ಶೇಡಬಾಳದಲ್ಲಿ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಜಯಂತಿ

Chhatrapati Shivaji Jayanti was celebrated lavishly in Shedabala

ಶೇಡಬಾಳದಲ್ಲಿ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಜಯಂತಿ 

ಕಾಗವಾಡ  19 : ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಬುಧವಾರ ದಿ. 19 ರಂದು ಹಿಂದವಿ ಸಾರ್ಮಾಜ್ಯದ ಸ್ಥಾಪಕ ಹಿಂದೂಗಳ ಆರಾಧ್ಯ ಯುಗಪುರುಷ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಟ್ಟಣದ ಗಣ್ಯರು ಸೇರಿ ಪಟ್ಟಣದ ಪ್ರಮುಖ ಬಸವೇಶ್ವರ ದೇವಸ್ಥಾನದ ಬಳಿಯ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ ವೃತ್ತವೆಂದು ನಾಮಕರಣ ಮಾಡಿ, ಹಿರಿಯರು ಗಣ್ಯರು ಮಕ್ಕಳು ಸೇರಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಿದರು. ನೂತನ ವೃತದ ಫಲಕವನ್ನು ಮುಖಂಡರಾದ ವಿನೋದ ಬರಗಾಲೆ ಕುಮಾರ ಮಾಲಗಾಂವೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ ನಾಮದೇವ ಹೊನಕಾಂಬಳೆ ಸದಸ್ಯರಾದ ಬಾಬಾಸಾಬ ಮೇಸ್ತ್ರಿ ಸಚೀನ ಜಗತಾಪ, ರಾಜೇಂದ್ರ ಚೌಗುಲೆ ಪ್ರಕಾಶ ಮಾಳಿ ವಿಜಯ ಶಿಂಧೆ ಶಿವ ಪ್ರೇಮಿ ಗ್ರೂಪ್‌ನ ವಸಂತ ಶಿಂಧೆ ಸದಾಶಿವ ನಿಕ್ಕಂ ಅಮೀತ ಜಾಧವ ಅನೀಲ ಖಾಂಡೆ ಅಜೀತ ಜಾಧವ ಸಂಭಾ ಚವ್ಹಾನ ಚಂದ್ರಕಾಂತ ಜಾಧವ ಸಚೀನ ಲಾಳಗೆ ಉಮೇಶ ಶಿಂಧೆ ಪ್ರಕಾಶ ನಿಕ್ಕಂ ಚೇತನ ಕುಡಚೆ ಉದಯ ಸವದತ್ತಿ ಕುಮಾರ ಶಿಂಧೆ ಸೇರಿದಂತೆ ನೂರಾರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.