ಚಂದ್ರಶೇಖರ ನುಗ್ಲಿ ಅಮಾನತು ಖಂಡಿಸಿ ಪ್ರತಿಭಟನೆ

ಧಾರವಾಡ 06: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಹಾಗೂ ಶಾಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಹೊರಿಸಿ ಚಂದ್ರಶೇಖರ ನುಗ್ಲಿ ಅವರನ್ನು ಅಮಾನತುಗೊಳಿಸಿರುವದನ್ನು ಖಂಡಿಸಿ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ವತಿಯಿಂದ ಶಹರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. 

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತು. 

ಸಕರ್ಾರಿ ಶಾಲೆಗಳ ಸಬಲೀಕರಣದ ಹಿತದೃಷ್ಠಿಯಿಂದ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಭಯಮುಕ್ತ ವಾತಾವರಣ ನಿಮರ್ಾಣವಾಗಬೇಕು. ಬೆಳಗಾವಿ ವಿಭಾಗದ ಎಲ್ಲಾ ಅಮಾನತ್ತು ಪ್ರಕರಣಗಳನ್ನು ತಕ್ಷಣ ರದ್ದು ಪಡಿಸಬೇಕು. ಈ ಹಿಂದೆ ತಡೆಹಿಡಿಯಲಾದೆಲ್ಲಾ ವೇತನ ಬಡ್ತಿಗಳನ್ನು ಸಂಬಂಧಿಸಿದ ಶಿಕ್ಷಕರುಗಳಿಗೆ ವಾಪಸ್ ನೀಡಬೇಕು. ಸಕರ್ಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೂ ಸೇರಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಕರ್ಾರಕ್ಕೆ ಸಲ್ಲಿಸಿರುವ ಸಕರ್ಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಿ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಆಗ್ರಹಿಸಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ನುಗ್ಲಿ ಅವರನ್ನು ಏಕಾಏಕಿಯಾಗಿ ಶಾಲೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಹೊರಿಸಿ ಅಮಾನತುಗೊಳಿಸಿರುವ ಅಧಿಕಾರಿಯು ಕಾನೂನಿನ ಸಹಜ ನ್ಯಾಯದ ಎಲ್ಲಾ ತತ್ವಗಳನ್ನು ಗಾಳಿಗೆ ತೂರಿ ಸವರ್ಾಧಿಕಾರ ಮೆರೆದಿದ್ದಾರೆ. ಕನರ್ಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳ ಪ್ರಕಾರ ಯಾವುದೇ ನೌಕರ ತನ್ನ ಕೆಲಸದಲ್ಲಿ ನಿರ್ಲಕ್ಷತೆ ಅಥವಾ ಬೇಜಾವಾಬ್ದಾರಿ ತೋರಿದ್ದರೇ, ಅಂತಹ ನೌಕರನಿಗೆ ನಿಯಮಾನುಸಾರ, ಕಾರಣ ಕೇಳಿ ನೋಟೀಸ್ ನೀಡಿ, ಸಹಜ ನ್ಯಾಯದ ತತ್ವಗಳಿಗೆ ಅನುಗುಣವಾಗಿ ವಿಚಾರಣೆ ನಡೆಸಿ ಕ್ರಮಕೈಗೊಳ್ಳಬೇಕು, ಇದು ಕಾನೂನು ಬದ್ಧ ನಿಯಮ, ಆದರೆ ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಬಿರಾದಾರ ಅವರು ನಿಯಮಗಳನ್ನು ಗಾಳಿಗೆ ತೂರಿ ನುಗಿ ಅವರ ಮೇಲೆ ಕಾನೂನು ಬಾಹಿರ ಕ್ರಮ ಜರುಗಿಸಿರುವುದನ್ನು ಸಂಘವು ಖಂಡಿಸುತ್ತದೆ. ನುಗ್ಲಿ ಅವರ ಅಮಾನತ್ತು ಆದೇಶವನ್ನು ರದ್ದುಗೊಳಿಸಿ, ಅವರು ವಗರ್ಾವಣೆಗೊಂಡ ಸ್ಥಳಕ್ಕೆ ಹಾಜರಾಗಲು ತಕ್ಷಣ ಬಿಡುಗಡೆಗೊಳಿಸಬೇಕು ಇಲ್ಲದಿದ್ದರೆ ಶಿಕ್ಷಕರ ಬೇಡಿಕೆಗಳ ಜೊತೆ ರಾಜ್ಯ ಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿತು. 

ನೌಕರರ ಸಂಘದಿಂದ ಹೊರಟ ಪ್ರತಿಭಟನಾ ರ್ಯಾಲಿಯು ಜುಬಲಿ ವೃತ್ತ, ಕೋರ್ಟ ವೃತ್ತ ಮೂಲಕ 6 ಸಾವಿರಾರು ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಕರ್ಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತು.  

ರಾಜ್ಯ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ನುಗ್ಲಿ, ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜಾಧ್ಯಕ್ಷ ಹೆಚ್. ಕೆ. ಮಂಜುನಾಥ, ರಾಜ್ಯ ಸಹಕಾರ್ಯದಶರ್ಿ ಯುವರಾಜ, ಸಂಘಟನಾ ಕಾರ್ಯದಶರ್ಿ ಭಾರತಿ ಪದ್ಮಲತಾ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ ಕೆಡಶ್ಯಾಳ ಎಸ್. ಎಫ್. ಸಿದ್ದನಗೌಡರ ಹಾಗೂ ಇನ್ನಿತರ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು