ಗವಿಮಠ ಜಾತ್ರಾ ಪ್ರಯುಕ್ತ ಗವಿಶ್ರೀ ಕ್ರೀಡಾ ಉತ್ಸವ ಆಚರಣೆ
ಕೊಪ್ಪಳ 24: ಕೊಪ್ಪಳ ಜಿಲ್ಲೆಯಲ್ಲಿ ಐತಿಹಾಸಿಕವಾಗಿ ಧಾರ್ಮಿಕವಾಗಿ ಹಾಗೂ ಭಕ್ತಿ ಭರವಸೆಯಿಂದ ಜಿಲ್ಲೆ, ರಾಜ್ಯ, ವಿದೇಶಗಳಿಂದಲೂ ಕೂಡ ಭಕ್ತರು ಆಗಮಿಸಿ ನೇರವೆರಿಸುವ ಅಂದಾಜ 25 ಲಕ್ಷ ಅಧಿಕ ಭಕ್ತಾದಿಗಳು, ಜನರು ಸೇರುವಂತಹ ಗವಿಶ್ರೀ ಜಾತ್ರ ಮಹೋತ್ಸವ ಆಂಗವಾಗಿ ರಾಜ್ಯದ ಮಹಾಜನರು, ಯುವಜನರು, ಮಹಿಳೆಯರು, ರೈತರು, ಮಕ್ಕಳು, ಎಲ್ಲಾ ವರ್ಗದವರು ಕೂಡ ಸೇರಿಕೊಂಡು ಜಾನಪದ ಶೈಲಿಯ ಹಾಗೂ ಪ್ರಸ್ತುತ ಪ್ರಚಲಿತವಿರುವ ಆಟಗಳನ್ನು ಸೇರಿಸಿ ಜಾತ್ರಾ ನಿಮಿತ್ಯ ಗವಿಶ್ರೀ ಕ್ರೀಡಾ ಉತ್ಸವ- 2025 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕೆ ರಾಜಶೇಖರ್ ಹಿಟ್ನಾಳ್ ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರಿ್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ವಿವರಣೆ ನೀಡಿದ ಅವರುಸದರಿ ಕ್ರೀಡಾಕೂಟವನ್ನು ಕೊಪ್ಪಳ ಜಿಲ್ಲೆಯ ಗವಿಮಠ ಕೊಪ್ಪಳ, ಕೊಪ್ಪಳ ಜಿಲ್ಲೆಯ ಎಲ್ಲಾ ಗೌರವಾನಿತ ಜನಪ್ರತಿನಿಧಿಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯೋದ್ಯಮಿಗಳು ಕೊಪ್ಪಳ ಇವರ ಸಹಕಾರದಿಂದ ಹಾಗೂ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಶನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕುಸ್ತಿ ಸಂಘ, ಬ್ಯಾಡ್ಮಿಂಟನ್ ಅಸೋಶಿಯೇಶನ್, ಕಬಡ್ಡಿ ಹಾಗೂ ವಾಲಿಬಾಲ್ ಅಸೋಶಿಯೇಶನ್ ಹಾಗೂ ಇತ್ಯಾದಿ ಹಲವಾರು ಸಂಘ ಸಂಸ್ಥೆಗಳನ್ನ ಒಳಗೊಂಡು ಎಲ್ಲಾ ವರ್ಗದವರು ಮುಕ್ತವಾಗಿ ಭಾಗವಹಿಸುವ, ಆನಂದಿಸುವ ಹಾಗೇ ಗವಿಶ್ರೀ ಕ್ರೀಡಾಕೂಟ-2025ನ್ನು ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ 17 ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.ಪುರುಷ/ಮಹಿಳೆಯರಿಗೆ ಮುಕ್ತ,ವಾಲಿಬಾಲ್, ಕಬಡ್ಡಿ, ಮ್ಯಾರಾಥಾನ, ಶೆಟಲ್ ಬ್ಯಾಡ್ಮಿಂಟನ್, ಛದ್ಮವೇಷ, ದೇಹದಾರ್ಡ್ಯ, ಪಂದ್ಯಾವಳಿ ಏರಿ್ಡಸಲಾಗಿದೆ ಎಂದರುಪುರುಷರ ಆಹ್ವಾನಿತ ಕ್ರೀಡೆ : ಕ್ರಿಕೆಟ್, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿ.ಪುರುಷರ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ :ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಯುವಕರಿಂದ ಎತ್ತಿನ ಬಂಡಿ ಜಗ್ಗುವದು, ಸಂಗ್ರಾಣಿ ಕಲ್ಲು ಎತ್ತುವದು. ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ.ಪುರುಷರ/ ಮಹಿಳೆಯರ ಜಿಲ್ಲಾ ಮಟ್ಟದಲ್ಲಿ : ಹಗ್ಗ ಜಗ್ಗಾಟ ಸ್ಪರ್ಧೆಮಹಿಳೆಯರಿಗೆ ಜಿಲ್ಲಾ ಮಟ್ಟ : ರಂಗೋಲಿ, ಫ್ಲೋಬಾಲ್ ಸ್ಪರ್ಧೆಯನ್ನು ಏರಿ್ಡಸಲಾಗಿದೆ.
