ನೀವು ದೇವರ ಜಪ ಮಾಡಿಕೊಂಡು ಸ್ವರ್ಗ ಸೇರಿ, ವೆಂಕಟೇಶ್ ಹೆಗಡೆ
ಬಳ್ಳಾರಿ 19: ನಗರದಲ್ಲಿ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ರಾಜ್ಯ ಸಂಯೋಜಕರು ಪ್ರಚಾರ ಸಮಿತಿಯ ವೆಂಕಟೇಶ್ ಹೆಗಡೆಯವರು ಮಾತನಾಡಿ, ಕೇಂದ್ರ ಸರ್ಕಾರದ ಗೃಹ ಮಂತ್ರಿಗಳಾದ ಅಮಿತ್ ಶಾ ರವರೇ,ದೇವರ ಜಪ ಮಾಡಿ ಸ್ವರ್ಗ ಬೇಕಿಲ್ಲ ನಮಗೆ, ನಮಗೆ ಬೇಕಿರುವುದು ಅಂಬೇಡ್ಕರ್ ಕಂಡ ಸಮ ಸಮಾಜ. ಅಂಬೇಡ್ಕರ್ ಎಂದು ದೇವರ ಜಪ ಮಾಡುವ ಅಥವಾ ಅವರನ್ನು ದೇವರು ಎಂದು ಜಪ ಮಾಡಿಸಿಕೊಳ್ಳುವ ಕನಸು ಕಂಡವರಲ್ಲ. ಅವರು ಬಯಸಿದ್ದು ದೇವರ ಹೆಸರಲ್ಲಿ ಮೇಲ್ವರ್ಗ ಮಾಡುವ ತಾರತಮ್ಯ ನಿವಾರಣೆಯಾಗಿದೆ.ಕೇಂದ್ರ ಗೃಹ ಸಚಿವರಾದ ತಮಗೆ ಸಂವಿಧಾನದ ಮೌಲ್ಯ ತಿಳಿದಿಲ್ಲ ಎಂಬುದು ಜಗಜ್ಜಾಹೀರು, ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ ಈ ಹಿಂದೆ ಮರ್ಯಾದ ಪುರುಷೋತ್ತಮ ರಾಮ ಆಳಿದ ದೇಶ ಇದು ಎನ್ನುವುದಾದರೆ ರಾಮನ ಕಾಲದಲ್ಲಿ ಇದ್ದ ಸುಭೀಕ್ಷ ರಾಜ್ಯ ರಾಮನದ್ದಾದರೆ,ಇಂದು ನಮ್ಮ ದೇಶ ಬ್ರಿಟಿಷ್ ದಾಸ್ಯದಿಂದ ಮುಕ್ತಿ ಹೊಂದಿ ವಿಶ್ವಮಟ್ಟದಲ್ಲಿ ಬೆಳೆದು ನಿಲ್ಲಲು ಕಾರಣ ಆಗಿದ್ದು ಇದೆ ಅಂಬೇಡ್ಕರ್ ಎಂಬ ಮರ್ಯಾದಾ ಪುರುಷೋತ್ತಮ ಆ ಕಾರಣಕ್ಕೆ ಅಂಬೇಡ್ಕರ್ ಕೊಡುಗೆ ನಿಮಗೆ ಗೊತ್ತಿಲ್ಲ, ಹಾಗೂ ಅದರ ಗೋಜಿಗೂ ನೀವು ಹೋಗಲ್ಲ.
ದಿನದ 24 ತಾಸು ಮೋದಿ ಮೋದಿ ಎಂದು ಜಪ ಮಾಡುವ ನಿಮಗೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಬದಲಾಗಬೇಕು. ಈ ದೇಶಕ್ಕೆ ಮೇಲ್ವರ್ಗ ಮಾತ್ರ ಕೊಡುಗೆ ನೀಡಿದ್ದು ಬೇರೆ ಯಾರ ಕೊಡುಗೆಯೂ ಇಲ್ಲ ಎಂದು ನಿಮ್ಮ ಪೂರ್ವಜರು ತಲೆ ತಲಾಂತರದಿಂದ ಬಿಂಬಿಸಿಕೊಂಡಿ ಬಂದಿದ್ದಾರೆ. ಆದರೆ ಅಂಬೇಡ್ಕರ್ ಎಂಬ ಒಂದು ಹೆಸರು ನಿಮ್ಮ ಕಾರ್ಯವನ್ನು ಸುಳ್ಳು ಬಿಂಬಿಸುವುದನ್ನು ಬಯಲು ಮಾಡಿದ್ದು ನಿಮಗೆ ಸಹಿಸಲು ಆಗುತ್ತಿಲ್ಲ. ನೀವಿಂದು ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸುತ್ತೀರಿ ಅಂದರೆ ಅದು ಅಂಬೇಡ್ಕರ್ ಕೊಟ್ಟ ಭಿಕ್ಷೆಯಾಗಿದೆ ಎನ್ನುವುದನ್ನು ಮರೆಯಬೇಡಿ, ಅಂಬೇಡ್ಕರ್ ಇರಾದೆ ಹೋಗಿದ್ದರೆ ಈ ದೇಶದಲ್ಲಿ ಸಂವಿಧಾನದ ಬದಲು ಮನು ಸ್ಮೃತಿ ಇರುತ್ತಿತ್ತು. ಬಹುಶಃ ಇದೆ ಕಾರಣಕ್ಕೆ ನೀವು ಅಂಬೇಡ್ಕರ್ ಅಂದರೆ ಭಯ ಬೀಳುತ್ತಿರ ಬಹುದು. ಕೇವಲ ಕಾಂಗ್ರೆಸ್ ಅಲ್ಲ ಪ್ರತಿಯೊಬ್ಬ ಭಾರತೀಯ ಅಂಬೇಡ್ಕರ್ ಹೆಸರು ಜಪ ಮಾಡುತ್ತಾರೆ.
ನೀವು ಬೇಕಿದ್ದರೆ ದೇವರ ಜಪ ಮಾಡಿಕೊಂಡು ಸ್ವರ್ಗ ಸೇರಿ. ನಾವು ಅಂಬೇಡ್ಕರ್ ಜಪ ಮಾಡಿಕೊಂಡು ನಮ್ಮ ಭಾರತವನ್ನೇ ಜಗತ್ತಿನ ಸ್ವರ್ಗ ಮಾಡಿಸುತ್ತೇವೆ. ಅವರ ಆದೇಶ ಪಾಲನೆ, ಕೊಟ್ಟ ಸಂದೇಶ, ಜೀವನದ ಹೋರಾಟ ಎಲ್ಲವೂ ಶುಭೀಕ್ಷ ಭಾರತ ಕಟ್ಟಲು ಇರುವ ಬ್ಲೂ ಪ್ರಿಂಟ್. ಅದು ನಿಮಗೆ ಅರ್ಥ ಆದರೆ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿದರು.