ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ ಜಯಂತಿ ಆಚರಣೆ
Chhatrapati Shivaji Jayanti celebrated by taluk administration
ಹುಬ್ಬಳ್ಳಿ 19: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಹಾಗೂ ಅವರ ವಿಶಿಷ್ಟ ಗುಣಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ಸಾಹಸ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಕೆಲಸ ಕಾರ್ಯಗಳಾಗಬೇಕು. ಶಿವಾಜಿ ಮಹಾರಾಜರು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಮಹಾನ ನಾಯಕರಾಗಿದ್ದಾರೆ. ಅವರ ಹೆಸರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಮಹೇಶ ಭಗವಂತ ಗಸ್ತೆ ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಎಂದ ಕೂಡಲೇ ನಮಗೆ ತಿಳಿದು ಬರುವುದು ದೇಶಭಕ್ತಿ, ಸ್ವಾಭಿಮಾನ, ತ್ಯಾಗ ಮತ್ತು ಧೈರ್ಯ ಎಂಬ ನಾಲ್ಕು ಗುಣಗಳು. ಶಿವಾಜಿ ಮಹಾರಾಜರಲ್ಲಿ ಕಂಡು ಬಂದಂತಹ ಗುಣಗಳು ಬೇರೆ ರಾಜರುಗಳಲ್ಲಿ ಅಷ್ಟಾಗಿ ಕಂಡು ಬಂದಿರುವುದಿಲ್ಲ. ಅವರ ಈ ಗುಣಗಳು ಪ್ರಸ್ತುತ ದಿನಗಳಲ್ಲಿಯೂ ಕಾಣಬಹುದು. ಶಿವಾಜಿ ಮಹಾರಾಜರು ಎರಡು ನೂರು ವರ್ಷಗಳ ಹಿಂದೆ ಉತ್ತಮ ಆಡಳಿತವನ್ನು ನೀಡಿದ್ದಾರೆ. ಅವರು ನೀಡಿದ ಉತ್ತಮ ಆಡಳಿತದ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕಾಗಿದೆ. ಶಿವಾಜಿ ಮಹಾರಾಜರು ಅಷ್ಟ ಪ್ರಧಾನ ಮಂಡಳಿಯ ವ್ಯವಸ್ಥೆಯಿಂದ ರಾಜ್ಯಭಾರವನ್ನು ಮಾಡಿದ್ದಾರೆ. ಶಿವಾಜಿ ಮಹಾರಾಜರಲ್ಲಿದ್ದ ಧೈರ್ಯ, ನಾಯಕತ್ವದ ಗುಣವನ್ನು ಮಕ್ಕಳಿಗೆ ತಿಳಿಸಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಿದರೆ ಮುಂದೊಂದು ದಿನ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗುತ್ತಾರೆ. ಒಬ್ಬ ತಾಯಿ ಮನಸ್ಸು ಮಾಡಿದರೆ ಒಬ್ಬ ಪುಟ್ಟ ಮಗುವನ್ನು ಮಹಾರಾಜರನ್ನಾಗಿ ಮಾಡಬಹುದು ಎಂದರು.
ಸಮಾಜದ ಮುಖಂಡರಾದ ಗುರುನಾಥ್ ಉಳ್ಳಿಕಾಶಿ ಮಾತನಾಡಿ, ಶಿವಾಜಿ ಮಹಾರಾಜರು ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿದ್ದರು. ಮಕ್ಕಳಿಗೆ ಮೊಬೈಲ್ ಕೊಡುವುದು ಬಿಟ್ಟು ಶಿವಾಜಿ ನಾಯಕರಂತಹ ಇತಿಹಾಸದ ಪುಸ್ತಕಗಳು ಹಾಗೂ ಅವರ ಸಿನಿಮಾಗಳನ್ನು ತೋರಿಸಿದಾಗ ಶಿವಾಜಿಯವರ ತ್ಯಾಗ, ಶೌರ್ಯ, ಸ್ವಾಭಿಮಾನ ಮಕ್ಕಳಿಗೆ ತಿಳಿಯುತ್ತದೆ. ಆಗ ಶಿವಾಜಿಯವರ ಹೆಸರು ಅಜರಾಮರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ.ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಸಮಾಜದ ಮುಖಂಡರಾದ ಸುನೀಲ್ ದಳವಿ, ನಾರಾಯಣ ವೈದ್ಯ, ಅರುಣ ಶಿರ್ಕೆ, ಮಹೇಶ್, ಶೈಲೇಶ ಹೊನ್ನಳ್ಳಿ, ಮಹೇಂದ್ರ ಚವ್ಹಾಣ್, ವಿದ್ಯಾ ಪವಾರ, ಲೀಲಾವತಿ ಕದಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 