ಚಿಕ್ಕೋಡಿ-ಸದಲಗಾ ಮಾದರಿ ಕ್ಷೇತ್ರವಾಗಿ ರೂಪುಗೊಂಡಿದೆ: ಪ್ರಕಾಶ ಹುಕ್ಕೇರಿ

Chikkodi-Sadalaga has emerged as a model constituency: Prakash Hukkeri

ಚಿಕ್ಕೋಡಿ-ಸದಲಗಾ ಮಾದರಿ ಕ್ಷೇತ್ರವಾಗಿ ರೂಪುಗೊಂಡಿದೆ: ಪ್ರಕಾಶ ಹುಕ್ಕೇರಿ 

ಚಿಕ್ಕೋಡಿ 09: ಚಿಕ್ಕೊಡಿ-ಸದಲಗಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ರೈತರ ಜಮೀನುಗಳಿಗೆ ಸಮರ​‍್ಕ ನೀರು ಒದಗಿಸಲು ಪ್ರಮುಖ ಆಧ್ಯತೆ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿಯೇ ಚಿಕ್ಕೋಡಿ-ಸದಲಗಾ ಕ್ಷೇತ್ರ ಮಾದರಿ ಕ್ಷೇತ್ರವಾಗಿ ರೂಪುಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. 

ರವಿವಾರ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಾಲ್ಕು ಎಕರೆ ಪ್ರದೇಶದ 22 ಕೋಟಿ ರೂ ವೆಚ್ಚದಲ್ಲಿ ಡಾ, ಬಾಬಾಸಾಹೇಬ ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ಚಿಕ್ಕೋಡಿ-ಸದಲಗಾ ಕ್ಷೇತ್ರ ವ್ಯಾಪ್ತಿಯ ಶಿರಗಾಂವ ಗ್ರಾಮದಲ್ಲಿ ಕಳೆದ 2017ರಲ್ಲಿ ಡಾ, ಬಿ.ಆರ್‌.ಅಂಬೇಡ್ಕರ ಬಾಲಕಿಯರ ವಸತಿ ಶಾಲೆ ಮಂಜೂರಾಗಿ ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆ ಕಾರಾ​‍್ಯರಂಭ ಮಾಡಿತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ, ಸಚಿವ ಎಚ್‌.ಸಿ.ಮಹದೇವಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿಶೇಷ ಪ್ರಯತ್ನದಿಂದ ಸವತಿ ನಿಲಯ ನೂತನ ಕಟ್ಟಡಕ್ಕೆ 22 ಕೋಟಿ ರೂ ಮಂಜೂರಾಗಿದೆ ಎಂದರು. 

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಶಾಸಕ ಗಣೇಶ ಹುಕ್ಕೇರಿ ವಿಶೇಷ ಪ್ರಯತ್ನದಿಂದ ಯಕ್ಸಂಬಾ ಮತ್ತು ಸದಲಗಾ ಪಟ್ಟಣದಲ್ಲಿ ಎರಡು ಮೋರಾರ್ಜಿ ವಸತಿ ಶಾಲೆ, ಹಿರೇಕೊಡಿ ಗ್ರಾಮದಲ್ಲಿ ಅಲ್ಪಸಂಖ್ಯಾತ ಮೋರಾರ್ಜಿ ವಸತಿ ಶಾಲೆ, ಖಡಕಲಾಟ ಗ್ರಾಮದಲ್ಲಿ ಅಟಲಬಿಹಾರಿ ವಾಜಪೇಯಿ ವಸತಿ ಶಾಲೆ, ಯಕ್ಸಂಬಾ ಮತ್ತು ಸದಲಗಾ ಪಟ್ಟಣದಲ್ಲಿ ಮೌಲನಾ ಅಬ್ದುಲ್ ಕಲಾಂ ವಸತಿ ವಸತಿ ಶಾಲೆ, ಚಿಕ್ಕೋಡಿ ಮತ್ತು ಸದಲಗಾ ಪಟ್ಟಣದಲ್ಲಿ ಕೇಂದೀಯ ಶಾಲೆಯ ಒಟ್ಟು 4068 ಮಕ್ಕಳು ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಮುಂದಿನ ವರ್ಷದ ಒಳಗಾಗಿ ಖಡಕಲಾಟ ಗ್ರಾಮದಲ್ಲಿ ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ವಿಶೇಷ ಕಟ್ಟಡ ಮಂಜೂರು ಮಾಡಿಸಲಾಗುತ್ತದೆ ಎಂದರು. 

ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆ ಸುಧಾರಣೆಗೆ ಈಗಾಗಲೇ ವಿಶೇಷ ಅನುದಾನ ಮಂಜೂರಾಗಿದೆ. ಕಬ್ಬಿನ ಹಂಗಾಮು ಆರಂಭ ಇರುವುದರಿಂದ ಕಾಮಗಾರಿಗೆ ಅಡಚಣೆ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ಕಾಮಗಾರಿ ಆರಂಭ ಮಾಡಿರಲಿಲ್ಲ, ಇದೀಗ ಕಬ್ಬಿನ ಹಂಗಾಮು ಮುಕ್ತಾಯವಾಗಿದೆ. ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಕ್ತಾಯಗೊಳಿಸಿ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಿಸಲಾಗುತ್ತದೆ ಎಂದರು. 

ವಸತಿ ಶಾಲೆಗಳು ಅನೇಕ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸವತಿ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮಕ್ಕಳ ಭವಿಷ್ಯ ನಿರ್ಮಾಣದತ್ತ ದೊಡ್ಡ ಹೆಜ್ಜೆಯಾಗಲಿದೆ. ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ವಸತಿ ಶಾಲೆ ಕಟ್ಟಡ ಪೂರ್ಣಗೊಳ್ಳಲು ಕ್ರಮವಹಿಸಬೇಕು ಎಂದು ಸೂಚಿಸಿದರು. 

ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಪ್ರಕಾಶ ಮಾನೆ, ಶಿಕ್ಷಕ ಸಿದ್ದು ಧುಪದಾಳ ಮಾತನಾಡಿದರು. 

ವೇದಿಕೆ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಗೋಣಿ ತಹಶೀಲ್ದಾರ. ಉಪಾಧ್ಯಕ್ಷ ಬಾಬು ಲಾಟಕರ. ದುರೀಣ ಕಿರಣ ಪಾಟೀಲ.ರಾಕೇಶ ಚಿಂಚಣಿ. ರಾಯಪ್ಪ ಬನ್ನೆ, ಭೀಮಾ ಉದಗಟ್ಟಿ, ಬಸವರಾಜ ಕೇಸರ.ಎಸ್‌.ಜಿ.ಕುಂಬಾರ. ದಲಿತ ಮುಖಂಡರಾದ ಎಂ.ಆರ್‌.ಮುನ್ನೋಳ್ಳಿಕರ. ಸುದರ್ಶನ ತಮ್ಮನ್ನವರ. ರಾವಸಾಹೇಬ ಫಕೀರೆ, ಮಾರುತಿ ಕವಲಾಪೂರೆ. ಮಲ್ಲು ಕೋರೆ ಮುಂತಾದವರು ಇದ್ದರು.