ಶೇಡಬಾಳ 16: ಶೇಡಬಾಳ ಪಟ್ಟಣದ ಶ್ರೀ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ಅಷ್ಟಾನಿಕ ಮಹಾಪರ್ವದಲ್ಲಿ ಸಿದ್ಧಚಕ್ರ ಆರಾಧನಾ ಮಹಾಮಹೋತ್ಸವ ಕಾರ್ಯಕ್ರಮವು ಶುಕ್ರವಾರ ದಿ. 16 ರಂದು ಪ್ರಾರಂಭವಾಯಿತು.
ಇಲ್ಲಿನ ಪುರಾತನ ಮಂದಿರವಾಗಿರುವ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ 9 ದಿನಗಳ ಕಾಲ ಜರುಗಲಿರುವ ಸಿದ್ಧಚಕ್ರ ಆರಾಧನಾ ಮಹಾಮಹೋತ್ಸವದ ದಿವ್ಯ ಸಾನಿಧ್ಯವನ್ನು 105 ಆಯರ್ಿಕಾ ನವೀನಮತಿ ಮಾತಾಜಿ, 105 ಆಯರ್ಿಕಾ ನೀತಿಮತಿ ಮಾತಾಜಿ ವಹಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ದಿ. 16 ರಂದು ಮುಂಜಾನೆ ಧ್ವಜಾರೋಹಣ, ಜಲಕುಂಭ ಮೆರವಣಿಗೆ, ಪಂಚಾಮೃತ ಅಭಿಷೇಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗೆ ಮಹಾಶಾಂತಿ ಮಂತ್ರ ಪೂಜೆ ಜರುಗಿತು. ಈ ಆರಾಧನಾ ಮಹೋತ್ಸವದಲ್ಲಿ ಗ್ರಾಮದ ನೂರಾರು ಮಹಿಳೆಯರು ಭಾಗವಹಿಸಿದ್ದರು. ಭರತೇಶ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ಅಭಯ ಉಪಾಧ್ಯೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉಗಾರ ಬುದ್ರುಕದ ಅಭಯ ಹವಲೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸಾಯಂಕಾಲ ಆರತಿ, ಜಪ ತಪ, ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ಶೇಡಬಾಳ ಪಟ್ಟಣದ ಶಾಂತಿನಾಥ ಜಿನ ಮಂದಿರದಲ್ಲಿ ಜರುಗುತ್ತಿರುವ ಸಿದ್ಧಚಕ್ರ ಆರಾಧನಾ ಮಹೋತ್ಸವದಲ್ಲಿ ಪೂಜೆ ನೆರವೇರಿಸುತ್ತಿರುವ ಸುಮಂಗಲೆಯರು