ಚದುರಂಗ ಸ್ಪಧರ್ೆ: ಸಮ್ಮೇದ ಶೇಠೆ ಪ್ರಥಮ

ಚದುರಂಗ ಸ್ಪಧರ್ೆ: ಸಮ್ಮೇದ ಶೇಠೆ ಪ್ರಥಮ

ಲೋಕದರ್ಶನ ವರದಿ

ಮಾಂಜರಿ 14: ಬೇನಾಡಿ ಗ್ರಾಮದಲ್ಲಿ ಚೆಸ್ ಅಸೋಸಿಯೇಶನ್ ವತಿಯಿಂದ ಗುಲಾಬರಾವ ಪಾಟೀಲ ಸಮುದಾಯ ಭವನದಲ್ಲಿ ಏರ್ಪಡಿಸಿದ ಮುಕ್ತ ಅಂತರ್ ರಾಜ್ಯ ಮಟ್ಟದ ಚದುರಂಗ ಸ್ಪಧರ್ೆಯಲ್ಲಿ ಕೊಲ್ಲಾಪುರದ ಸಮ್ಮೇದ ಶೇಠೆ ಪ್ರಥಮ ಸ್ಥಾನ ಪಡೆದು 7001 ರೂ. ಬಹುಮಾನ ತನ್ನದಾಗಿಸಿಕೊಂಡರು.

ದ್ವಿತೀಯ ಅನೀಶ ಗಾಂಧಿ ಕೊಲ್ಲಾಪೂರ, ಮುದಸರ್ ಪಟೇಲ ಮಿರಜ ತೃತೀಯ ಮತ್ತು ಉತ್ಕರ್ಶ ಲೋಮಟೆ ನಾಲ್ಕನೇ ಬಹುಮಾನ ಪಡೆದರು. ಅಭಿಷೇಕ ಪಾಟೀಲ ಮಿರಜ, ತುಷಾರ ಶಮರ್ಾ ಕೊಲ್ಲಾಪೂರ, ವೈಭವ ಭೈರಾಟೆ ಪುಣೆ, ಕೌಸ್ತುಬ ಗೋಟೆ ಇಚಲಕರಂಜಿ, ದೀಪಕ ಕಾಂಬಳೆ ಕೊಲ್ಲಾಪೂರ, ಪ್ರತೀಶ ಶಹಾ ಬೇನಾಡಿ, ಅಲಕಾ ಮಡಿವಾಳರ ಬೆಳಗಾವಿ, ವಿಶಾಲ ಪಟವರ್ಧನ್ ಕೊಲ್ಲಾಪೂರ, ನಿಹಾಲ ಮಹಾಂತ ಸಾಂಗಲಿ, ಅಭಿಷೇಕ ಸಾಂಗಲೆ ರತ್ನಾಗಿರಿ, ಅನಿಕೇತ ಬಾಪಟ ಸಾತಾರಾ, ಮಹೇಂದ್ರ ವಗ್ಗನ್ನವರ ಗೋಕಾಕ, ಮತ್ತು ಪ್ರಜ್ವಲ್ ಮುಧಾಳೆ ಹುಪರಿ ಇವರುಗಳು ಸಮಾಧಾನಕರ ಬಹುಮಾನ ಪಡೆದರು.

ಹಿರಿಯರ ವಿಭಾಗದಲ್ಲಿ ರಾಜೇಂದ್ರ ಸಾಳುಂಕೆ ಸಾಂಗಲಿ ಪ್ರಥಮ ಮತ್ತು ಸದಾಶಿವ ಕದಮ್ ಡಿಗ್ರಜ ದ್ವಿತೀಯ ಬಹುಮಾನ ಪಡೆದರು, ಮಹಿಳೆಯರ ವಿಭಾಗದಲ್ಲಿ ಶೃತಿ ಭೋಸಲೆ ರೇಂದಾಳ ಪ್ರಥಮ, ಶಾಂಭವಿ ಬಾಲಿಗಡೆ ಸಾಂಗಲಿ ದ್ವಿತೀಯ ಸ್ಥಾನ ಪಡೆದರು. ಶಾಲಾ ವಿದ್ಯಾಥರ್ಿ ಮತ್ತು ವಿದ್ಯಾಥರ್ಿಗಳ ಸ್ಪಧರ್ೆಗಳು ಜರುಗಿದವು. 

ಪ್ರವೀಣಭಾಯಿ ಶಹಾ ಸ್ಪಧರ್ೆಗಳನ್ನು ಉದ್ಘಾಟಿಸಿದರು. ಅಜೀತರಾವ ಪಾಟೀಲ, ಅಶೋಕ ಪಾಟೀಲ, ಸುರಜ ಪಾಟೀಲ, ರಾಜೇಂದ್ರ ಪೋತದಾರ, ಸಂಜಯ ದೇಸಾಯಿ, ಸುನೀಲ ಶಹಾ, ತಾನಾಜಿ ಗುರವ, ಧನಂಜಯ ಪಾಟೀಲ ಮತ್ತು ವಿಸ್ವಾಸ ಪಾಟೀಲ ಬಹುಮಾನ ವಿತರಿಸಿದರು. ದಯಾನಂದ ಸಜ್ಜನ್ನವರ, ಭರತ ಪಾಟೋಳೆ, ಬಾಬಾಸಾಬ ಮಗದುಮ್ಮ, ಕರಣ ಪರೀಟ, ದೀಪಕ ವಾಯಚಳ ಮುಂತಾದವರಿದ್ದರು.