ಚಿದಾನಂದ ಹಾರೂಗೇರಿಗೆ ಪಿಎಚ್.ಡಿ ಪದವಿ ಪ್ರದಾನ
Chidananda Harugeri awarded Ph.D. degree
ಚಿದಾನಂದ ಹಾರೂಗೇರಿಗೆ ಪಿಎಚ್.ಡಿ ಪದವಿ ಪ್ರದಾನ
ಬೆಳಗಾವಿ 01: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಚಿದಾನಂದ ಹಾರೂಗೇರಿ ಅವರಿಗೆ ಇತ್ತೀಚೆಗೆ ಆರ್‌ಸಿಯು ಪಿಎಚ್.ಡಿ ಪದವಿ ನೀಡಿದೆ.
ಚಿದಾನಂದ ಹಾರೂಗೇರಿ ಅವರು ಆರ್‌ಸಿಯು ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಹೇಶ್ವರಿ ಕಾಚಾಪುರ ಅವರ ಮಾರ್ಗದರ್ಶನದಲ್ಲಿ “ ಎ ಸ್ಟಡಿ ಆಫ್ ಕ್ರಿಮಿನಲ್ ಆ್ಯಂಡ್ ಸೋಶಿಯಲ್ ಬಿಹೇವಿಯರ್ ಆಫ್ ಹ್ಯಾಬಿಚುವಲ್ ಆಫೆಂಡರ್ಸ್ ಇನ್ ನಾರ್ಥ ಕರ್ನಾಟಕ” ಎಂಬ ವಿಷಯದ ಕುರಿತಾಗಿ ಮಹಾಪ್ರಬಂಧ ಆರ್‌ಸಿಯುಗೆ ಸಲ್ಲಿಸಿ, ಸಂಶೋಧನಾ ವಿಷಯವನ್ನು ಮಂಡಿಸಿದ್ದರು.
ಉತ್ತರ ಕರ್ನಾಟಕದ ವಿವಿಧ ಪ್ರಮುಖ ಕೇಂದ್ರ ಕಾರಾಗೃಹದಲ್ಲಿರುವ ಅಪರಾಧಿಗಳ ಅಪರಾಧಿಕ ಮತ್ತು ಸಾಮಾಜಿಕ ನಡವಳಿಕೆ, ವರ್ತನೆ, ಆರ್ಥಿಕ ಸ್ಥಿತಿಗತಿ ಮತ್ತು ಮಾನಸಿಕ ಅವಸ್ಥೆ ಈ ಸಂಶೋಧನಾ ಕಾರ್ಯವು ಬೆಳಕು ಚೆಲ್ಲುತ್ತದೆ. ಇವರ ಸಾಧನೆಗೆ ವಿಭಾಗದ ಎಲ್ಲ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಹಾರೂಗೇರಿ ಕುಟುಂಬ ಮತ್ತು ಪರಿವಾರದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 