ಛತ್ರಪತಿ ಶಿವಾಜಿ ಮಹಾರಾಜರು ಭಾಷೆ, ಪ್ರದೇಶಕ್ಕೆ ಸೀಮಿತರಾಗದ ದೇಶಭಕ್ತರು: ಬಸವರಾಜ ಬೊಮ್ಮಾಯಿ

Chhatrapati Shivaji Maharaj was a patriot not limited by language, region: Basavaraja Bommai

ಛತ್ರಪತಿ ಶಿವಾಜಿ ಮಹಾರಾಜರು ಭಾಷೆ, ಪ್ರದೇಶಕ್ಕೆ ಸೀಮಿತರಾಗದ ದೇಶಭಕ್ತರು: ಬಸವರಾಜ ಬೊಮ್ಮಾಯಿ  

 ಶಿಗ್ಗಾವಿ   24: ಶಿವಾಜಿ ಮಹಾರಾಜರು ರಾಷ್ಟ್ರ ಭಕ್ತರು, ಅವರು ಯಾವುದೇ ಪ್ರದೇಶ, ಭಾಷೆಗೆ ಸೀಮಿತವಾದವರಲ್ಲ, ದೇಶ ಭಕ್ತರಿಗೆ ಜಾತಿ, ಮತ, ಪ್ರದೇಶದ ಮಿತಿ ಇರುವುದಿಲ್ಲ. ಶಿವಾಜಿ ಮಹಾರಾಜರು ಇದೆಲ್ಲವನ್ನೂ ಮೀರಿದವರು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.  ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಸಮಾಜ ತಾಲೂಕ ಹಾಗೂ ಶಹರ ಘಟಕದ ವತಿಯಿಂದ ಏರಿ​‍್ಡಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398 ನೇಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತ ದೇಶದಲ್ಲಿ ಹುಟ್ಟಿರುವ ನಾವೆಲ್ಲ ಪುಣ್ಯವಂತರು, ಯಾರು ಇತಿಹಾಸ ತಿಳಿಯುವರೋ ಅವರು ಭವಿಷ್ಯ ಬರೆಯುತ್ತಾರೆ. ಯಾರಿಗೆ ಇತಿಹಾಸ ಇಲ್ಲ ಅವರಿಗೆ ಭವಿಷ್ಯವಿಲ್ಲ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ನೋಡಿದಾಗ ಅವರು ಭಾರತ ಮಾತೆಯ ರಕ್ಷಣೆಗೆ ಹುಟ್ಟಿದ್ದರು.  ಭವಾನಿ ತಾಯಿ ಪ್ರತ್ಯಕ್ಷವಾಗಿ ಆಶೀರ್ವಾದ ಮಾಡಿದ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರಿಗೆ ದಿವ್ಯ ಶಕ್ತಿ ಹಾಗೂ ದೈವಿ ಶಕ್ತಿ ಇತ್ತು. ಯಾರಿಗೆ ದೈವಿ ಶಕ್ತಿ ಇರುತ್ತದೆಯೋ ಅವರು ಜೀವನದಲ್ಲಿ ಇಡೀ ಜಗತ್ತನ್ನು ಎದುರು ಹಾಕಿಕೊಳ್ಳಲು ಸಿದ್ದರಿರುತ್ತಾರೆ ಎನ್ನುವುದಕ್ಕೆ ಶಿವಾಜಿ ಮಹಾರಾಜರು ಉದಾಹರಣೆ ಎಂದರು. ನಾನು ಪುಣಾದ ಸಿಂಹಗಢಕ್ಕೆ ಭೇಟಿ ನೀಡಿದ್ದೆ ಶಿವಾಜಿ ಮಹಾರಾಜರ ಹೋರಾಟ ಅಲ್ಲಿಂದ ಪ್ರಾರಂಭವಾಗಿ ದೈತ್ಯ ಮೊಗಲ್ ಸಾಮ್ರಾಜ್ಯ ಎದುರಿಸಿದ್ದರು. ಮೊಗಲ್ ಸಾಮ್ರಾಜ್ಯ ಪರ್ಷಿಯಾದಿಂದ ಹಿಡಿದು ಭೂತಾನ್ ವರೆಗೂ ಇತ್ತು. ಆಗ ದಕ್ಚಿಣದಲ್ಲಿ ಬಹುಮನಿ ಸಾಮ್ರಾಜ್ಯ ಇತ್ತು. ಅವರವರ ನಡುವೆ ಸಂಘರ್ಷವಾದಾಗ ಮೊಗಲರ ಕೈಮೇಲಾಯಿತು. ಅವರು ದಕ್ಷಿಣದಲ್ಲಿ ಸಾಮ್ರಜ್ಯ ವಿಸ್ತರಿಸಲು ತೀರ್ಮಾನಿಸಿದಾಗ ಅವರನ್ನು ಒಬ್ಬ ಯುವಕ ತಡೆಯುತ್ತಾನೆ ಎಂದು ಮೊಗಲರು ಎಂದೂ ಊಹಿಸಿರಲಿಲ್ಲ. ಶಿವಾಜಿ ಮಹಾರಾಜರು ವಿನೂತನ ಯುದ್ದ ತಂತ್ರ ಅನುಸಿರಿಸಿ ಅವರು ವಿಂದ್ಯ ಪರ್ವತ, ನರ್ಮಾದಾ ನದಿ ಕೆಳಗೆ ಮೊಗಲರು ಬಾರದಂತೆ ನೋಡಿಕೊಂಡರು. ಆದ್ದರಿಂದ ಅವರಿಗೆ ದೊಡ್ಡ ಬೆಂಬಲ ಸಿಕ್ಕಿತ್ತು ಎಂದು ಹೇಳಿದರು.   ಈ ಸಂಧರ್ಭದಲ್ಲಿ ಚಂದ್ರ​‍್ಪಜ್ಜ ಕಾಳೆ, ಸುಭಾಸ ಚವ್ಹಾಣ, ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ಕರೆಯಪ್ಪ ಕಟ್ಟಿಮನಿ,ಶಿವಾನಂದ ಮ್ಯಾಗೇರಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು.