ಡಿ.26 ರಿಂದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ-ಶಾಸಕ ಹಿಟ್ನಾಳ
ಕೊಪ್ಪಳ 23: ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ.ಅದು ಕರ್ನಾಟಕದ ಬೆಳಗಾವಿಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮಕ್ಕಿಗ ಶತಮಾನದ ಸಂಭ್ರಮ ಇದರ ಸವಿ ನೆನಪಿಗಾಗಿ ಬೆಳಗಾವಿಯಲ್ಲಿ ಇದೇ ದಿನ 26 ಮತ್ತು 27ರಂದು ಎರಡು ದಿನಗಳ ಕಾಲ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು, ಅವರು ಸೋಮವಾರ ಕೊಪ್ಪಳದ ನಗರಸಭೆ ಸಭಾಂಗಣದಲ್ಲಿ ಏರಿ್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದವರುಬ್ರಿಟೀಷರ ಕಪಿಮುಷ್ಠಿಯಿಂದ ಭಾರತವನ್ನು ಪಾರು ಮಾಡಿದವರಲ್ಲಿ ಮಹಾತ್ಮ ಗಾಂಧಿ ಅಗ್ರಗಣ್ಯರು ಸ್ವಾತಂತ್ರ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರವನ್ನೂ ಮರೆಯುವಂತಿಲ್ಲ ಬಾಪೂಜಿ ಕೂಡ ಅದೇ ಕಾಂಗ್ರೆಸ್ ವೇದಿಕೆಯ ಮೂಲಕವೇ ಆಂಗ್ಲರ ವಿರುದ್ಧ ಚಳುವಳಿ ನಡೆಸಿದರು.
ಹೀಗೆ 1924 ಡಿ.26, 27 ರಂದು ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಎರಡು ದಿನ ಕಾಂಗ್ರೆಸ್ ಅಧಿವೇಶನ ಯಶಸ್ವಿಯಾಗಿ ಜರುಗಿತ್ತು ಅವತ್ತಿನ ಮಟ್ಟಿಗೆ ಅದು ಇಡೀ ದೇಶ ಅಷ್ಟೇ ಅಲ್ಲದೇ ಬ್ರಿಟಿಷರ ಗಮನವನ್ನೂ ಸೆಳೆದಿತ್ತು ಎಂದು ಶಾಸಕರು ವಿವರಿಸಿದರುಮುಂದುವರೆದು ಮಾತನಾಡಿಬಾಪೂಜಿ ಜೊತೆಗೆ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿ ಹಲವಾರು ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ ಆಗಮಿಸಿತ್ತು. ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ತಂಡ, ನಾ.ಸು.ಹರ್ಡೇಕರ್ ಸ್ಥಾಪಿಸಿದ್ದ ರಾಷ್ಟ್ರೀಯ ಸೇವಾದಳ ಸೇರಿ ಮತ್ತಿತರ ನಾಯಕರ ಅವಿರತ ಶ್ರಮದಿಂದ ಬೆಳಗಾವಿ ಅಧಿವೇಶನ ಯಶಸ್ವಿಯಾಗಿತ್ತು ಎಂದು ಹೇಳಿದ ಅವರು ಬಾಪೂಜಿ ಜೊತೆಗೆ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿ ಹಲವಾರು ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ ಆಗಮಿಸಿತ್ತು. ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ತಂಡ, ನಾ.ಸು.