ಲೋಕದರ್ಶನ ವರದಿ
ತಾಳಿಕೋಟೆ 24:ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿರುವ ಮಾಳನೂರ ಕೇರೆಯಲ್ಲಿಯ ನೀರಿನ ಪ್ರಮಾಣವನ್ನು ಪುರಸಭೆ ಆಡಳಿತ ಮಂಡಳಿಯ ಸದಸ್ಯರುಗಳು, ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ ಮಾತನಾಡಿ ಪಟ್ಟಣದ ಜನರಿಗೆ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ಸಿಹಿ ನೀರು ಕೆರೆಯಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಗೊಳಿಸಿಕೊಳ್ಳಲಾಗಿದೆ ಈಗಾಗಲೇ ನಾರಾಯಣಪೂರ ಎಡದಂಡೆ ಕಾಲುವೆಯ ಮುಖಾಂತರ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದಾರೆ ಬೇಸಿಗೆಯ ಸಮಯದಲ್ಲಿ ಮತ್ತೇ ನೀರು ಬಿಡುವ ಸಾಧ್ಯತೆಗಳಿದ್ದು ಮುನ್ನೇಚ್ಚರಿಕೆ ಕ್ರಮವಾಗಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳಲಾಗಿದೆ ಈ ಭಾರಿಯ ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವದಿಲ್ಲಾವೆಂದರು.
ಈ ಸಮಯದಲ್ಲಿ ಪುರಸಭಾ ಅಧ್ಯಕ್ಷೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಮಶಾಕ ಚೋರಗಸ್ತಿ, ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ಮುಖ್ಯಾಧಿಕಾರಿ ಎಸ್.ಡಿ.ನಾಯಕ, ಕಿರಿಯ ಅಭಿಯಂತರ ಶಂಕರಗೌಡ ಪಾಟೀಲ, ಮೊದಲಾದವರು ಇದ್ದರು.