ಜ.24 ರಂದು ‘ಚಾಲಕರ ದಿನ’ ಆಚರಣೆ; ಸುರಕ್ಷಿತ ಚಾಲನೆ ಮಾಡಿದ್ದಕ್ಕಾಗಿ ಧನ್ಯವಾದಗಳು

Celebration of 'Driver's Day' on 24th January; Thank you for safe driving

ಜ.24 ರಂದು ‘ಚಾಲಕರ ದಿನ’ ಆಚರಣೆ; ಸುರಕ್ಷಿತ ಚಾಲನೆ ಮಾಡಿದ್ದಕ್ಕಾಗಿ ಧನ್ಯವಾದಗಳು 

ಬಳ್ಳಾರಿ 23 :ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಳ್ಳಾರಿ ವಿಭಾಗದ ವತಿಯಿಂದ ಜ.24 ರಂದು ‘ಚಾಲಕರ ದಿನ’ ಎಂದು ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು, ವಿಧ್ಯಾರ್ಥಿ-ವಿಧ್ಯಾರ್ಥಿನಿಯರು ಹಾಗೂ ಗ್ರಾಮಗಳ ಗಣ್ಯರಿಂದ ಕಕರಸಾ ನಿಗಮ, ಬಳ್ಳಾರಿ ವಿಭಾಗದ ಹೆಮ್ಮೆಯ ಚಾಲಕರಿಗೆ “ಸುರಕ್ಷಿತ ಚಾಲನೆ ಮಾಡಿದ್ದಕ್ಕಾಗಿ ಧನ್ಯವಾದಗಳು” ಎಂದು ವಿಶೇಷವಾಗಿ ಶುಭಾಷಯ ತಿಳಿಸಲು ಹಾಗೂ ಸಾಧ್ಯವಾದಲ್ಲಿ ಒಂದು ಗುಲಾಬಿ ಹೂ ನೀಡಿ ಶುಭ ಕೋರಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಅವರು ತಿಳಿಸಿದ್ದಾರೆ. 

ಕಕರಸಾ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುವ ಧ್ಯೇಯ ಹೊಂದಿದ್ದು, ಪ್ರಯಾಣಿಕರ ಸುರಕ್ಷತೆಯೇ ನಿಗಮದ ಪ್ರಥಮ ಆದ್ಯತೆಯಾಗಿದೆ. ಚಾಲಕರ ಶ್ರಮ, ಚಾಲನಾ ಚಾಣಾಕ್ಷತೆ, ರಸ್ತೆ ಸುರಕ್ಷತಾ ಕ್ರಮಗಳ ಅನುಸರಣೆಯಿಂದ ಪ್ರಯಾಣಿಕರಿಗೆ ಹಾಗೂ ನಿಗಮದಲ್ಲಿ ಅವರ ಸೇವೆ ಶ್ಲಾಘನೀಯವಾಗಿದೆ. ನಿಗಮದ ಚಾಲಕರ  ಕೊಡುಗೆಯನ್ನು ಗುರುತಿಸಿ, ಸಮಾಜದಲ್ಲಿ ಗೌರವಾನ್ವಿತ ಸ್ಥಾನ ನೀಡಿ, ಚಾಲಕರ ಸಮುದಾಯದ ನೈತಿಕತೆಯನ್ನು ಹೆಚ್ಚಿಸಲು ರಸ್ತೆ ಸುರಕ್ಷತಾ ಉಪಕ್ರಮದ ಭಾಗವಾಗಿ ಜ.24 ರಂದು ‘ಚಾಲಕರ ದಿನ’ ವನ್ನು ಆಚರಣೆ ಮಾಡಲಾಗುತ್ತಿದೆ. 

ಹಾಗಾಗಿ ಸಾರ್ವಜನಿಕ ಪ್ರಯಾಣಿಕರು ಬಳ್ಳಾರಿ ಕೇಂದ್ರೀಯ ಬಸ್ ನಿಲ್ದಾಣ, ನಗರ ಸಾರಿಗೆ ಬಸ್ ನಿಲ್ದಾಣ, ಕಂಪ್ಲಿ, ಕುರುಗೋಡು, ಕುಡತಿನಿ, ತೆಕ್ಕಲಕೋಟೆ, ಸಿರಿಗೇರಿ, ಸಿರುಗುಪ್ಪ, ಸಂಡೂರು ಮತ್ತು ಮೋಕಾ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಗ್ರಾಮಗಳ ಗಣ್ಯರಿಂದ ಕಕರಸಾ ನಿಗಮ, ಬಳ್ಳಾರಿ ವಿಭಾಗದ ಹೆಮ್ಮೆಯ ಚಾಲಕರಿಗೆ “ಸುರಕ್ಷಿತ ಚಾಲನೆ ಮಾಡಿದ್ದಕ್ಕಾಗಿ ಧನ್ಯವಾದಗಳು” ಎಂದು ಶುಭಾಷಯ ಕೋರಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.