ಲೋಕದರ್ಶನ ವರದಿ
ಯರಗಟ್ಟಿ 29: ಇಲ್ಲಿನ ಮಹಾಂತ ದುರದುಂಡೇಶ್ವರ ಮಠ, ಮರಡಿ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಕಾತರ್ಿಕ ಮಾಸದ ನಿಮಿತ್ಯ ಸಹಸ್ರ ದೀಪೋತ್ಸವ ಜರುಗಿತು.
ಗ್ರಾಮದ ಸಾವಿರಾರು ಮಹಿಳೆಯರು ತಂಡೋಪ ತಂಡವಾಗಿ ಕಡಬು, ಹೋಳಿಗೆ, ಪಾಯಸ, ಹಪ್ಪಳ ಬಗೆಬಗೆಯ ಸಿಹಿ ತಿಂಡಿಗಳನ್ನು ದೇವರಿಗೆ ನೈವದ್ಯ ಅಪರ್ಿಸಿದರು, ಸಹಸ್ರ ಪಣತಿಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಿ ಭಕ್ತಿಯ ಭಾವೈಕ್ಯತೆ ಮೆರೆದು ತಮ್ಮ ಇಷ್ಠಾರ್ಥಗಳು ಈಡೇರುವಂತೆ ಬೇಡಿಕೊಂಡರು. ನಂತರ ಮಹಾಪ್ರಸಾದ ಜರುಗಿತು.
ಈ ಸಂಧರ್ಭದಲ್ಲಿ ಅಶೋಕ ಹಾದಿಮನಿ, ಮಹಾಂತೇಶ ಜಕಾತಿ, ಕುಮಾರ ಹಿರೇಮಠ, ಎಮ್.ಬಿ.ವಾಲಿ, ಮೋಹನ ಹಾದಿಮನಿ, ರಾಜೇಂದ್ರ ವಾಲಿ, ಶಿವಾನಂದ ಕರ್ಜಗಿಮಠ, ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಹಂಜಿ, ದುಂಡಪ್ಪ ಉಪ್ಪಿನ, ಶಿವಲಿಂಗಪ್ಪ ವಾಲಿ, ಶಿವಾನಂದ ಉಪ್ಪಿನ, ಬಸಲಿಂಗಪ್ಪ ಬಳಿಗಾರ, ಈರಣ್ಣ ಶಿರೂರ, ಬಸವೇಶ್ವರ, ವೀರಭದ್ರೇಶ್ವರ ದೇವಸ್ಥಾನ ಹಾಗೂ ರದುಂಡೇಶ್ವರ ಮಠದ ಜಾತಾ ಕಮೀಟಿ ಸದಸ್ಯರು ಪಾಲ್ಗೊಂಡಿದ್ದರು.