ಚಿಕ್ಕೋಡಿಯಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ
ಚಿಕ್ಕೋಡಿ 15 : ಬಂಜಾರ ಸಮಾಜದ ಜನರಲ್ಲಿ ಆತ್ಮಸ್ಥೈರ್ಯ ತುಂಬಿ ಸನ್ಮಾರ್ಗದ ಹಾದಿ ತೋರಿ ಸಮಾಜದ ಎಳ್ಗೆಗಾಗಿ ನಿರಂತರ ಶ್ರಮಿಸಿದ ಸಂತ ಸೇವಾಲಾಲ ದೇಶ ಕಂಡ ಶ್ರೇಷ್ಠ ಧಾರ್ಮಿಕ, ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಆದರ್ಶ ತತ್ವಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎಲ್.ಪಿ.ಲಮಾಣಿ ಹೇಳಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾ ಭವನದಲ್ಲಿ ಚಿಕ್ಕೋಡಿ ತಾಲೂಕಾ ಬಂಜಾರಾ ಫೌಂಡೇಶನ ವತಿಯಿಂದ ಹಮ್ಮಿಕೊಂಡ 286 ನೇ ಸಂತ ಸೇವಾಲಾಲ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು, ಇಡೀ ಜೀವನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾರು ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ ಜನತೆಗೆ ವ್ಯಸನ ಮುಕ್ತರಾಗಿ ಬೋಧಿಸಿದ ಸೇವಾಲಾಲರು ಸತ್ಯೆ ಅಹಿಂಸೆ ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು ಎಂದರು.
ಅಧ್ಯಕ್ಷತೆಯನ್ನು ಬಂಜಾರ ಸಮಾಜ ಫೌಂಡೇಶನ ಅಧ್ಯಕ್ಷ ಬಿ.ಎಂ.ನಾಯಿಕ ವಹಿಸಿದ್ದರು.ಈ ಸಂದರ್ಭದಲ್ಲಿ ಪುಂಡಲಿಕ ಲಮಾಣಿ ಶಿವು ರಾಠೋಡ ರಾಜು ಲಮಾಣಿ, ಅಶೋಕ ರಾಠೋಡ, ಪುಂಡಲಿಕ ನಾಯಿಕ ಶಿವು ಲಮಾಣಿ ಶ್ರೀನಿವಾಸ ನಾಯಿಕ ಪ್ರಕಾಶ ರಾಠೋಡ ಮುಂತಾದವರು ಇದ್ದರು.ಉಪನ್ಯಾಸಕ ಎಂ.ಜಿ.ನಾಯಿಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.