ಬಡವರಿಗೆ ಸಂತೋಷ ಗೊಳಿಸುವುದೇ ಹಬ್ಬವೆಂದು ಭಾವಿಸಿರುವ ಚಂದ್ರಶೇಖರ ಬುರಾಣಪುರ ಶ್ಲ್ಯಾಘನೀಯ

Chandrashekar Buranapura is commendable for believing that making the poor happy is a festival

ಬಡವರಿಗೆ ಸಂತೋಷ ಗೊಳಿಸುವುದೇ ಹಬ್ಬವೆಂದು ಭಾವಿಸಿರುವ ಚಂದ್ರಶೇಖರ ಬುರಾಣಪುರ ಶ್ಲ್ಯಾಘನೀಯ 

ವಿಜಯಪುರ 16: ನಿರ್ಗತಿಕ, ಬಡ ಕುಟುಂಬಗಳಿಗೆ ರಂಜಾನ್ ಹಬ್ಬದ ಪ್ರಯುಕ್ತ ಚಂದ್ರಶೇಖರ ಬುರಾಣಪುರ ಕುಟುಂಬದ ವತಿಯಿಂದ ಸುಮಾರು 150 ಕುಟುಂಬಕ್ಕೆ ಆಹಾರ ಕಿಟ್ ನಗರದ ಮುಳಗಸಿಯಲ್ಲಿ ನೀಡಲಾಯಿತು. ಜಿಲ್ಲಾ ಪಂಚಾಯತ್ ಸಾಂಕಿಕ ಅಧಿಕಾರಿ ರಾ ಬಹಾದ್ಧೂರ ಮಾತನಾಡಿ, ರಂಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಕ್ಕೆ ಆಹ್ವಾನ ಕೋರಿ ಆಹಾರ ಕಿಟ್ ವಿತರಣೆ ಮಾಡಿರುವುದು ಸಂತಸ ತಂದಿದೆ. ಇವರು ದೀಪಾವಳಿ, ರಮಜಾನ್ ಮುಂತಾದವ ಯಾವುದೇ ಹಬ್ಬವಿದ್ದರು ಬಡವರಿಗೆ ಆಹಾರ ಕಿಟ್ ನಿಡುವುದು, ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುವ ಮನೋಭಾವನೆಯೂ ನಿಜಕ್ಕೂ ಶ್ಲ್ಯಾಘನೀಯ ಚಂದ್ರಶೇಖರ ಬುರಾಣಪೂರ ಕುಟುಂಬವು ಬಡ ಬಲಿದರಿಗೆ ಇದೇ ರೀತಿಯಾಗಿ ಸಹಾಯ ಮಾಡುವಲ್ಲಿ ಮುಂದಾಗಲಿ ದೇವರು ಇನಷ್ಟು ದಾನ ಮಾಡಲು ಶಕ್ತಿ ಕರುಣಿಸಲಿ ಎಂದರು. ಇದೇ ಸಂದರ್ಭದಲ್ಲಿ ಪೂಜಾ ಬುರಾಣಪೂರ ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದಿಂದ ನಮ್ಮ ತಂದೆ ತಾಯಿ ಸರ್ವಜನಾಂಗಕ್ಕೂ ಆಹಾರ ಕಿಟ್ ವಿತರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇಂತಹ ತಂದೆ ತಾಯಿಗೆ ಮಗಳಾಗಿರುವುದು ನಾನೇ ಪುಣ್ಯವಂತೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಲೆಕ್ಕಾಧಿಕಾರಿ ಅನ್ವರ ನದಾಫ್ ಮಾತನಾಡಿ, ಚಂದ್ರಶೇಖರ ಬುರಾಣಪೂರ ಇವರು ಜಾತಿ ಮತ ತೊರೆದು ಸರ್ವಜನಾಂಗದ ಕಷ್ಟಕ್ಕೇ ಮುಂದಾಗುವ ಕಾಳಜಿವುಳ್ಳ ವ್ಯಕ್ತಿಯಾಗಿದ್ದಾರೆ. ಪ್ರತಿ ಹಬ್ಬದಲ್ಲಿ ತಮ್ಮ ಸಂತೋಷವನ್ನು ಬಡವರಿಗೆ ಸಹಾಯ ಮಾಡುವುದರ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ ಆದ ಕಾರಣ ಇವರು ಕುಟುಂಬಕ್ಕೇ ಭಗವಂತ ನೆಮ್ಮದಿ ನೀಡಲೆಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅಂಬಿಕಾ ಚಂದ್ರಶೇಖರ ಬುರಾಣಪೂರ, ಹಾಗೂ ಕುಟುಂಬದ ಸದಸ್ಯರು ಇದ್ದರು.