ಕೇಂದ್ರ ಸರ್ಕಾರದ ಬಜೆಟ್ : ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ಒತ್ತಾಯ

Central Government Budget: Compulsion to earmark for education sector

ಕೇಂದ್ರ ಸರ್ಕಾರದ ಬಜೆಟ್ : ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ಒತ್ತಾಯ

ರಾಣೇಬೆನ್ನೂರ 01:  ಕೊಠೊರಿ ಆಯೋಗದ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಶೇ.10ಅ ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ಒತ್ತಾಯಿಸುತ್ತಾ ಬಂದಿದೆ ಆದರೆ ಈ ಬಾರಿ ಬಜೆಟ್ ನಲ್ಲಿ ಕೇವಲ 1.28 ಕೋಟಿ ರೂಪಾಯಿಗಳು  ಮಾತ್ರ ಮೀಸಲಿಡಲಾಗಿದೆ. ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದಂತಾಗಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ರವರು ಮಂಡಿಸಿರುವ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಹಂಚಿಕೆಗಳಲ್ಲಿ ಹೆಚ್ಚಳದ ಕುರಿತು ಘೋಷಣೆ ಮಾಡಲಾಗಿದೆ ಹೊರತು, ನೂತನ ಕಾಲೇಜ್ ಗಳ ಸ್ಥಾಪನೆ ಪ್ರಸ್ತಾಪವಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ಕಾಯ್ದೆಯಲ್ಲಿ ಅನೇಕ ದೋಷಗಳಿವೆ ಎಂದು  ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಅಭಿಪ್ರಾಯ ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿ ರದ್ದು ಪಡೆಸುವ ಕುರಿತು ಯಾವುದೇ ಕ್ರಮವಿಲ್ಲ.  ಆರ್ಥಿಕ, ಸಾಮಾಜಿಕವಾಗಿ ಹಿನ್ನೆಲೆಯಿಂದ ಉನ್ನತ ಶಿಕ್ಷಣ ವಂಚಿತರಿಗೆ ಶಿಕ್ಷಣಕ್ಕೆ ಕರೆ ತರುವ ಪ್ರಮುಖ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮೂಲಕ ಶಿಕ್ಷಣದ ಮಹತ್ವವನ್ನು ಕೊಲ್ಲಲು ಅವರು ತೀರ್ಮಾನಿಸಿ ದಂತಾಗಿದೆ.ಹಿಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನವೇ ಬಿಡುಗಡೆ ಮಾಡಿಲ್ಲ ತಾಂತ್ರಿಕ ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ   ಎಂದು ಹುಸಿ ಭರವಸೆಯ ಬಜೆಟ್ ಇದಾಗಿದೆ . ಸರಕಾರಿ ಶಾಲಾ-ಕಾಲೇಜ್‌-  ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಈ ಬಜೆಟ್ ನಲ್ಲಿ ಗಮನ ನೀಡಿಲ್ಲ. ದೇಶದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ನಿವಾರಣೆಗೆ ಸ್ಪಷ್ಟ ಮಾರ್ಗಸೂಚಿಯನ್ನು ಬಜೆಟ್ ಸೂಚಿಸದೆ ಯುವಜನರಿಗೆ ವಂಚನೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ನಿರುದ್ಯೋಗ ಹೆಚ್ಚಳವಾಗಲಿದೆ-  ಗೌತಮ್ ಸಾವಕ್ಕನವರ  ಎಸ್‌ಎಫ್‌ಐ ಅಧ್ಯಕ್ಷ, ರಾಣೇಬೆನ್ನೂರು.ಊ1-ಖಓಖ05-ಓಇಘಖ. ಂಓಆ. ಕಊಓಖಿಓ.