ಚನಬಸಯ್ಯ ಹಿರೇಮಠ, ಕಲಾವಿದೆ ನೀತಾ ಹಿರೇಮಠ ಸನ್ಮಾನ
ವಿಜಯಪುರ : ನಗರದ 21 ರ ಲಕ್ಷ್ಮೀ ನಗರದಲ್ಲಿ ನವೆಂಬರ್ 1 ರಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಟ್ರಸ್ಟ್ ಉಪಾಧ್ಯಕ್ಷ ಚನಬಸಯ್ಯ ಸಿ. ಹಿರೇಮಠ ಇವರಿಗೆ ಹಾಗೂ ವಿಜಯಪುರ ನಗರದ ಯೋಗಾಪುರ ಕಾಲೋನಿ ಚಲನಚಿತ್ರ ಕಲಾವಿದ ರಂಗ ಭೂಮಿ ಕಲಾವಿದೆ ನೀತಾ ಹಿರೇಮಠ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಡಾವಣೆಯ ಹಿರಿಯರಾದ ಈಶ್ವರ ಹೂಗಾರ, ಶಕುಂತಲಾ ಹೂಗಾರ ದಂಪತಿಗಳು, ಸಾಯಬಣ್ಣ ಕಮತಗಿ ಆರ್ ಎಸ್. ವಾಲಿಕಾರ ಅರ್ಜುನ ಸಾರವಾಡ, ಪ್ರದೀಮ ಮಿಸ್ಕಿನ, ವಿರೇಶ ಹಿರೇಮಠ ಇತರರು ಇದ್ದರು.