ಲೋಕದರ್ಶನ ವರದಿ
ಬೆಳಗಾವಿ 07: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಫುಟ್ ಬಾಲ್ ತಂಡ ಇತ್ತೀಚಿಗೆ ನಿಪ್ಪಾಣಿಯಲ್ಲಿ ನಡೆದ ಫುಟ್ ಬಾಲ್ ಪಂದ್ಯಾವಳಿಯಯನ್ನು ಗೆದ್ದು ಚಾಂಪಿಯನಶಿಪ್ ಪ್ರಶಸ್ತಿಯನ್ನು ಗಳಿಸಿತು. ಜಿಐಟಿ ಅರ್ಹತಾ ಸುತ್ತಿನಲ್ಲಿ ನಿಡಸೋಶಿ ಇಂಜಿನಿಯರಿಂಗ್ ಕಾಲೇಜ್, ನಿಪ್ಪಾನಿಯ ಕೆ ಎಲ್ ಇ ಇಂಡಿಪೆಂಡೆಂಟ್ ಕಾಲೇಜು, ಬೆಳಗಾವಿಯ ಕೆಎಲ್ಎಸ್ ಗೋಗಟೆ ಕಾಮಸರ್್ ಕಾಲೇಜ್ ಮತ್ತು ನಿಪ್ಪಾಣಿಯ ವಿಎಸ್ಎಂ ತಂಡಗಳನ್ನು ಸೋಲಿಸಿ ಫೈನಲ್ಗೆ ತಲುಪಿತು. ಫೈನಲ್ನಲ್ಲಿ ಜಿ ಐ ಟಿ ನಿಪ್ಪಾನಿಯ ದೇವ್ಚಂದ್ ಪದವಿ ಕಾಲೇಜನ್ನು 2-0 ಗೋಲುಗಳಿಂದ ಸೋಲಿಸಿತು. ಜಿ ಐ ಟಿ ವಿದ್ಯಾಥರ್ಿಗಳಾದ ಕು. ರಾಹುಲ್ ಗುರವ್ ಅವರನ್ನು ಅತ್ಯುತ್ತಮ ಫಾರ್ವಡರ್್ ಆಟಗಾರ ಎಂದು ಗೌರವಿಸಲಾಯಿತು ಮತ್ತು ಕರಣ್ ಮಾನೆ ಅತ್ಯುತ್ತಮ ರಕ್ಷಣಾ ಆಟಗಾರ ಪ್ರಶಸ್ತಿ ಪಡೆದರು.
ಜಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ ಆರ್ ಕುಲಕಣರ್ಿ, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕಣರ್ಿ, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ ಮೇದಾರ, ದೈಹಿಕ ಶಿಕ್ಷಣ ವಿಭಾಗದ ನಿದರ್ೆಶಕ ಡಾ. ಪಿ ವಿ ಕಡಗದಕೈ, ಕ್ರಾಂತಿ ಕುರಣಕರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.