ವಿಶೇಷತೆ ಗವಿಶ್ರಿ ಕ್ರೀಡಾಕೂಟ-2025ನ್ನು ್ರ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಗಾಳಿಪಟ ಉತ್ಸವನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಹರಿಯಾಣದಿಂದಲೂ ಅನುಭವಿ ನುರಿತ ತಂಡಗಳು ಗವಿಶ್ರೀ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಗಾಳಿಪಟವನ್ನು ಪ್ರದರ್ಶನವನ್ನು ದಿನಾಂಕ :16.01.2025ರಂದು ಮಾಡಲಿದೆ. ಮಕ್ಕಳು ಯುವಕರಿಗೆ ಸ್ಫೂರ್ತಿ ತುಂಬುವಂತೆ ಮಕರ ಸಂಕ್ರಾತಿಯ ವಿಶೇಷವಾಗಿಯೆ ಬೃಹತ್ ಪ್ರಮಾಣದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ.ದಿನಾಂಕ:14.01.2025 ರಂದು ಸಂಜೆ 3.30 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಗವಿಮಠ ಆವರಣದಲ್ಲಿ ಆಯೋಜಿಸಲಾಗಿದೆ.ಗವಿಶ್ರೀ ಕ್ರೀಡಾಕೂಟದಲ್ಲಿ ರೈತರನ್ನು ಗಮನದಲ್ಲಿ ಇಟ್ಟುಕೊಂಡು ರೈತರನ್ನು ಖುಷಿಪಡಿಸುವ ಸಲುವಾಗಿರೈತರ ಜೀವನ ಅವಿಭಾಜ್ಯ ಅಂಗವಾದ ಎತ್ತು, ಚಕ್ಕಡಿ, ಇವುಗಳನ್ನು ಶೃಂಗಾರ ಪಡಿಸಿ ಸ್ಪರ್ಧೆಯನ್ನು ದಿನಾಂಕ:17.01.2025ರಂದು ತಾಲ್ಲೂಕ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿ ಗವಿಮಠಕ್ಕೆ ಮುಕ್ತಾಯಗೊಳಿಸಿ ಸ್ಪರ್ಧೆಯನ್ನು ಏರಿ್ಡಸಲಾಗಿದೆ.ಆದರಂತೆ, ರೈತ ಮಕ್ಕಳ ಯುವಜನರಿಗಾಗಿ ಶಕ್ತಿ ಪ್ರದರ್ಶನವಾಗಿ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯನ್ನು ವಿರಿ್ಡಸಲಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ ರಾಜಶೇಖರ್ ಹಿಟ್ನಾಳ ವಿವರಣೆ ನೀಡಿದರು,
ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಶ್ರೀನಿವಾಸ ಗುಪ್ತ ಮತ್ತು ಜೆಡಿಎಸ್ ಪಕ್ಷದ ಮುಖಂಡರಾದ ವೀರೇಶ್ ಮಹಾಂತಯ್ಯ ನಮ್ಮಠ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.