ತಾಲೂಕು ಆಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ
ಹುಬ್ಬಳ್ಳಿ ಫೆ.10: ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಕಾಯಕ ಶರಣರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಅರ್ಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಶಾಲೆ ಮಕ್ಕಳು ಕಾಯಕ ಶರಣರ ವೇಷಭೂಷಣ ಧರಿಸಿ, ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ.ಬಿ. ಮಜ್ಜಗಿ , ಗ್ರೇಡ್ 2 ತಹಶೀಲ್ದಾರರಾದ ಜಿ.ವಿ.ಪಾಟೀಲ, ಸಮಾಜದ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಶಂಕರ ಅಜಮನಿ, ಧರ್ಮರಾಜ ಶಾಂಬೂಜಿ ,ಶಂಕರಾಜ್ ಕೋಳೂರು, ಶಿವಶಂಕರ ಭಂಡಾರಿ, ಭೀಮಣ್ಣ ಕೆರದಾಳ, ಶ್ರೀನಿವಾಸ ರಾಮಗೆರಿ, ಶೇಕಪ್ಪಾ ಯಾದಗಿರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.