ಹರ್ಡೇಕರ್ ಸ್ಥಾಪಿಸಿದ್ದ ರಾಷ್ಟ್ರೀಯ ಸೇವಾದಳ ಸೇರಿ ಮತ್ತಿತರ ನಾಯಕರ ಅವಿರತ ಶ್ರಮದಿಂದ ಬೆಳಗಾವಿ ಅಧಿವೇಶನ ಯಶಸ್ವಿಯಾಗಿತ್ತು1910 ರಲ್ಲಿ ಸ್ವಾತಂತ್ರ್ಯ ಚಳುವಳಿಯು ವೇಗವನ್ನು ಪಡೆಯುತ್ತಿದ್ದ ಸಮಯದಲ್ಲಿ, ಗಾಂಧೀಜಿ ಅವರು ಬಾಲಗಂಗಾಧರ ತಿಲಕ್ ಅವರೊಂದಿಗೆ ಬೆಳಗಾವಿಗೆ ಬಂದಿದ್ದರು. ಬೆಳಗಾವಿಯ ಹಲವಾರು ಯುವ ಮುಖಂಡರು ಅ ಸಮಯದಲ್ಲಿ ಬೆಳಗಾವಿಗೆ ಭೇಟಿ ನೀಡದಂತೆ ಗಾಂಧೀಜಿಯನ್ನು ಒತ್ತಾಯಿಸಿದ್ದರು. ಆದರೆ ಮಹಾತ್ಮರು ಧೈರ್ಯ ಮಾಡಿ ಭೇಟಿ ನೀಡಿದರು. ನನ್ನ ಸಾವು ಮಾತ್ರ ಬೆಳಗಾವಿಗೆ ಭೇಟಿ ನೀಡುವುದನ್ನು ತಡೆಯಲು ಸಾಧ್ಯ. ಅದನ್ನು ಹೊರತುಪಡಿಸಿದರೆ ಬೇರೆ ಯಾರಿಂದಲೂ ಬೆಳಗಾವಿಗೆ ನಾನು ಭೇಟಿ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿ ಹೇಳಿದ್ದನ್ನು ಎಂದು ಸುಭಾಷ್ ಕುಲಕರ್ಣಿ ಸ್ಮರಿಸಿದ್ದಾರೆ ಎಂದು ತಿಳಿಸಿದರು 1916 ರಲ್ಲಿ ಏಪ್ರಿಲ್ 27 ರಿಂದ ಮೇ 1 ರವರೆಗೆ ಈ ಪ್ರದೇಶದಲ್ಲಿ ಸ್ವಾತಂತ್ರ ಚಳುವಳಿಯನ್ನು ಹೆಚ್ಚಿಸಲು ಗಾಂಧಿಯವರು ಬೆಳಗಾವಿಯಲ್ಲಿದ್ದರು ಮುಂದೆ, ಅವರು 1920 ರಲ್ಲಿ ನವೆಂಬರ್ 8 ಮತ್ತು 9 ರಂದು ಬೆಳಗಾವಿಗೆ ಭೇಟಿ ನೀಡಿದರು. ನಂತರ ಅವರು 1924 ರಲ್ಲಿ 24 ನೇ ಕಾಂಗ್ರೆಸ್ ಅಧಿವೇಶನದಲ್ಲಿ 15 ದಿನಗಳ ಕಾಲ ಬೆಳಗಾವಿಯಲ್ಲಿ ಇದ್ದರು.
ಮಹಾತ್ಮ ಗಾಂಧಿಯವರು 1927 ರಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗದಲ್ಲಿ ಏಪ್ರಿಲ್ 18 ಮತ್ತು 19 ರಂದು ಬೆಳಗಾವಿಯಲ್ಲಿ ತಂಗಿದದರು. ನಂತರ, ಅವರು ಮಾರ್ಚ್ 4, 1934 ರಂದು ಮತ್ತೆ ಇಲ್ಲಿಗೆ ಬಂದರು ಮತ್ತು ಏಳು ದಿನಗಳ ಕಾಲ ಬೆಳಗಾವಿ, ನಿಪ್ಪಾಣಿ ಮತ್ತು ಶೇಡಬಾಳ (ಅಥಣಿ ತಾಲ್ಲೂಕು) ಗಳಲಿ ತಂಗಿದ್ದರು. ಎಪ್ರಿಲ್ 17 ರಿಂದ 23 ರವರೆಗೆ ಗಾಂಧಿ ಸೇವಾ ಸಂಘದ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾಗ ಬೆಳಗಾವಿ ಸಮೀಪದ ಹುದಲಿಯಲ್ಲಿರುವ ಕುಮಾರಿ ಆಶ್ರಮದಲ್ಲಿ ಗಾಂಧಿ ತಂಗಿದ್ದರು.ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆ ಸುವರ್ಣಸೌಧದ ಮುಂಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಪುತ್ಥಳಿಅನಾವರಣ ಗೊಳ್ಳಲಿದೆ. ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ವಿವರಣೆ ನೀಡಿದರು ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಉಪಾಧ್ಯಕ್ಷೆ ಅಶ್ವಿನಿ ಗದಗಿನ್ ಮಠ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಪೌರಾಯುಕ್ತರಾದ ಗಣಪತಿ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು,