ಲೋಕದರ್ಶನ ವರದಿ
ಧಾರವಾಡ05: ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯದ ಬಿಐಆರ್ಟಿ ಸಂಪನ್ಮೂಲ ಶಿಕ್ಷಕಿ ಸುಮಿತಾ ಹಿರೇಮಠ ಹಾಗೂ ತಾಲೂಕಿನ ಹಂಗರಕಿ ಸರಕಾರಿ ಶಾಲೆಯ ಸಹಶಿಕ್ಷಕಿ ಸಕ್ಕು ರಾಯಣ್ಣವರ ಅವರಿಗೆ ಅಪ್ನಾದೇಶ ಅಕ್ಷರ ರತ್ನ ರಾಜ್ಯ ಪ್ರಶಸ್ತಿ ದೊರೆತಿದೆ.
ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲಾ ಘಟಕ ಹಾಗೂ ಧಾರವಾಡ ಅಪ್ನಾದೇಶ ಬಳಗದ ಸಹಯೋಗದೊಂದಿಗೆ ಮೈಸೂರಿನ ಬರಡನಪುರಮಠದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಧರ್ಮಸೇನಾ ಅವರು ಉಭಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಪರಮಶಿವಮೂತರ್ಿ ಸ್ವಾಮೀಜಿ, ಅಕ್ಷರದವ್ವ ಲೂಸಿ ಸಾಲ್ಡಾನಾ, ಗುರು ತಿಗಡಿ, ವೆಂಕಟೇಶಯ್ಯ, ಅಶೋಕ ಸಜ್ಜನ, ಎಲ್.ಐ. ಲಕ್ಕಮ್ಮಣವರ, ರುದ್ರಪ್ಪ ಕುಲರ್ಿ, ಪಿ. ಮಹೇಶ, ಮಂಜುನಾಥ ಬಿ.ಎಸ್. ಉಪಸ್ಥಿತರಿದ್ದರು.