾಥ ಚೋಳನ್ನವರ ಮಾತನಾಡಿದರು. ಶಂಕರ ಹಲಗತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ನಿವೃತ್ತ ಶಿಕ್ಷಕರಾದ ಎಂ. ಎಂ. ಚಿಕ್ಕಮಠ, ಸಂಪನ್ಮೂಲ ವ್ಯಕ್ತಿ ವಿ.ಎನ್. ಕೀತರ್ಿವತಿ, ಎಎಸ್ಎಫ್ ಸಭಾಭವನದ ಮ್ಯಾನೇಜರ್ ವೇದಿಕೆ ಮೇಲಿದ್ದರು. ಲಕ್ಷ್ಮಿ ಜಾಧವ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಆಡಳಿತಾಧಿಕಾರಿ ಸ್ವಾಗತಿಸಿ ವಂದಿಸಿದರು.
ನಂತರ ಮಕ್ಕಳು ಪ್ರದಶರ್ಿಸಿದ ಪ್ರತಿಭೆಯನ್ನು ವೀಕ್ಷಿಸಿ ಮಕ್ಕಳಿಗೆ ಪ್ರೇರಣೆ ನೀಡಿದರು. ನೂರಾರು ಪಾಲಕರು ಮಕ್ಕಳ ಪ್ರತಿಭೆ ತೋರಿಸುವಲ್ಲಿ ಸಹಾಯಮಾಡಿ ಮಕ್ಕಳ ಕಲಿಕೆಯಲ್ಲಿ ಸಹಾಯ ಮಾಡಿದ್ದು ಎದ್ದು ಕಾಣುತ್ತಿತ್ತು.