ಕೇಂದ್ರ ಸರಕಾರದ ಬಜೆಟ್ ಕನ್ನಡಿಯೊಳಗಿನ ಗಂಟಿದ್ದಂಗ: ಜ್ಯೋತಿ ವ್ಯಂಗ್ಯ
ಕೊಪ್ಪಳ 02: ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕನ್ನಡಿಯೊಳಗಿನ ಗಂಟಿದ್ದಂಗ ಎಂದು ಗ್ಯಾರಂಟಿ ಪ್ರಾಧಿಕಾರ ಸಮಿತಿ ಸದಸ್ಯೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಯಾವುದೇ ಪ್ರಯೋಜನ ಇಲ್ಲ, ನೀರಾವರಿಗೆ ಹಣವಿಲ್ಲ ಕೇವಲ ಸುಳ್ಳು ಭರವಸೆಗಳು, ಹಿಂದೆ ಕರೋನ ಸಂದರ್ಭದಲ್ಲಿ 20 ಲಕ್ಷ ಕೋಟಿಯ ಪ್ಯಾಕೇಜ್ ನೋಡಿದ್ದೇವೆ, ಯಾರಿಗೆ ಏನು ಕೊಟಟರು ಎಂಬ ಮಾಹಿತಿಯೇ ಇಲ್ಲ. 10 ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಡುತ್ತೇನೆ ಎಂಬ ಮಂಕು ಬೂದಿ ಎರಚಿದರು, ಈಗ 20 ಲಕ್ಷ ಉದ್ಯೋಗ ಸೃಷ್ಟಿ ಎನ್ನುತ್ತಿದ್ದಾರೆ, ಆದರೆ ರೈತರ ಬಗ್ಗೆ ಮಹಿಳೆಯರ ಬಗ್ಗೆ ಈಗಲೂ ಸ್ಪಷ್ಟವಾದ ಯೋಜನೆಗಳು ಇಲ್ಲ. ಎಸ್.ಸಿ. ಎಸ್ಟಿ ಅವರಿಗೆ ಕೇಂದ್ರ ಯಾವುದೇ ಯೋಜನೇ ತಂದರೂ ವಸಾಹತುಶಾಯಿ, ಬಂಡವಾಳಶಾಯಿ ಮತ್ತು ಮನುವಾದಿ ಬ್ಯಾಂಕರ್ಸ ಇರೋವರೆಗೂ ಯಾವುದೇ ಯೋಜನೆಗಳು ನಿಜವಾದ ಬಡವರಿಗೆ ಶೋಷಿತರಿಗೆ ದಲಿತರಿಗೆ ಸಿಗುವದಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಳ್ಳುಳ್ಲೀ ಈರುಳ್ಳಿ ತಿನ್ನದ ನಿರ್ಮಲಾ ಅವರಿಗೆ ರೈತರ ಬಗ್ಗೆ ಗೊತ್ತಿಲ್ಲ, ಅದೇ ಆಹಾರದ ಮುಖ್ಯ ವಸ್ತುವಾಗಿರುವ ದಲಿತರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಿಂದ ಆಯ್ಕೆಯಾದರೂ ಸಹ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಇದ್ದಾರೆ. 10 ವರ್ಷದಿಂದ ಒಂದೇ ಕಥೆ ಹೇಳುವ ಬಿಜೆಪಿಗರಿಗೆ ಸರಿಯಾದ ಮಾಹಿತಿ ಇಲ್ಲವೇ ಇಲ್ಲ. ಅವರು ಕೇವಲ ತಮ್ಮವರ ಓಲೈಕೆಗೆ ಹೇಳಿಕೆ ನೀಡುತ್ತಾರೆ. ಬಜೆಟ್ ಅಷ್ಟು ಸುಲಭಕ್ಕೆ ತಿಳಿಯುವಂತಹದ್ದಲ್ಲ, ಮತ್ತು ಬಜೆಟ್ ಮಂಡಿಸಿದ ತಕ್ಷ್ಷಣ ಎಲ್ಲವೂ ನಮಗೆ ದಕ್ಕುತ್ತವೇ ಎಂತಲೂ ಇಲ್ಲ ಎಂದು ಗೊಂಡಬಾಳ ಹೇಳಿಕೆ ನೀಡಿದ್ದಾರೆ.